ಬಾಗಲಕೋಟೆ ; ಆಸ್ತಿ ವಿಷಯದ ವೈಷಮ್ಯದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ ಘಟನೆ ಸೀತಿಮನಿ ಹತ್ತಿರ ಗುರುವಾರ ಮಧ್ಯರಾತ್ರಿ ನಡೆದ ವರದಿಯಾಗಿದೆ.
ತಿಮ್ಮಾಪುರದ ಚನ್ನಪ್ಪ ಶಿವಪ್ಪ ತುಂಬರಮಟ್ಟಿ(೬೦)ಕೊಲೆಯಾದ ವ್ಯಕ್ತಿ ಎಂದು ಹೇಳಲಾಗಿದ್ದು, ಈ ಸಂಬಂಧ ಮೃತನ ಪುತ್ರ ಶಿವಾನಂದ ತುಮ್ಮರಮಟ್ಟಿ, ತನ್ನ ತಂದೆಯನ್ನು ಸಹೋದರ ಚನ್ನಬಸಪ್ಪ ತುಂಬರಮಟ್ಟಿ, ಶಿವಬಸವ್ವ ಚನ್ನಬಸಪ್ಪ ತುಂಬರಮಟ್ಟಿ, ರಮೇಶ ಮಹಾದೇವಪ್ಪ ಮನಗೂಳಿ ಹಾಗೂ ಇನ್ನಿತರರು ಸಂಚು ಮಾಡಿ ಸುಫಾರಿ ಕೊಟ್ಟು ಕೊಲೆ ಮಾಡಿಸಿದ್ದಾರೆಂದು ಬಾಗಲಕೋಟೆ ಗ್ರಾಮೀಣ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಡಿಎಸ್ ಪಿ ಪಂಪನಗೌಡ, ಗ್ರಾಮೀಣ ಸಿಪಿಐ ಎಚ್.ಆರ್.ಪಾಟೀಲ, ಪಿಎಸ್‌ಐ ಶರಣಬಸಪ್ಪ ಸಂಗಳದ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.