ಬಾಗಲಕೋಟೆ: ಖ್ಯಾತ ನಿರ್ದೇಶಕ, ನಟ ಸಾಯಿಪ್ರಕಾಶ್ ನಿರ್ದೇಶನದ 105 ನೇ ಚಿತ್ರ ‘ಸೆಪ್ಟಂಬರ್ 10’ ಚಲನಚಿತ್ರ ಜುಲೈ ಎರಡನೇ ವಾರದಲ್ಲಿ ಬಿಡುಗಡೆಗೊಳ್ಳಲಿದೆ. ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿ ಯಲ್ಲಿ ನಿರ್ದೇಶಕ ಸಾಯಿಪ್ರಕಾಶ ಅವರೇ ಚಲನಚಿತ್ರದ ಕುರಿತು ವಿವರಣೆ ನೀಡಿದರು.
ತವರಿಗೆ ಬಾ ತಂಗಿ, ಮುದ್ದಿನ ಮಾವ, ಅಣ್ಣ ತಂಗಿ, ಸೋಲಿಲ್ಲದ ಸರದಾರದಂಥ ಯಶಸ್ವಿ ಚಿತ್ರಗಳ ನಿರ್ದೇಶನ ಮಾಡಿದ್ದು, ಇದೀಗ 105 ನೆಯದಾಗಿ ‘ಸೆಪ್ಟೆಂಬರ್ 10’ನಿರ್ದೇಶನ ಗೊಂಡಿ ದೆ ಎಂದರು. ಮನುಷ್ಯನ ಜೀವನದಲ್ಲಿ ಎದುರಾಗೋ ಎಲ್ಲಾ ಸಮಸ್ಯೆಗಳಿಗೆ ಆತ್ಮಹತ್ಯೆ ಒಂದೇ ಪರಿಹಾರವಲ್ಲ, ಎಲ್ಲೋ ಒಂದು ದಾರಿ ಇದ್ದೇ ಇರುತ್ತದೆ ಎಂಬ ಸಂದೇಶ ಇಟ್ಟುಕೊಂಡು ಈ ಚಿತ್ರವನ್ನು ನಿರ್ದೇಶಿಸಲಾಗಿದೆ. ಈಗಾಗಗಲೇ ತನ್ನ ಚಿತ್ರೀಕರಣ, ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿಕೊಂಡಿರುವ ಈ ಚಿತ್ರ ಮುಂದಿನ ತಿಂಗಳು ಎರಡನೇ ವಾರ ಬಿಡುಗಡೆಯಾಗಲಿದೆ ಎಂದರು.
ಸೆಪ್ಟೆಂಬರ್ 10 ವಿಶ್ವ ಆತ್ಮಹತ್ಯೆ ತಡೆ ದಿನ, ಅದೇ ಕಾನ್ಸೆಪ್ಟ್ ಇರುವ ಕಾರಣ ಚಿತ್ರಕ್ಕೆ ಈ ಟೈಟಲ್ ಇಡಲಾಗಿದೆ. ಶ್ರೀದೇವಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಇ. ರಾಜಮ್ಮ ಸಾಯಿಪ್ರಕಾಶ್ ಅವರು ನಿರ್ಮಿಸಿರುವ ಈ ಚಿತ್ರದ ಮೂಲಕ ದುರ್ಬಲ ಹಾಗೂ ಸಂಕುಚಿತ ಮನಸಿನವರಿಗೆ ಉತ್ತಮ ಸಂದೇಶ, ಮಾರ್ಗದರ್ಶನ ನೀಡುವ ಪ್ರಯತ್ನ ಈ ಚಿತ್ರದಲ್ಲಿದೆ ಎಂದರು. ಈಗಿನ ಕಾಲದಲ್ಲಿ ಒಂದು ಸಿನಿಮಾ ಮಾಡುವುದೇ ಕಷ್ಟ, ಮಾಡಿದರೂ ಅದನ್ನು ಜನರಿಗೆ ತಲುಪಿಸುವುದು ಇನ್ನೂ ಕಷ್ಟ. ನಾನು 2020ರಲ್ಲೇ ಸೆಪ್ಟೆಂಬರ್ 10 ಎಂಬ ಟೈಟಲ್ ಇಟ್ಟುಕೊಂಡು ಈ ಸಿನಿಮಾ ಪ್ರಾರಂಭಿಸಿದೆ. ಸಿನಿಮಾ ಮುಗಿಯುವಷ್ಟರಲ್ಲಿ ಕೊರೋನಾ ಪ್ರಾರಂಭವಾಯಿತು. ಜನ ಬರ್ತಾರೋ ಇಲ್ವೊ ಎಂಬ ಭಯದಿಂದ ಚಿತ್ರವನ್ನು ರಿಲೀಸ್ ಮಾಡಲೇ ಇಲ್ಲ. ದೊಂಬರಕೃಷ್ಣ ಸುರೇಶ್‌ರ ಮೂಲಕ ಡಾ. ರಾಜು ಅವರ ಪರಿಚಯವಾಗಿ ಅವರಿಗೆ ಕಥೆ ಹೇಳಿದಾಗ ತುಂಬಾ ಇಷ್ಟಪಟ್ಟರು. ಈಗಿನ ಕಾಲದಲ್ಲಿ ಇಂಥ ಸಿನಿಮಾಗಳು ಹೆಚ್ಚು ಹೆಚ್ಚು ಬರಬೇಕು. ಸಿನಿಮಾ ನೋಡಿದ ಕೆಲವರಾದರೂ ತಮ್ಮ ಮನಸ್ಸನ್ನು ಬದಲಾಯಸಿಕೊಂಡರೆ ನಮಗದೇ ಖುಷಿಯ ವಿಚಾರ ಎಂದರು. ಫ್ಯಾಮಿಲಿ ಸೆಂಟಿಮೆಂಟ್, ಕಾಮಿಡಿ ಹೀಗೆ ಎಲ್ಲಾ ತರಹದ ಮನರಂಜನಾತ್ಮಕ ಅಂಶಗಳು ಚಿತ್ರದಲ್ಲಿದೆ. ಶಿರಡಿ ಸಾಯಿಬಾಬಾರ ಕೃಪೆ ನಮ್ಮ ಚಿತ್ರದ ಮೇಲಿದೆ ಎಂದು ಹೇಳಿದರು. ಸಾಯಿಪ್ರಕಾಶ್ ಅವರ ಚಿತ್ರಕಥೆ ಹಾಗೂ ನಿರ್ದೇ ಶನ, ಡಾ. ವಿ. ನಾಗೇಂದ್ರಪ್ರಸಾದ್ ಅವರ ಸಂಗೀ ತ, ಜೆ.ಜಿ. ಕೃಷ್ಣ ಅವರ ಛಾಯಾಗ್ರಹಣ, ಬಿಎ ಮಧು ಅವರು ಸಂಭಾಷಣೆ ಈ ಚಿತ್ರಕ್ಕಿದೆ. ಹಿರಿಯ ಕಲಾವಿದ ರಮೇಶ್‌ಭಟ್ ಈ ಚಿತ್ರದಲ್ಲಿ ಒಬ್ಬಲಾಯರ್ ಪಾತ್ರ ಮಾಡಿದ್ದಾರೆ. ಅಲ್ಲದೆ ನಟ ಶಶಿಕುಮಾರ್, ಶ್ರೀನಿವಾಸಮೂರ್ತಿ, ರವೀಂದ್ರ ನಾಥ್, ಶಿವಕುಮಾರ್, ಗಣೇಶ್‌ರಾವ್ ಕೇಸರಕರ್, ಸಿಹಿಕಹಿ ಚಂದ್ರು, ಮೀಸೆ ಅಂಜಿನಪ್ಪ, ಜೋಸೈ ಮನ್, ಮನಮೋಹನ್, ಪದ್ಮಾ ವಾಸಂತಿ, ಶ್ರೀರಕ್ಷಾ, ಅನಿತಾರಾಣಿ ಹಾಗೂ ಜಯಸಿಂಹ ಆರಾಧ್ಯ ಹೀಗೆ ಅನೇಕ ಅನುಭವಿ ಕಲಾವಿದರೇ ಈ ಚಿತ್ರದಲ್ಲಿ ನಟಿಸಿದಾರೆ. ಮ್ಯೂಸಿಕ್ ಬಜಾರ್ ಈ ಚಿತ್ರದ ಹಾಡುಗಳನ್ನ ಹೊರತಂದಿದೆ ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗಣೇಶರಾವ್, ಚಿತ್ರದ ನಾಯಕ ಜಯಸಿಂಹ, ಡಾ. ಶೇಖರ ಮಾನೆ ಮಾತನಾಡಿ, ಚಿತ್ರವನ್ನು ನೋಡುವ ಮೂಲಕ ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಚಲನಚಿತ್ರ ನಿರ್ಮಾಪಕ ಘನಶ್ಯಾಂ ಭಾಂಡಗೆ, ನ್ಯಾಯವಾದಿ ರಮೇಶ ಬದ್ನೂರ, ಸಂಜೀವ ಜೋಶಿ, ಚಂದ್ರು ಇಲ್ಲೂರ, ಆನಂದ ಹಬಿಬ್, ರಾಘವೇಂದ್ರ ಬಿಸನಾಳ ಇತ ರರುಇದ್ದರು.