Close Menu
    Facebook X (Twitter) Instagram YouTube
    Facebook X (Twitter) Instagram YouTube
    Sanjedarshan
    Subscribe
    • ಇದೀಗ ಬಂದ ಸುದ್ದಿ
    • ಬಾಗಲಕೋಟೆ
    • ಇತರ ಜಿಲ್ಲಾ ಸುದ್ದಿ
    • ರಾಜ್ಯ
    • ರಾಷ್ಟ್ರೀಯ
    • ಕ್ರೀಡಾ ಸುದ್ದಿ
    • ಸಿನೆಮಾ
    Facebook X (Twitter) Instagram
    Sanjedarshan
    Home»ಬಾಗಲಕೋಟೆ»ರಾಜಕೀಯ ಪರಾಕಾಷ್ಟೆ ತಲುಪಿದ ಬಣ ಬಡಿದಾಟ
    ಬಾಗಲಕೋಟೆ

    ರಾಜಕೀಯ ಪರಾಕಾಷ್ಟೆ ತಲುಪಿದ ಬಣ ಬಡಿದಾಟ

    SanjeBy SanjeMay 20, 20252 Mins Read
    bjp

    ಬಾಗಲಕೋಟೆ: ಬಿಜೆಪಿಯ ಹಾಲಿ, ಮಾಜಿ ಶಾಸಕರ ಬಣ ಬಡಿದಾಟ ಪರಾಕಾಷ್ಠೆಗೆ ತಲುಪಿದ್ದು, ಪಕ್ಷದ ರಾಜ್ಯ ಶಿಸ್ತು ಸಮಿತಿ ಅಂಗಳದಲ್ಲಿ ಬಣ ಬಡಿದಾಟದ ಚೆಂಡು ಬಿದ್ದಿದೆ.

    ಮೇಲ್ಮನೆ ಸದಸ್ಯ ಪಿ.ಎಚ್. ಪೂಜಾರ ಅವರು ತಮ್ಮ ವಿರುದ್ಧ ಅವಮಾನಕರವಾಗಿ ಮಾತನಾಡಿರುವ ಪಕ್ಷದ ಕೆಲ ಪದಾಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ದೂರು ನೀಡಿದ್ದಾರೆ. ಪೂಜಾರ್ ಅವರ ದೂರನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ಶಿಸ್ತು ಸಮಿತಿ ಜಿಲ್ಲಾ ಬಿಜೆಪಿ ಅಧ್ಯಕ್ಷರಿಗೆ ಬೆಳವಣಿಗೆಳ ಕುರಿತಂತೆ ವರದಿ ಕಳುಹಿಸುವಂತೆ ಸೂಚನೆ ನೀಡಿದೆ. ಇದು ಜಿಲ್ಲಾ ಬಿಜೆಪಿಯಲ್ಲಿ ಭಾರಿ ಕುತೂಹಲಕ್ಕೆ ಕಾರಣ ವಾಗಿದೆ.

    ಮೇಲ್ಮನೆ ಸದಸ್ಯ ಪಿ.ಎಚ್.ಪೂಜಾರ್ ಮತ್ತು ಮಾಜಿ ಶಾಸಕ ವೀರಣ್ಣ ಚರಂತಿಮಠ ನಡುವಿನ ರಾಜಕೀಯ ತಿಕ್ಕಾಟ ಹಾವು-ಏಣಿಯಾಟದಂತೆ ನಡೆದಿದೆ. ಪರಸ್ಪರರ ನಡುವೆ ತೀರಾ ವೈಯಕ್ತಿಕ ಮಟ್ಟದಲ್ಲಿ ಆರೋಪ, ಪ್ರತ್ಯಾರೋಪಗಳು ನಡೆ ಯುತ್ತಲೇ ಇವೆ.

    ಏತನ್ಮಧ್ಯೆ ಮೇಲ್ಮನೆ ಸದಸ್ಯ ಪಿ.ಎಚ್. ಪೂಜಾರ್ ಅವರು ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರ ವಿರುದ್ಧ ಏಕವಚನದಲ್ಲಿ ಮಾತನಾಡಿರುವುದನ್ನು ಖಂಡಿಸಲು ಪತ್ರಿಕಾಗೋಷ್ಠಿ ಆಯೋಜನೆ ಮಾಡಿ ದ್ದರು. ಈ ವೇಳೆ ಚರಂತಿಮಠ ಅವರ ಕೆಲ ಬೆಂಬಲಿ ಗರು ಪಿ.ಎಚ್. ಪೂಜಾರ್ ಅವರ ಹೇಳಿಕೆಗಳನ್ನು ತರಾಟೆಗೆ ತೆಗೆದುಕೊಂಡು, ಚರಂತಿಮಠರ ವಿರುದ್ಧ ಏಕವಚನದಲ್ಲಿ ಮಾತನಾಡುವುದನ್ನು ಮುಂದುವರಿ ಸಿದಲ್ಲಿ ಅವರದೇ ಭಾಷೆಯಲ್ಲಿ ಉತ್ತರ ನೀಡಬೇಕಾಗುತ್ತದೆ ಎಂದು ಹೇಳುವ ಜತೆಗೆ ಪೂಜಾರ್ ಅವರನ್ನು ಅಪಮಾನಿಸುವ ನಿಟ್ಟಿನಲ್ಲಿ ಮಾತನಾಡಿ, ಪಕ್ಷದಿಂದ ಹೊರಹಾಕುವಂತೆ ಆಗ್ರಹಿಸಿದ್ದರು. ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರ ಬೆಂಬಲಿಗರು ತಮ್ಮ ವಿರುದ್ಧ ಅಪಮಾನ ಕರವಾಗಿ ಮಾತನಾಡಿದ್ದಾರೆ. ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷರಿಗೆ ದೂರ ಸಲ್ಲಿಸಿದ್ದಾರೆ. ಸೂಕ್ತ ಕ್ರಮಕ್ಕೆ ದೂರು ಸಲ್ಲಿಸಿರುವುದನ್ನು ಸ್ವತಃ ಮೇಲ್ಮನೆ ಸದಸ್ಯ ಪಿ. ಪೂಜಾರ್ ಖಚಿತ ಪಡಿಸಿದ್ದಾರೆ.

    ಮೇಲ್ಮನೆ ಸದಸ್ಯ ಪೂಜಾರ್ ವಿರುದ್ಧ ಪತ್ರಿಕಾ ಗೋಷ್ಠಿ ನಡೆಸಿ, ಅವಮಾನಕರ ರೀತಿಯಲ್ಲಿ ಚರಂತಿ ಮಠ ಬೆಂಬಲಿಗರು ಮಾತನಾಡಿರುವ ಬಗೆಗೆ ವರದಿ ಸಲ್ಲಿಸುವಂತೆ ರಾಜ್ಯ ಶಿಸ್ತು ಸಮಿತಿ ವರದಿ ಕೇಳಿರುವುದು ನಿಜ. ಸಂಬಂಧಪಟ್ಟವರೊಂದಿಗೆ ಮಾತ ನಾಡಿ ಎರಡು ದಿನಗಳಲ್ಲಿ ವರದಿ ಸಲ್ಲಿಸಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಸ್ಪಷ್ಟ ಪಡಿಸಿದ್ದಾರೆ.

    ಮೇಲ್ಮನೆ ಶಾಸಕರ ದೂರು, ಜಿಲ್ಲಾಧ್ಯಕ್ಷರ ವರದಿ ಹಿನ್ನೆಲೆಯಲ್ಲಿ ಬಿಜೆಪಿ ಶಿಸ್ತು ಸಮಿತಿ ಯಾವ ನಿರ್ಧಾರ ಕೈಗೊಳ್ಳಲಿದೆ ಎನ್ನುವುದನ್ನು ಕಾಯ್ದು ನೋಡಬೇಕಿದೆ.

    ದೂರ, ಪ್ರತಿ ದೂರಿನ ಹಿನ್ನೆಲೆಯಲ್ಲಿ ಹಾಲಿ, ಮಾಜಿ ಶಾಸಕರ ನಡುವಿನ ಬಣ ರಾಜಕಾರಣ ತಣ್ಣಗಾಗುವ ಬದಲಿಗೆ ಮತ್ತಷ್ಟು ಹುರಿಗಟ್ಟುವ ಸಾಧ್ಯತೆಗಳುನಿಚ್ಚಳವಾಗಿವೆ.

    Share. Facebook Twitter Pinterest LinkedIn WhatsApp Reddit Tumblr Email

    Related Posts

    May 22, 2025 ಬಾಗಲಕೋಟೆ

    ಅಯೋಧ್ಯೆಗೆ ವಾರಕ್ಕೆ ಮೂರು ದಿನ ರೈಲು ಓಡಿಸಿ: ಪೂಜಾರ

    May 22, 2025 ಬಾಗಲಕೋಟೆ

    ಶೀಘ್ರದಲ್ಲೇ ಬಾಗಲಕೋಟೆಗೆ ವಂದೇ ಭಾರತ ರೈಲು: ಸೋಮಣ್ಣ

    May 22, 2025 ಬಾಗಲಕೋಟೆ

    ಮೋದಿ ಅಪಮಾನಿಸಿ ಪೋಸ್ಟ್; ಯುವಕ ಪೋಲಿಸ್ ವಶಕ್ಕೆ

    May 20, 2025 ಬಾಗಲಕೋಟೆ

    ನೌಕರಿ ಇಲ್ಲವೇ ದಯಾ ಮರಣ: ವಿಜಯಲಕ್ಷ್ಮೀ

    May 20, 2025 ಬಾಗಲಕೋಟೆ

    ಇನ್ನೂ 5 ದಿನಗಳ ಕಾಲ ಮಳೆ ಸಾಧ್ಯತೆ

    May 20, 2025 ಸಿನೆಮಾ

    ಎನ್‌ಟಿಆರ್ ಜನ್ಮದಿನಕ್ಕೆ ‘ವಾರ್ 2’ ಟೀಸರ್ ಬಿಡುಗಡೆ!

    Facebook X (Twitter) Instagram Pinterest
    • Privacy Policy
    © 2025 Sanjedarshan. Developed by Vikimediatec Pvt Ltd.
    ಮಹೇಶ ಅಂಗಡಿ , ಸಂಪಾದಕರು, ಸಂಜೆದರ್ಶನ ದಿನ ಪತ್ರಿಕೆ, ಶಿವಗಿರಿ ಬಡಾವಣೆ 6ನೇ ಕ್ರಾಸ್, ವಿದ್ಯಾಗಿರಿ, ಬಾಗಲಕೋಟೆ-587102. ಮೋ: 9845228092

    Type above and press Enter to search. Press Esc to cancel.