ಬಾಗಲಕೋಟ-ರಾಜ್ಯದಲ್ಲಿ ದಲಿತರು ಎದುರಿಸುತ್ತಿರುವ ಹಲವು ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಸರ್ಮಪಕವಾದ ಯೋಜನೆಗಳನ್ನು ರೂಪಿಸಬೇಕೆಂದು ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರಿಗೆ ರಾಜ್ಯ ಛಲವಾದಿ ಮಹಾಸಭಾ ಮನವಿ ಮಾಡಿದೆ.
ಬಾಗಲಕೋಟ ಜಿಲ್ಲಾಧ್ಯಕ್ಷ ಪ್ರೇಮನಾಥ ಗರಸಂಗಿ ಅವರ ನೇತೃತ್ವದ ನಿಯೋಗ ಬೆಳಗಾವಿ ಸ್ವರ್ಣಸೌಧ ದಲ್ಲಿ ಬೇಟಿಯಾಗಿ ಮನವಿ ಮಾಡಿತು.
ವಿಷಯದ ಗಂಭೀರತೆಯನ್ನು ಅರಿತ ನಾರಾಯಣಸ್ವಾಮಿ ಅವರು ಈ ಸಬಂಧ ತಾವು ಶೀಘ್ರದಲ್ಲಿ ದಲಿತ ಮುಖಂಡರ ಸಭೆಯನ್ನು ಕರೆದು ಸಮಾಲೋಚನೆ ಮಾಡಿ ಒಂದು ನಿರ್ಧಾರಕ್ಕೆ ಬರುವ ಅಶ್ವಾಸನೆಯನ್ನು ನೀಡಿದರು.
ಮನವಿಯಲ್ಲಿ ಇನ್ನಿತರ ಬೇಡಿಕೆಗಳಾದ ಬಾಗಲಕೋಟ ತೋಟಗಾರಿಕೆ ವಿಶ್ವವಿದ್ಯಾಲಯಕ್ಕೆ ಒನಕೆ ಒಬ್ಬವ್ವನ ಹೆಸರು ಇಡುವದು ಹಾಗೂ ನವಬೌದ್ದರಿಗೆ ಗಣಕಿಕೃತ ಪ್ರಮಾಣ ಪತ್ರ ನೀಡುವದು ಸೇರಿದಂತೆ ಅನೇಕ ಸಮಸ್ಯೆಗಳ ಬಗ್ಗೆ ಪರಿಹಾಕ್ಕೆ ತಾವು ಪ್ರಾಮಾಣಿಕವಾಗಿ ಶ್ರಮಿಸುವದಾಗಿ ಭರವಸೆ ನೀಡಿದರು.
ನಿಯೋಗದಲ್ಲಿ ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾ ಬಾಗಲಕೋಟ ಜಿಲ್ಲಾ ಘಟಕದ ಗೌರವಾಧ್ಯಕ್ಷ ಬಸವರಾಜ ಚಲವಾದಿ,ಪ್ರಧಾನಕಾರ್ಯದರ್ಶಿ ಎನ್.ಬಿ.ಗಸ್ತಿ,ಪದಾಧಿಕಾರಿಗಳಾದ ಮಹೇಶ ಬೀಳಗಿ,ಮನೋಹರ ಗರಸಂಗಿ,ಆನಂದ ನಾರಾಯಣಿ ಇದ್ದರು.