ಬಾಗಲಕೋಟೆ: ರಾಷ್ಟ್ರೀಯ ಸ್ವಯಂ ಸೇವಕ ಸಂಘ 100 ವರ್ಷದ ಸಂಭ್ರಮದೊಂದಿಗೆ ವಿಜಯದಶಮಿ ಅಂಗವಾಗಿ ನಾಳೆ ದಿ.5 ರಂದು ನಗರದಲ್ಲಿ ಪಥಸಂಚಲನ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಆಗದಂತೆ ನೋಡಿಕೊಳ್ಳಲು ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಭದ್ರತೆಗಾಗಿ ಎಸ್ಪಿ 1, ಹೆಚ್ಚುವರಿ ಎಸ್ಪಿ 2, ಡಿಎಸ್ಪಿ 7, ಸಿಪಿಐ 15, ಪಿಎಸ್ಐ 62, ಎಎಸ್ಐ 74, ಹೆಡ್ ಕಾನ್ಸ್ಟೇಬಲ್/ ಕಾನ್ಸ್ಟೇಬಲ್ 602, ಹೋಮ್ ಗಾರ್ಡ್ಸ್ 320, ಡಿಎಆರ್ 5 ಮತ್ತು ಕೆಎಸ್‌ಆರ್‌ಪಿ 4 ತುಕಡಿಗಳನ್ನು ನಿಯೋಜಿಸಲಾಗಿದೆ.
