Close Menu
    Facebook X (Twitter) Instagram YouTube
    Facebook X (Twitter) Instagram YouTube
    Sanjedarshan
    Subscribe
    • ಇದೀಗ ಬಂದ ಸುದ್ದಿ
    • ಬಾಗಲಕೋಟೆ
    • ಇತರ ಜಿಲ್ಲಾ ಸುದ್ದಿ
    • ರಾಜ್ಯ
    • ರಾಷ್ಟ್ರೀಯ
    • ಕ್ರೀಡಾ ಸುದ್ದಿ
    • ಸಿನೆಮಾ
    Facebook X (Twitter) Instagram
    Sanjedarshan
    Home»ಬಾಗಲಕೋಟೆ»ಬೀಳಗಿ»ನೀರು ಪೋಲಾಗದಂತೆ ಕ್ರಮವಹಿಸಿ: ಶಾಸಕ ಜೆ.ಟಿ.ಪಾಟೀಲ
    ಬೀಳಗಿ

    ನೀರು ಪೋಲಾಗದಂತೆ ಕ್ರಮವಹಿಸಿ: ಶಾಸಕ ಜೆ.ಟಿ.ಪಾಟೀಲ

    SanjeBy SanjeMay 12, 20252 Mins Read
    ಜೆ.ಟಿ.ಪಾಟೀಲ

    ಬಾಗಲಕೋಟೆ: ಕುಡಿಯುವ ನೀರಿನ ಪೂರೈಕೆಯಲ್ಲಿ ಯಾವುದೇ ರೀತಿಯಲ್ಲಿ ನೀರು ಪೋಲಾಗದಂತೆ ಕ್ರಮವಹಿಸಲು ಬೀಳಗಿ ಶಾಸಕರು ಆಗಿರುವ ಹಟ್ಟಿ ಚಿನ್ನದ ಗಣಿ ನಿಯಮಿತದ ಅಧ್ಯಕ್ಷರಾದ ಜೆ.ಟಿ.ಪಾಟೀಲ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಸೋಮವಾರ ಬೀಳಗ ಮತಕ್ಷೇತ್ರದ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವ ಕುರಿತುಂತೆ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕುಡಿಯುವ ನೀರಿನ ನಿರ್ವಹಣೆ ಬಹಳ ಮುಖ್ಯವಾಗಿದ್ದು, ಮೊದಲು ಪೋಲ್ ಆಗುವ ನೀರನ್ನು ತಡೆದರೆ ಕುಡಿಯುವ ನೀರು ಕೊಡುವಲ್ಲಿ ತೊಂದರೆಯಾಗುವದನ್ನು ಕಡಿಮೆ ಮಾಡಬಹುದಾಗಿದೆ. ಕೆಲವೊಂದು ನಲ್ಲಿಗಳಿಗೆ ವಾಲ್‌ಕೂಡಾ ಇರುವದಿಲ್ಲ. ನೀರು ಸಾಕಾದರೂ ಬಂದ್ ಆಗದೇ ನೀರು ಪೋಲಾಗುತ್ತಿವೆ ಇದನ್ನು ಪರಿಶೀಲಿಸಿ ಕ್ರಮಕೈಗೊಳ್ಳಲು ತಿಳಿಸಿದರು.

    ಕೆಲವೊಬ್ಬರು ನಳದ ಟ್ಯಾಪ್ ಚಾಲು ಇಟ್ಟುಕೊಂಡೇ ಬಟ್ಟೆ ಒಗೆಯುತ್ತಿರುತ್ತಾರೆ. ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಪೋಲು ಆಗುತ್ತಿದೆ. ಈ ರೀತಿ ಕಂಡುಬಂದಲ್ಲಿ ಅಂತವರಿಗೆ ತಿಳಿವಳಿಕೆ ನೀಡಿ, ಮತ್ತೆ ಅದೇ ರೀತಿಯ ಮಾಡುವುದು ಕಂಡುಬಂದಲ್ಲಿ ನೀರಿನ ಕರದ ಎರಡು ಪಟ್ಟು ವಸೂಲಿ ಮಾಡಲಾಗುವುದೆಂದು ಗ್ರಾಮಗಳಲ್ಲಿ ಡಂಗೂರ ಸಾರಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಇಂದಿನಿಂದಲೇ ನೀರು ಪೋಲಾಗುವದನ್ನು ತಡೆದು ವರದಿ ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಬೀಳಗಿ ಮತಕ್ಷೇತ್ರದಲ್ಲಿ ಬೀಳಗಿ, ಬಾಗಲಕೋಟೆ ಹಾಗೂ ಬಾದಾಮಿ ತಾಲೂಕಿನ ಗ್ರಾಮಗಳು ಸೇರ್ಪಡೆಗೊಂಡಿದ್ದು, ವ್ಯಾಪ್ತಿಯ ಪ್ರತಿಯೊಂದು ಗ್ರಾಮಗಳ ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿಗಳ ಮೂಲಕ ಅಲ್ಲಿಯ ಕುಡಿಯುವ ನೀರಿನ ವಸ್ತುಸ್ಥಿತಿಯ ಬಗ್ಗೆ ಮಾಹಿತಿ ಪಡೆದುಕೊಂಡರು. ಪ್ರತಿ ಗ್ರಾಮಗಳಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಹಾಗೂ ಬೋರವೆಲ್ ಮೂಲಕ ಪೂರೈಸುವ ಗ್ರಾಮಗಳ ಮಾಹಿತಿ ಪಡೆದ ಅವರು ಸಮಸ್ಯಾತ್ಮಕ ಗ್ರಾಮಗಳಲ್ಲಿ ಖಾಸಗಿ ಬೋರವೆಲ್ ಮೂಲಕ ನೀರು ಪೂರೈಸಲು ಕ್ರಮವ”ಸಲು ತಿಳಿಸಿದರು. ಮತಕ್ಷೇತ್ರದ ಗ್ರಾಮಗಳಲ್ಲಿ ನೀರು ಬರದಿದ್ದರೆ ಜನಪ್ರತಿನಿಧಿಗಳನ್ನೇ ಪೋನ್ ಕರೆಗಳು ಬರುತ್ತಿವೆ. ಇದನ್ನು ಗಂಭೀರವಾಗಿ ಪರಿಗಣಿಸಿ ಕ್ರಮಕೈಗೊಳ್ಳಲು ಮುಂದಾಗಬೇಕು ಎಂದರು.

    ಬಹುಗ್ರಾಮ ಕುಟಿಯುವ ನೀರಿನ ಯೋಜನೆಗಳು ಸರಿಯಾಗಿ ನಿರ್ವಹಣೆ ಆಗುತ್ತಿಲ್ಲ. ಮುಂದಗನೂರು, ಚಿಕ್ಕಹಂಚಿನಾಳ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇರುವ ಬಗ್ಗೆ ಕಂಡುಬಂದಿದ್ದು, ಅಧಿಕಾರಿಗಳು ಜವಾಬ್ದಾರಿ ಅರಿತು ನೀರು ಪೂರೈಸಲು ಕ್ರಮವಹಿಸಬೇಕು. ಅಧಿಕಾರಿ ಕುಡಿಯುವ ನೀರಿನ ವಿಷಯದಲ್ಲಿ ಬೇಜವಾಬ್ದಾರಿ ತೋರುವಂಗಿಲ್ಲ. ವ್ಯಾಪ್ತಿಯ ಪ್ರತಿಯೊಂದು ಗ್ರಾಮಗಳ ಕುಡಿಯುವ ನೀರಿನ ವಸ್ತುಸ್ಥಿತಿ ಅರಿತು ನೀರಿನಿ ಸಮಸ್ಯೆಯಾಗದಂತೆ ಕ್ರಮಕೈಗೊಳ್ಳಲು ತಿಳಿಸಿದರು.

    ಬಾಗಲಕೋಟೆ ತಾಲೂಕಿನಲ್ಲಿ ಬೀಳಗಿ ಕ್ಷೇತ್ರಕ್ಕೆ 10 ಗ್ರಾಮ ಪಂಚಾಯತಿಗಳು ಬರಲಿದ್ದು, 147 ಬೋರವೆಲ್‌ಗಳಲ್ಲಿ 120 ಬೋರವೆಲ್‌ಗಳು ಚಾಲು ಇವೆ. ಬಾಕಿ 29 ಬೋರವೆಲ್‌ಗಳು ಕಳೆದ 4 ತಿಂಗಳಿನಿಂದ ಬಂದ್ ಆಗಿರುವುದಾಗಿ ವ್ಯಾಪ್ತಿಯ ಅಭಿಯಂತರರು ಸಭೆಗೆ ಮಾಹಿತಿ ನೀಡಿದರು. ಬಾದಾಮಿ ತಾಲೂಕಿನಲ್ಲಿ ಕಂಕಣಬೂದಿಹಾಳ ಮತ್ತು ಕೈನಕಟ್ಟಿ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದ್ದು, ತುರ್ತು ಕ್ರಮಕೈಗೊಳ್ಳಲು ಅಭಿಯಂತರರು ಹಾಗೂ ಪಂಚಾಯತ ಅಭಿವೃದ್ದಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕಗಲಗೊಂಬ ಗ್ರಾಮಗಳಲ್ಲಿ ಪರಿಶಿಷ್ಟ ಕಾಲೋನಿಯ ನೀರಿನ ಸಮಸ್ಯೆಯನ್ನು ಕಾರ್ಯನಿರ್ವಾಹಕ ಅಧಿಕಾರಿ, ಸಹಾಯಕ ಅಬಿಯಂತರ ಹಾಗೂ ಅಲ್ಲಿಯ ಪಂಚಾಯತ ಅಭಿವೃಧ್ದಿ ಅಧಿಕಾರಿಗಳು ಕೂಡಿ ಬಗೆಹರಿಸುವ ಕೆಲಸ ಮಾಡಲು ತಿಳಿಸಿದರು.

    ಸಭೆಯಲ್ಲಿ ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ, ಗ್ರಾಮಿಣ ಕುಡಿಯುವ ನೀರಿನ ಯೋಜನೆ ಮುಖ್ಯ ಅಭಿಯಂತರ ಆಕಾಶ ಸೇರಿದಂತೆ ಬೀಳಗಿ, ಬಾಗಲಕೋಟೆ ಹಾಗೂ ಬಾದಾಮಿ ತಹಶೀಲ್ದಾರರು, ಸಹಾಯಕ ಅಭಿಯಂತರರು, ಪಂಚಾಯತ ಅಬಿವೃದ್ದಿ ಅಧಿಕಾರಿಗಳು ಉಪಸ್ಥಿತರಿದ್ದರು.

    Share. Facebook Twitter Pinterest LinkedIn WhatsApp Reddit Tumblr Email

    Related Posts

    May 22, 2025 ಬಾಗಲಕೋಟೆ

    ಅಯೋಧ್ಯೆಗೆ ವಾರಕ್ಕೆ ಮೂರು ದಿನ ರೈಲು ಓಡಿಸಿ: ಪೂಜಾರ

    May 22, 2025 ಬಾಗಲಕೋಟೆ

    ಶೀಘ್ರದಲ್ಲೇ ಬಾಗಲಕೋಟೆಗೆ ವಂದೇ ಭಾರತ ರೈಲು: ಸೋಮಣ್ಣ

    May 22, 2025 ಬಾಗಲಕೋಟೆ

    ಮೋದಿ ಅಪಮಾನಿಸಿ ಪೋಸ್ಟ್; ಯುವಕ ಪೋಲಿಸ್ ವಶಕ್ಕೆ

    May 20, 2025 ಬಾಗಲಕೋಟೆ

    ರಾಜಕೀಯ ಪರಾಕಾಷ್ಟೆ ತಲುಪಿದ ಬಣ ಬಡಿದಾಟ

    May 20, 2025 ಬಾಗಲಕೋಟೆ

    ನೌಕರಿ ಇಲ್ಲವೇ ದಯಾ ಮರಣ: ವಿಜಯಲಕ್ಷ್ಮೀ

    May 20, 2025 ಬಾಗಲಕೋಟೆ

    ಇನ್ನೂ 5 ದಿನಗಳ ಕಾಲ ಮಳೆ ಸಾಧ್ಯತೆ

    Facebook X (Twitter) Instagram Pinterest
    • Privacy Policy
    © 2025 Sanjedarshan. Developed by Vikimediatec Pvt Ltd.
    ಮಹೇಶ ಅಂಗಡಿ , ಸಂಪಾದಕರು, ಸಂಜೆದರ್ಶನ ದಿನ ಪತ್ರಿಕೆ, ಶಿವಗಿರಿ ಬಡಾವಣೆ 6ನೇ ಕ್ರಾಸ್, ವಿದ್ಯಾಗಿರಿ, ಬಾಗಲಕೋಟೆ-587102. ಮೋ: 9845228092

    Type above and press Enter to search. Press Esc to cancel.