ಬಾಲಿವುಡ್‌ನ ಖ್ಯಾತ ನಟ ಅಮೀರ್ ಖಾನ್ ಮತ್ತು ನಟಿ ಜೆನೆಲಿಯಾ ಡಿಸೋಜಾ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಬಹುನಿರೀಕ್ಷಿತ ಚಿತ್ರ ‘ಸಿತಾರೆ ಜಮೀನ್ ಪರ್’ ಜೂನ್ 20ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.
ಆರ್. ಎಸ್. ಪ್ರಸನ್ನ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ ದಿವ್ಯ ನಿಧಿ ಶರ್ಮಾ ಕಥೆ ಬರೆದಿದ್ದಾರೆ. ಸ್ಪ್ಯಾನಿಷ್ ಚಿತ್ರ ‘ಚಾಂಪಿಯನ್ಸ್’ ಅನ್ನು ಆಧರಿಸಿರುವ ಈ ಚಿತ್ರವನ್ನು ಅಮೀರ್ ಖಾನ್ ಮತ್ತು ಅಪರ್ಣ ಪುರೋಹಿತ್ ಅವರುಗಳು ಜಂಟಿಯಾಗಿ ನಿರ್ಮಿಸಿದ್ದಾರೆ.
ಚಿತ್ರದ ಛಾಯಾಗ್ರಹಣವನ್ನು ಜಿ. ಶ್ರೀನಿವಾಸ್ ರೆಡ್ಡಿ ನಿರ್ವಹಿಸಿದ್ದು, ಚಾರು ಶ್ರೀ ರಾಯ್ ಸಂಕಲನ ಮಾಡಿದ್ದಾರೆ. ಶಂಕರ್-ಎಹ್ಸಾನ್-ಲಾಯ್ ಅವರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಅಮೀರ್ ಖಾನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರವನ್ನು ಪಿವಿಆರ್ ಐನಾಕ್ಸ್ ಪಿಕ್ಚರ್ಸ್ ವಿತರಿಸಲಿದೆ.
