ಮಹಿಳೆಯರು ಆರ್ಥಿಕವಾಗಿ ಸಬಲರನ್ನಾಗಿಸುವ ಗೃಹಲಕ್ಷ್ಮಿ ಯೋಜನೆ ನಿಲ್ಲಿಸುವ ಮಾತೇ ಇಲ್ಲ -ಮುಖ್ಯಮಂತ್ರಿ ಸಿದ್ದರಾಮಯ್ಯ ಸುವರ್ಣಸೌಧಕ್ಕೆ ಬಂದ ಗೃಹಲಕ್ಷ್ಮಿಯರು ಬೆಳಗಾವಿ, ಡಿಸೆಂಬರ್ 18: ಮಹಿಳೆಯರು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಸಬಲರನ್ನಾಗಿಸುವ ಗೃಹಲಕ್ಷ್ಮಿ ಯೋಜನೆಯನ್ನು ನಿಲ್ಲಿಸುವ ಮಾತೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಬೆಳಗಾವಿಯ ಸುವರ್ಣ ಸೌಧಕ್ಕೆ ಆಗಮಿಸಿದ್ದ ಗೃಹಲಕ್ಷ್ಮಿಯರ ಜೊತೆ ಸಂವಾದ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು. ಮನೆಯಲ್ಲಿ ಕಲಹ ತಂದಿದೆ ಎಂಬ ಬಿಜೆಪಿ ಆರೋಪ ಸುಳ್ಳು ಇಂದು ಗೃಹಲಕ್ಷ್ಮಿ ಯೋಜನೆಯ ಹಣದಿಂದ ನಾನಾ ಬದುಕಿನ ಅವಕಾಶಗಳನ್ನು ಸೃಷ್ಟಿಸಿಕೊಂಡ 25 ಕ್ಕೂ ಹೆಚ್ಚು ಮಂದಿ ಫಲಾನುಭವಿಗಳನ್ನು ಭೇಟಿ ಮಾಡಿ ಸಂವಾದ ನಡೆಸಿದ್ದೇನೆ. ಗೃಹಲಕ್ಷ್ಮಿ ಯೋಜನೆಯಿಂದ ಫಲಾನುಭವಿಗಳ ಜೀವನದಲ್ಲಿ ಆಗಿರುವ ಲಾಭಗಳ ಬಗ್ಗೆ ವಿವರಿಸಿದ್ದಾರೆ. ಬದುಕಿಗೆ ಹೊಸ ಚೈತನ್ಯ ನೀಡಿದ ಗೃಹಲಕ್ಷ್ಮಿ ಯೋಜನೆಯನ್ನು ಸಾಕಾರಗೊಳಿಸಿದ ಮುಖ್ಯಮಂತ್ರಿಗಳು, ಇಲಾಖೆಯ ಸಚಿವರು ಹಾಗೂ ಸರ್ಕಾರಕ್ಕೆ ಕೃತಜ್ಞರಾಗಿರುವುದಾಗಿ ಗೃಹಲಕ್ಷ್ಮಿಯರು ತಿಳಿಸಿದರು. ಗೃಹಲಕ್ಷ್ಮಿ ಯೋಜನೆಯಿಂದ ಒಂದೇ ಮನೆಯ ಅತ್ತೆ ಸೊಸೆಯ ಮಧ್ಯೆ ಜಗಳ ತಂದಿದೆ ಎಂದು…
Author: admin
ಸನ್ಮಾನ್ಯ ಅಮಿತ್ ಶಾ ಅವರೇ,ಮೊದಲಿಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಭಾರತೀಯ ಜನತಾ ಪಕ್ಷದ ಅಂತರಂಗದ ಅಭಿಪ್ರಾಯವನ್ನು ಬಹಿರಂಗವಾಗಿ ಧೈರ್ಯದಿಂದ ದೇಶದ ಮುಂದೆ ತೆರೆದಿಟ್ಟದ್ದಕ್ಕಾಗಿ ಮತ್ತು ಕೊನೆಗೂ ನಿಮ್ಮ ಜೀವಮಾನದಲ್ಲಿ ಒಂದು ಸತ್ಯವನ್ನಾದರೂ ಹೇಳಿದ್ದಕ್ಕೆ ನಿಮ್ಮನ್ನು ಅಭಿನಂದಿಸುತ್ತೇನೆ. ನಿಮ್ಮ ಮಾತಿನಿಂದ ನಮಗೆ ಆಶ್ಚರ್ಯವಾಗಿಲ್ಲ, ನಮಗೆ ಇದು ಗೊತ್ತಿತ್ತು. ಸಂಸತ್ ನಲ್ಲಿ (18-12-2024) ಆಡಿದ ನಿಮ್ಮ ಮಾತಿನಿಂದ ಇಡೀ ದೇಶಕ್ಕೆ ನಿಮ್ಮ ಅಂತರಂಗದ ಅರಿವಾಗಿದೆ.. ಬಾಬಾಸಾಹೇಬ್ ಅವರು ಕೊಟ್ಟ ಸಂವಿಧಾನದಡಿಯಲ್ಲಿಯೇ ಕಾರ್ಯನಿರ್ವಹಿಸುತ್ತಿರುವ ಸಂಸತ್ ನಲ್ಲಿ ನಿಂತು ಅವರ ಸ್ಮರಣೆಯನ್ನು ವ್ಯಸನ ಎಂದು ತುಚ್ಛೀಕರಿಸುವ ನಿಮ್ಮ ಧಾಷ್ಟ್ರಕ್ಕೆ ಶಹಭಾಸ್ ಅನ್ನಲೇಬೇಕು..ಅಮಿತ್ ಶಹಾ ಅವರೇ, ‘’ಬಾಬಾಸಾಹೇಬರ ಬಗ್ಗೆ ತಮಗೆ ಅಪಾರ ಅಭಿಮಾನ ಇದೆ, ಗೌರವ ಇದೆ, ನನ್ನ ಮಾತುಗಳನ್ನು ತಿರುಚಲಾಗಿದೆ’’ ಎಂದೆಲ್ಲ ಸ್ಪಷ್ಟೀಕರಣ ಕೊಟ್ಟು ಆತ್ಮವಂಚನೆ ಮಾಡಿಕೊಳ್ಳಬೇಡಿ. ಅದನ್ನು ಸಮರ್ಥಿಸಿಕೊಂಡು ದೇಶವನ್ನು ಎದುರಿಸಿ. ಅಂಬೇಡ್ಕರ್ ನಮಗೆ ವ್ಯಸನ ಅಲ್ಲ, ನಿತ್ಯ ಸ್ಮರಣೆ. ನಮ್ಮ ಉಸಿರು ಇರುವವರೆಗೆ, ಈ ಭೂಮಿಯಲ್ಲಿ ಸೂರ್ಯ-ಚಂದ್ರ ಇರುವವರೆಗೆ ಅಂಬೇಡ್ಕರ್ ಸ್ಮರಣೆ…
ಬಾಗಲಕೋಟ-ರಾಜ್ಯದಲ್ಲಿ ದಲಿತರು ಎದುರಿಸುತ್ತಿರುವ ಹಲವು ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಸರ್ಮಪಕವಾದ ಯೋಜನೆಗಳನ್ನು ರೂಪಿಸಬೇಕೆಂದು ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರಿಗೆ ರಾಜ್ಯ ಛಲವಾದಿ ಮಹಾಸಭಾ ಮನವಿ ಮಾಡಿದೆ.ಬಾಗಲಕೋಟ ಜಿಲ್ಲಾಧ್ಯಕ್ಷ ಪ್ರೇಮನಾಥ ಗರಸಂಗಿ ಅವರ ನೇತೃತ್ವದ ನಿಯೋಗ ಬೆಳಗಾವಿ ಸ್ವರ್ಣಸೌಧ ದಲ್ಲಿ ಬೇಟಿಯಾಗಿ ಮನವಿ ಮಾಡಿತು.ವಿಷಯದ ಗಂಭೀರತೆಯನ್ನು ಅರಿತ ನಾರಾಯಣಸ್ವಾಮಿ ಅವರು ಈ ಸಬಂಧ ತಾವು ಶೀಘ್ರದಲ್ಲಿ ದಲಿತ ಮುಖಂಡರ ಸಭೆಯನ್ನು ಕರೆದು ಸಮಾಲೋಚನೆ ಮಾಡಿ ಒಂದು ನಿರ್ಧಾರಕ್ಕೆ ಬರುವ ಅಶ್ವಾಸನೆಯನ್ನು ನೀಡಿದರು.ಮನವಿಯಲ್ಲಿ ಇನ್ನಿತರ ಬೇಡಿಕೆಗಳಾದ ಬಾಗಲಕೋಟ ತೋಟಗಾರಿಕೆ ವಿಶ್ವವಿದ್ಯಾಲಯಕ್ಕೆ ಒನಕೆ ಒಬ್ಬವ್ವನ ಹೆಸರು ಇಡುವದು ಹಾಗೂ ನವಬೌದ್ದರಿಗೆ ಗಣಕಿಕೃತ ಪ್ರಮಾಣ ಪತ್ರ ನೀಡುವದು ಸೇರಿದಂತೆ ಅನೇಕ ಸಮಸ್ಯೆಗಳ ಬಗ್ಗೆ ಪರಿಹಾಕ್ಕೆ ತಾವು ಪ್ರಾಮಾಣಿಕವಾಗಿ ಶ್ರಮಿಸುವದಾಗಿ ಭರವಸೆ ನೀಡಿದರು.ನಿಯೋಗದಲ್ಲಿ ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾ ಬಾಗಲಕೋಟ ಜಿಲ್ಲಾ ಘಟಕದ ಗೌರವಾಧ್ಯಕ್ಷ ಬಸವರಾಜ ಚಲವಾದಿ,ಪ್ರಧಾನಕಾರ್ಯದರ್ಶಿ ಎನ್.ಬಿ.ಗಸ್ತಿ,ಪದಾಧಿಕಾರಿಗಳಾದ ಮಹೇಶ ಬೀಳಗಿ,ಮನೋಹರ ಗರಸಂಗಿ,ಆನಂದ ನಾರಾಯಣಿ ಇದ್ದರು.
ಸಕ್ಕರೆ ನಾಡು ಎಂದು ಕರೆಯಲ್ಪಡುವ ನಮ್ಮ ಮಂಡ್ಯ ಜಿಲ್ಲೆಯು ಡಿಸೆಂಬರ್ 20 ರಿಂದ 22ರ ವರೆಗೆ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆತಿಥ್ಯಕ್ಕೆ ಸಜ್ಜಾಗಿದೆ. ಕನ್ನಡ ಮನಸ್ಸುಗಳನ್ನು ಒಂದುಗೂಡಿಸುವ, ಕನ್ನಡವನ್ನು ಕಟ್ಟುವ ಇಂತಹ ಅದ್ಧೂರಿ ಕಾರ್ಯಕ್ರಮವನ್ನು ಆಯೋಜಿಸುವುದು ಗೌರವದ ಜೊತೆ ಜವಾಬ್ದಾರಿಯೂ ಹೌದು. ಮಂಡ್ಯ ಸಾಂಸ್ಕೃತಿಕ ಮತ್ತು ಸಾಹಿತ್ಯಕ ಕೇಂದ್ರವಾಗಿ ತನ್ನ ವಿಶಿಷ್ಟ ಗುರುತನ್ನು ಪ್ರದರ್ಶಿಸಲು ಇದು ಉತ್ತಮ ವೇದಿಕೆಯಾಗಿದೆ. ಕನ್ನಡ ಸಾಹಿತ್ಯವು ನಮ್ಮ ಮಂಡ್ಯದ ಮಣ್ಣಿನಲ್ಲಿ ಆಳವಾಗಿ ಬೇರೂರಿದೆ. ಬೇಸಾಯವನ್ನೇ ನಂಬಿ ಬದುಕುತ್ತಿರುವ ಇಲ್ಲಿನ ರೈತರ ಹೊಲಗಳಲ್ಲಿ ಹಲವಾರು ಜನಪದ ಗೀತೆಗಳು ಹುಟ್ಟಿಕೊಂಡಿವೆ. ಜೀವನದಿ ಕಾವೇರಿಯ ತಟದಲ್ಲಿ ಕುಳಿತ ಕವಿಯ ಮನದಲ್ಲಿ ಅದೆಷ್ಟೋ ಕವಿತೆಗಳು ಜನ್ಮತಾಳಿವೆ. ಇಲ್ಲಿನ ಪ್ರತಿಯೊಂದು ಹಳ್ಳಿಯೂ ಈ ಕನ್ನಡ ಮಣ್ಣಿನ ಬಗ್ಗೆ ಒಂದೊಂದು ಕಥೆ ಹೇಳುತ್ತವೆ. ‘ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣತಮತಿಗಳ್” ಎಂದು ಶ್ರೀವಿಜಯನು ಕವಿರಾಜ ಮಾರ್ಗದಲ್ಲಿ ಹೇಳಿರುವಂತೆ ಕನ್ನಡ ನಾಡಿನ ಜನರು ಸಾಹಿತ್ಯ ರಚನೆಯಲ್ಲಿ ನಿಜವಾಗಿಯೂ ಚತುರರಾಗಿದ್ದಾರೆ. ಇತಿಹಾಸವನ್ನು ನೋಡಿದರೆ ಸಾಹಿತ್ಯ…
ಬಾಗಲಕೋಟೆ ; ತಾಲೂಕಿನ ರಾಂಪುರ ಕೆ”ಜಿಬಿ ಬ್ಯಾಂಕಿನ ಬೀಗ ಮುರಿದು ಬಂಗಾರ, ಹಣ ದೋಚಲು ಪ್ರಯತ್ನಿಸಿದ್ದ ಹಾಗೂ ಶಿರೂರಿನ ಕೆನರಾ ಬ್ಯಾಂಕ್ ದರೋಡೆಗೆ ಹೊರಟಿದ್ದ ಕಳ್ಳರ ತಂಡವನ್ನು “ಡಿಯುವಲ್ಲಿ ಬಾಗಲಕೋಟೆ ಪೋಲಿಸರು ಯಶಸ್ವಿಯಾಗಿದ್ದಾರೆ.ಬಾಗಲಕೋಟೆ ನಗರ ಹಾಗೂ ಗ್ರಾ”ಣ ಪ್ರದೇಶಗಳಲ್ಲಿ ಕಳ್ಳತನ, ಬ್ಯಾಂಕ್ ದರೋಡೆ ಪ್ರಯತ್ನದ ಪ್ರಕರಣಗಳು ನಡೆದಿರುವ “ನ್ನೆಲೆಯಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ನಿರ್ದೇಶನದ ಮೇರೆಗೆ ಕಳ್ಳರ ದಸ್ತಗಿರಿಗೆ ನಾಕಾಬಂದಿಗಳನ್ನು ಏರ್ಪಡಿಸಲಾಗಿತ್ತು.ಡಿ.೧೧ ರಂದು ಗ್ರಾ”ಣ ಸಿಪಿಐ ನೇತೃತ್ವದಲ್ಲಿ ಪಿಎಸ್‌ಐ ಶರಣಬಸಪ್ಪ ಸಂಗಳದ ಹಾಗೂ ಸಿಬ್ಬಂದಿಯವರು ರಾತ್ರಿ ಹೊನ್ನಾಕಟ್ಟಿ ಕ್ರಾಸ್ ಬಳಿ ನಾಕಾಬಂದಿ ಕರ್ತವ್ಯ ನಡೆಸುತ್ತಿದ್ದಾಗ ಮಧ್ಯರಾತ್ರಿ ೧-೨೫ ರ ಹೊತ್ತಿಗೆ ಬಾಗಲಕೋಟೆ ನವನಗರದ ಕಡೆಂದ ಬಂದ ಕಾರೊಂದನ್ನು ತಡೆದು ತಪಾಸಣೆ ನಡೆಸಿದಾಗ ಕಾರಿನಲ್ಲಿ ಅಕ್ಷಿಜನ್ ಸಿಲಿಂಡರ್, ಅಡುಗೆ ಅನಿಲದ ಸಿಲಿಂಡರ್, ಗ್ಯಾಸ್ ಕಟ್ಟರ್, ಕಾರದ ಪುಡಿ, ಕಬ್ಬಿನದ ರಾಡ್ ಸೇರಿ ಅನೇಕ ಸಾಮಾನುಗಳು ದೊರೆತವು.ಈ ಹೊತ್ತಿಗೆ ಕಾರಿನಲ್ಲಿದ್ದ ೫ ಜನರಲ್ಲಿ ಇಬ್ಬರು ಓಡಿ ಹೋಗಿದ್ದರಿಂದ ಉಳಿದ ಮೂವರನ್ನು ಪೋಲಿಸರು ವಶಕ್ಕೆ ಪಡೆದು…
ಬಾಗಲಕೋಟೆ: ತೋಟಗಾರಿಕೆಯ ಉದ್ಯಾನಗಿರಿಯಲ್ಲಿ ಆರ್ಥಿಕತೆ ಹಾಗೂ ಪ್ಟೌಕತೆಗಾಗಿ ತೋಟಗಾರಿಕೆ ಎಂಬ ಧ್ಯೇಯ ವಾಕ್ಯದೊಂದಿಗೆ ಡಿಸೆಂಬರ ೨೧ ರಿಂದ ೨೩ ವರೆಗೆ ಮೂರು ದಿನಗಳ ಕಾಲ ತೋಟಗಾರಿಕೆ ಮೇಳ-೨೦೨೪ ಹ”ಕೊಳ್ಳಲಾಗಿದೆ ಎಂದು ತೋಯ ಕುಲಪತಿ ಡಾ.”ಷ್ಣುವರ್ಧನ ಹೇಳಿದರು.ತೋ””ಯ “ಸ್ತರಣಾ ನಿರ್ದೇಶನಾಲಯದಲ್ಲಿ ಗುರುವಾರ ಕರೆಯಲಾಗಿದ್ದ ಪತ್ರಿಕಾಗ್ಠೋಯನ್ನು ಉದ್ದೇಶಿಸಿ ಮಾತನಾಡಿದ ಅವರು ಪ್ರತಿ ತೋಟಗಾರಿಕೆ ಮೇಳವು ರೈತರಲ್ಲಿ ಅಪೇಕ್ಷಿತ ಧನಾತ್ಮಕ ಬದಲಾವಣೆ ತರುವ ಅವಕಾಶವನ್ನು ಒದಗಿಸುತ್ತಿದ್ದು, ಪ್ರತಿ ವರ್ಷ ಒಂದೊಂದು ಧ್ಯೇಯ ವಾಕ್ಯಗಳೊಂದಿಗೆ ತೋಟಗಾರಿಕೆ ಮೇಳ ಆಚರಿಸುತ್ತಾ ಬರಲಾಗಿದೆ. ಮೂರು ದಿನಗಳ ಕಾಲ ನಡೆಯುವ ಈ ಮೇಳದಲ್ಲಿ “ಶ್ವ “ದ್ಯಾಲಯದ ವ್ಯಾಪ್ತಿಯ ೨೪ ಜಿಲ್ಲೆಗಳಿಂದ ಗುರುತಿಸಲ್ಪಟ್ಟ ಸಾಧಕ ರೈತರಾದ ಫಲಶ್ರೇಷ್ಟರನ್ನು ತೋಟಗಾರಿಕೆ ಮೇಳದ ಮೂರು ದಿನಗಳಲ್ಲಿ ಸನ್ಮಾನಿಸಲಾಗುತ್ತಿದೆ ಎಂದು ತಿಳಿಸಿದರು.ಪ್ರತಿ ತೋಟಗಾರಿಕೆ ಮೇಳವು ರೈತರಲ್ಲಿ ಧನಾತ್ಮಕ ಬದಲಾವಣೆ ತರುವ ಒಂದು ಅವಕಾಶವನ್ನು ಒದಗಿಸುತ್ತಿದ್ದು, ಪ್ರತಿ ವರ್ಷವು ಮೇಳವು ಉದ್ದೇಶಿತ ಧ್ಯೇಯವನ್ನು ಹೊಂದಿದೆ. ಪ್ಟೌಕತೆಗಾಗಿ ತೋಟಗಾರಿಕೆ ಬೆಳೆಗಳು, ಸಸ್ಯ ಸಂರಕ್ಷಣೆಯಲ್ಲಿ ಡ್ರೋನಗಳ ಬಳಕೆ, ತೋಟಗಾರಿಕೆಯಲ್ಲಿ ನಿಖರ ಬೇಸಾಯ,…