ಬಾಗಲಕೋಟೆ: ಯುವಕನೋರ್ವನಿಗೆ ಚಾಕು ಇರಿದ ಘಟನೆ ಶನಿವಾರ ರಾತ್ರಿ ನಗರದ ದಸ್ತಗೀರಸಾಬ್ ಕಟ್ಟಾ ಸಮೀಪ ನಡೆದಿದೆ ಎಂದು ವರದಿಯಾಗಿದೆ.
ಸಂದೀಪ ಸುಣಗಾರ ಎಂಬ ಯುವಕ ಅಲ್ತಾಪ್ ಎಂಬುವವನಿಗೆ ಚಾಕುವಿನಿಂದ ಇರಿದ ಪರಿಣಾಮ ಕೈ ಹಾಗೂ ಬೆನ್ನಿಗೆ ಗಾಯಗಳಾಗಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಹಳೆ ದ್ವೇಷವೇ ಈ ಘಟನೆಗೆ ಕಾರಣವೆಂದು ಹೇಳಲಾಗಿದೆ. ಬಾಗಲಕೋಟೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.