ಖ್ಯಾತ ನಿರ್ದೇಶಕ ಮಣಿರತ್ನಂ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಬಹುನಿರೀಕ್ಷಿತ ಚಿತ್ರ ‘ಥಗ್ ಲೈಫ್’ನ ಟ್ರೈಲರ್ ಇಂದು (ಮೇ 17) ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಕಮಲ್ ಹಾಸನ್ ಅವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು, ಮಣಿರತ್ನಂ ಅವರೊಂದಿಗೆ ಕಮಲ್ ಹಾಸನ್ ಕಥೆಯನ್ನೂ ಬರೆದಿದ್ದಾರೆ.
‘ಥಗ್ ಲೈಫ್’ ಚಿತ್ರದಲ್ಲಿ ಕಮಲ್ ಹಾಸನ್ ಅವರಿಗೆ ಸಿಲಂಬರಸನ್(ಶಿಂಬು) ಮತ್ತು ತ್ರಿಶಾ ಕೃಷ್ಣನ್ ಪ್ರಮುಖ ಪಾತ್ರಗಳಲ್ಲಿ ಸಾಥ್ ನೀಡಿದ್ದಾರೆ. ಅಲ್ಲದೆ, ನಾಸರ್, ಅಭಿರಾಮಿ, ಸನ್ಯಾ ಮಲ್ಹೋತ್ರಾ, ಪಂಕಜ್ ತ್ರಿಪಾಠಿ, ಮಹೇಶ್ ಮಾಂಜ್ರೇಕರ್ ಮತ್ತು ತನಿಕೆಲ್ಲ ಭರಣಿ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.
ಚಿತ್ರದ ಛಾಯಾಗ್ರಹಣವನ್ನು ರವಿ ಕೆ. ಚಂದ್ರನ್ ನಿರ್ವಹಿಸಿದ್ದು, ಸಂಕಲನ ಎ. ಶ್ರೀಕರ್ ಪ್ರಸಾದ್ ಅವರದ್ದಾಗಿದೆ. ಸಂಗೀತ ದಿಗ್ಗಜ ಎ. ಆರ್. ರೆಹಮಾನ್ ಅವರ ಸಂಗೀತ ಈ ಚಿತ್ರಕ್ಕೆ ಮತ್ತಷ್ಟು ಮೆರುಗು ನೀಡಲಿದೆ.
‘ಥಗ್ ಲೈಫ್’ ಸಿನಿಮಾವು ಜೂನ್ 5, 2025 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲು ಸಿದ್ಧವಾಗಿದೆ ಎಂದು ಚಿತ್ರತಂಡ ತಿಳಿಸಿದೆ.