ಬಾಗಲಕೋಟೆ ; ತಾಲೂಕಿನ ರಾಂಪುರ ಕೆ”ಜಿಬಿ ಬ್ಯಾಂಕಿನ ಬೀಗ ಮುರಿದು ಬಂಗಾರ, ಹಣ ದೋಚಲು ಪ್ರಯತ್ನಿಸಿದ್ದ ಹಾಗೂ ಶಿರೂರಿನ ಕೆನರಾ ಬ್ಯಾಂಕ್ ದರೋಡೆಗೆ ಹೊರಟಿದ್ದ ಕಳ್ಳರ ತಂಡವನ್ನು “ಡಿಯುವಲ್ಲಿ ಬಾಗಲಕೋಟೆ ಪೋಲಿಸರು ಯಶಸ್ವಿಯಾಗಿದ್ದಾರೆ.
ಬಾಗಲಕೋಟೆ ನಗರ ಹಾಗೂ ಗ್ರಾ”ಣ ಪ್ರದೇಶಗಳಲ್ಲಿ ಕಳ್ಳತನ, ಬ್ಯಾಂಕ್ ದರೋಡೆ ಪ್ರಯತ್ನದ ಪ್ರಕರಣಗಳು ನಡೆದಿರುವ “ನ್ನೆಲೆಯಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ನಿರ್ದೇಶನದ ಮೇರೆಗೆ ಕಳ್ಳರ ದಸ್ತಗಿರಿಗೆ ನಾಕಾಬಂದಿಗಳನ್ನು ಏರ್ಪಡಿಸಲಾಗಿತ್ತು.
ಡಿ.೧೧ ರಂದು ಗ್ರಾ”ಣ ಸಿಪಿಐ ನೇತೃತ್ವದಲ್ಲಿ ಪಿಎಸ್ಐ ಶರಣಬಸಪ್ಪ ಸಂಗಳದ ಹಾಗೂ ಸಿಬ್ಬಂದಿಯವರು ರಾತ್ರಿ ಹೊನ್ನಾಕಟ್ಟಿ ಕ್ರಾಸ್ ಬಳಿ ನಾಕಾಬಂದಿ ಕರ್ತವ್ಯ ನಡೆಸುತ್ತಿದ್ದಾಗ ಮಧ್ಯರಾತ್ರಿ ೧-೨೫ ರ ಹೊತ್ತಿಗೆ ಬಾಗಲಕೋಟೆ ನವನಗರದ ಕಡೆಂದ ಬಂದ ಕಾರೊಂದನ್ನು ತಡೆದು ತಪಾಸಣೆ ನಡೆಸಿದಾಗ ಕಾರಿನಲ್ಲಿ ಅಕ್ಷಿಜನ್ ಸಿಲಿಂಡರ್, ಅಡುಗೆ ಅನಿಲದ ಸಿಲಿಂಡರ್, ಗ್ಯಾಸ್ ಕಟ್ಟರ್, ಕಾರದ ಪುಡಿ, ಕಬ್ಬಿನದ ರಾಡ್ ಸೇರಿ ಅನೇಕ ಸಾಮಾನುಗಳು ದೊರೆತವು.
ಈ ಹೊತ್ತಿಗೆ ಕಾರಿನಲ್ಲಿದ್ದ ೫ ಜನರಲ್ಲಿ ಇಬ್ಬರು ಓಡಿ ಹೋಗಿದ್ದರಿಂದ ಉಳಿದ ಮೂವರನ್ನು ಪೋಲಿಸರು ವಶಕ್ಕೆ ಪಡೆದು “ಚಾರಿಸಲಾಗಿ ತಾವು “ಜಯಪುರದ ಭರತ ಅಗರವಾಲ ಎಂಬವನ ದುಷ್ಪೇರಣೆಂದ ಶಿರೂರ ಕೆನರಾ ಬ್ಯಾಂಕ್ ದರೋಡೆಗೆ ಹೊರಟಿರುವುದಾಗಿ ಹೇಳಿದ್ದಾರೆ.
ವಶಕ್ಕೆ ಪಡೆದ ಆರೋಪಿತರನ್ನು ಮತ್ತಷ್ಟು “ಚಾರಿಸಲಾಗಿ ತಾವು ೮ ಜನ ಸೇರಿ ಕಳೆದ ಅಕ್ಟೋಬರ್ ೨೪ ರ ರಾತ್ರಿ ರಾಂಪುರದ ಕರ್ನಾಟಕ “ಕಾಸ ಗ್ರಾ”ಣ ಬ್ಯಾಂಕ್ ಬೀಗ ಮುರಿದು ಬಂಗಾರ ಮತ್ತು ಹಣ ದೋಚಲು ಯತ್ನಿಸಿದ “ಚಾರವನ್ನು ಒಪ್ಪಿಕೊಂಡಿದ್ದಾರೆಂದು ಪೋಲಿಸರು ತಿಳಿಸಿದ್ದಾರೆ.
“ಜಯಪುರದ ತನ್ವೀರ ಹುಸೇನಬಾಷಾ ಹೊನ್ನುಟಗಿ, ರಮೇಶ ಲಕ್ಷ್ಮಣ ಕಾಳೆ, ಪುಣೆಯ ವಸೀಂ ಮಸೂದ ಶೇಖ ಅವರನ್ನು ವಶಕ್ಕೆ ಪಡೆಯಲಾಗಿದ್ದು, ಬಾಗಲಕೋಟೆ ನವನಗರದ ಚಾಂದಬಾಷಾ ಕಾಸೀಂಸಾಬ ಚಿತ್ತಾಪೂರ, ನಿತೇಶ ಅಲಿಯಾಸ್ ನಿತ್ಯಾ ಸದಾನಂದ ನೀಲವಾಣಿ ಪರಾರಿಯಾಗಿದ್ದಾರೆ.
“ಂದಿನ ಆರೋಪಿ “ಜಯಪುರದ ಭರತ ಸತ್ಯನಾರಾಯಣ ಅಗರವಾಲ ಸಹ ಪರಾರಿಯಾಗಿದ್ದಾನೆಂದು ಹೇಳಿರುವ ಪೋಲಿಸರು, ರಾಂಪುರ ಬ್ಯಾಂಕ್ ಪ್ರಕರಣದಲ್ಲಿನ ಆರೋಪಿತರಾದ ಬೆನಕಟ್ಟಿಯ ಹುಲಗಪ್ಪ ಗಂಗಪ್ಪ ಪಾತ್ರೋಟಿ, ರಾಂಪುರದ ನಾಗೇಶ ಊರ್ಫ ನಾಗ್ಯಾ ರಾಜಪ್ಪ ಇಂಗಳೆ ಸೇರಿ ೮ ಜನರ ಗ್ಯಾಂಗ್ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಅಪರಾಧ ಮಾಡಿರುವುದು ತಿಳಿದು ಬಂದಿದೆ ಎಂದು ಹೇಳಿದ್ದಾರೆ.
ಡಿಎಸ್ಪಿ ಮಾರ್ಗದರ್ಶನದಲ್ಲಿ ಬಾಗಲಕೋಟೆ ಗ್ರಾ”ಣ ಸಿಪಿಐ ಎಚ್.ಆರ್.ಪಾಟೀಲ, ನೇತೃತ್ವದಲ್ಲಿ ಯಶಸ್ವಿ ಕಾರ್ಯಾಚರಣೆ ನಡೆಸಿ ಕಳ್ಳರ ತಂಡವನ್ನು ಬಂಧಿಸುವಲ್ಲಿ ಶ್ರಮವ”ಸಿದ ಗ್ರಾ”ಣ ಪಿಎಸ್ಐ ಶರಣಬಸಪ್ಪ ಸಂಗಳದ ಹಾಗೂ ತಂಡದಲ್ಲಿದ್ದ ಸಿಬ್ಬಂದಿಯ ಕಾರ್ಯಕ್ಷಮತೆಯನ್ನು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಪ್ರಶಂಸಿಸಿ ಬಹುಮಾನ ಘೋಸಿದ್ದಾರೆ.