ಬಾಗಲಕೋಟೆ: ಸಹಕಾರ ಭಾರತಿ ಕರ್ನಾಟಕ ಜಿಲ್ಲಾ ಘಟಕದಿಂದ ಜಿಲ್ಲೆಯ ಜಿಲ್ಲಾ ಸಮಿತಿ, ಜಿಲ್ಲಾ ಮಹಿಳಾ ಸಮಿತಿ, ಜಿಲ್ಲಾ ಪ್ರಕ್ರೋಷ್ಠಗಳ ಮತ್ತು ತಾಲೂಕ ಸಮಿತಿಗಳ ಪದಗ್ರಹಣ ಸಮಾರಂಭ ಇದೇ ದಿ.೫ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ವಿದ್ಯಾಗಿರಿಯ ಸಾಯಿ ಮಂದಿರದಲ್ಲಿ ನಡೆಯಲಿದೆ ಎಂದು ಸಹಕಾರ ಭಾರತಿ ಕರ್ನಾಟಕ ಉಪಾಧ್ಯಕ್ಷರಾದ ಜಿ.ಎನ್.ಪಾಟೀಲ ಹೇಳಿದರು.
ಅವರು ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮಾರಂಭವನ್ನು ಸಂಸದ ಪಿ.ಸಿ.ಗದ್ದಿಗೌಡರ ಉದ್ಘಾಟಿಸುವರು. ಸಹಕಾರ ಭಾರತಿ ಕರ್ನಾಟಕ ರಾಜ್ಯಾಧ್ಯಕ್ಷರಾದ ಪ್ರಭುದೇವ ಮಾಗನೂರ ಅಧ್ಯಕ್ಷತೆ ವಹಿಸಲಿದ್ದಾರೆ. ಸಹಕಾರ ಭಾರತಿ ರಾಷ್ಟ್ರೀಯ ಮಾಜಿ ಅಧ್ಯಕ್ಷರಾದ ರಮೇಶ ವೈದ್ಯಜಿ, ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯರಾದ ರಾಜಶೇಖರ ಶೀಲವಂತ, ಉಪಾಧ್ಯಕ್ಷರಾದ ಜಿ.ಎನ್.ಪಾಟೀಲ, ಪ್ರಧಾನ ಕಾರ್ಯದರ್ಶಿ ನರಸಿಂಹ ಕಾಮತ್, ನಗರಸಭೆ ಅಧ್ಯಕ್ಷೆ ಸವಿತಾ ಲೆಂಕಣ್ಣವರ್ ಉಪಸ್ಥಿತರಿರುವರು ಎಂದರು. ಸುದ್ದಿಗೋಷ್ಠಿಯಲ್ಲಿ ಡಾ.ಎಂ.ಎಸ್.ದಡ್ಡೇನವರ್, ಜಯಂತ ಕುರಂದವಾಡ, ಅಶೋಕ ಜಿಗಳೂರ, ಶೈಲಾ ಸಂಗಳದ, ರಾಜು ಶಿಂತ್ರೆ ಉಪಸ್ಥಿತರಿದ್ದರು.