Close Menu
    Facebook X (Twitter) Instagram YouTube
    Facebook X (Twitter) Instagram YouTube
    Sanjedarshan
    Subscribe
    • ಇದೀಗ ಬಂದ ಸುದ್ದಿ
    • ಬಾಗಲಕೋಟೆ
    • ಸಿನೆಮಾ
    • EPaper
    • ಅರ್ಜಿ ಆಹ್ವಾನ
    • ಲೇಖನಗಳು
    Facebook X (Twitter) Instagram
    Sanjedarshan
    Home»ಇತರ ಜಿಲ್ಲಾ ಸುದ್ದಿ»ಬಣ್ಣ, ರುಚಿ, ವಾಸನೆಗೆ ಮರುಳಾಗದಿರಿ : ಸಚಿವ ತಿಮ್ಮಾಪೂರ
    ಇತರ ಜಿಲ್ಲಾ ಸುದ್ದಿ

    ಬಣ್ಣ, ರುಚಿ, ವಾಸನೆಗೆ ಮರುಳಾಗದಿರಿ : ಸಚಿವ ತಿಮ್ಮಾಪೂರ

    SanjeBy SanjeDecember 23, 20232 Mins Read

    ಬಾಗಲಕೋಟೆ ; ಯಾಂತ್ರಿಕ ಬದುಕಿನ ಜೀವನದ ಕಾರ್ಯ ಶೈಲಿಗೆ ಹೊಂದುವಂತೆ ಇಂದು ನಾವೆಲ್ಲರೂ ಹೊರಗಿನ ಪದಾರ್ಥಗಳ ಬಣ್ಣ, ರುಚಿ, ವಾಸನೆಗೆ ಮರುಳಾಗಿ ಅರೆ ಆಯುಷ್ಯ ಹೊಂದುತ್ತಿರುವುದು ಕಳವಳಕಾರಿ ವಿಷಯವಾಗಿದೆ ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್,ಬಿ.ತಿಮ್ಮಾಪೂರ ಹೇಳಿದರು.

    ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕೃಷಿ ಹಾಗೂ ಕೃಷಿ ಸಂಬಂಧಿತ ಇಲಾಖೆಗಳು, ಜಿಲ್ಲಾ ಕೃಷಿಕ ಸಮಾಜ, ಕೃಷಿ ವಿಶ್ವವಿದ್ಯಾಲಯ ಧಾರವಾಡ, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡ ಜಿಲ್ಲಾ ಮಟ್ಟದ ಸಿರಿಧಾನ್ಯ ಹಾಗೂ ಸಾವಯವ ಮೇಳ ಮತ್ತು ರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ಹಿಂದೆ ಜೋಳ, ಸಜ್ಜಿ, ನವಣಿ, ಗೂರಲು, ಅಗಸಿ ಮಡಿಕೆ ಮುಂತಾದ ಸಿರಿಧಾನ್ಯಗಳನ್ನು ಬಳಸಿಕೊಂಡು ಸದೃಡ ಕಾಯದೊಂದಿಗೆ ನೂರಾರು ವರ್ಷ ಬಾಳುತ್ತಿದ್ದರು. ಆದರೆ ಇಂದು ಸ್ವಲ್ಪ ಸಮಯದಲ್ಲಿ ರಾಸಾಯನಿಕ ಗೊಬ್ಬರಕ್ಕೆ ಮೊರೆ ಹೋಗಿ ಅಧಿಕ ಇಳುವರಿ ಬೆಳೆದು ಹಣ ಮಾಡಬೇಕೆಂಬ ದುರಾಸೆಯಿಂದ ವಿಷ ಆಹಾರ ತಿನ್ನು ಪರಿಸ್ಥಿತಿ ಬಂದಿದೆ. ಇತ್ತೀಚೆಗೆ ಜಾಗೃತಗೊಂಡ ಸಮಾಜ ಮತ್ತೆ ಸಿರಿಧಾನ್ಯ ಹಾಗೂ ಸಾವಯವ ಕೃಷಿಯತ್ತ ಒಲವು ತೋರುತ್ತಿರುವುದು ಸಂತಸವಾಗಿದೆ ಎಂದರು.

    ಭಾರತ ದೇಶ ಕೃಷಿ ಪ್ರಧಾನವಾಗಿದ್ದು, ರೈತರಿಗೆ ಹಾಗೂ ಕೃಷಿಗೆ ಹೆಚ್ಚಿನ ಉತ್ತೇಜನ ನೀಡಿದ ಚೌದರಿ ಚರಣಶಿಂಗ ಅವರ ಜನ್ಮ ದಿನದಂದು ರಾಷ್ಟ್ರೀಯ ರೈತ ದಿನಾಚರಣೆ ಆಚರಿಸಲಾಗುತ್ತಿದೆ ಎಂದ ಅವರು ಭಾರತೀಯ ಕೃಷಿ ಉತ್ಪನ್ನಗಳು ಇಂದು ವಿಶ್ವದಾದ್ಯಂತ ಬಹು ಬೇಡಿಕೆಯ ವಸ್ತುಗಳಾಗಿವೆ. ಈ ದಿಶೆಯಲ್ಲಿ ಯುವಕರು ಸುಧಾರಿಸಿದ ಕೃಷಿ ಮಾಡಿ ಸರಕಾರದ ಯೋಜನೆಗಳನ್ನು ಸಾಪಲ್ಯ ಮಾಡಿಕೊಂಡು ಆರೋಗ್ಯಯುಕ್ತ ಆರ್ಥಿಕ ಭದ್ರತೆ ಹೊಂದುವದರ ಜೊತೆಗೆ ಸಮಾಜಕ್ಕೊಂದು ಕೊಡುವ ನೀಡಬೇಕೆಂದು ಕರೆ ನೀಡಿದರು.

    ಸಂಸದ ಪಿ.ಸಿ.ಗದ್ದಿಗೌಡ ಮಾತನಾಡಿ ಪ್ರಾಚೀನ ಕಾಲದಿಂದಲು ಭಾರತ ದೇಶ ವಿಶೇಷ ಸ್ಥಾನ ಮಾನಗಳನ್ನು ಹೊಂದಿದ್ದು, ಇಂದು ಯೋಗ, ಸಿರಿಧಾನ್ಯ ಬೆಳೆ, ಸಾಯವಯ ಕೃಷಿ ಸೇರಿದಂತೆ ಮುಂತಾದವುಗಳನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸಿ ವಿಶ್ವದಲ್ಲಿಯೇ ಅಗ್ರಮಾನ ಸ್ಥಾನ ಹೊಂದಿದೆ ಎಂದು ತಿಳಿಸಿದರು. ಶಾಸಕ ಎಚ್.ವಾಯ್.ಮೇಟಿ ಮಾತನಾಡಿ ಉತ್ತಮ ಆರೋಗ್ಯಕ್ಕೆ ಸಿರಿಧಾನ್ಯ ಬಳಕೆ ಅಗತ್ಯವಾಗಿದೆ. ಯುವ ಜನತೆ ಇದನ್ನು ಅರಿವು ಬಳಕೆಗೆ ಮುಂದಾಗಬೇಕು ಎಂದರು.

    ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಮಾತನಾಡಿ, ಹಿಂದಿನ ಕಾಲದಲ್ಲಿ ಅವಿಭಕ್ತ ಕುಟುಂಬ ಇದ್ದ ಕಾರಣ ಆಹಾರ ವಿಹಾರಗಳಲ್ಲಿ ವಿಶೇಷತೆ ಒಳಗೊಂಡಂತೆ ಅವಿನಾಭಾವ ಸಂಬಂಧವಿತ್ತು. ಮತ್ತು ಸಿರಿಧಾನ್ಯ, ಹೈನು, ತರಕಾರಿಗಳನ್ನು ಬಳಸಿಕೊಂಡು ಗಟ್ಟಿ ಮುಟ್ಟಾದ ಶರೀರ ಕಾಯ್ದುಕೊಳ್ಳುತ್ತಿದ್ದರು. ಇಂದಿನ ಜನತೆಗೆ ಹಸಿವೆ ಇಲ್ಲ. ಕೇವಲ ನಾಲಿಗೆ ರುಚಿಯಾಗಿ ಹೊಟ್ಟೆ ಕೆಡಿಸಿಕೊಳ್ಳು, ಆರೋಗ್ಯಕ್ಕೆ ಮಾರಕವಾಗುವ ಆಹಾರದತ್ತ ಆಕರ್ಷಣೆಗೆ ಒಳಗಾಗುತ್ತಿರುವುದು ವಿಷಾಧನೀಯ ಸಂಗತಿ. ಇನ್ನಾದರೂ ಜನ ಜಾಗೃತಗೊಳ್ಳಬೇಕು. ಮೊದಲು ಆರೋಗ್ಯ ನಂತರ ಸಂಪತ್ತು ಎಂಬುದನ್ನು ಅರಿಯಬೇಕು ಎಂದರು.

    ಕಾರ್ಯಕ್ರಮದಲ್ಲಿ ಶಾಸಕ ಸಿದ್ದು ಸವದಿ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಪಿ.ಕೆ.ಬಂಥನಾಳ, ಜಂಟಿ ಕೃಷಿ ನಿರ್ದೇಶಕ ಲಕ್ಷ್ಮಣ ಕಳ್ಳೆನ್ನವರ, ಉಪನಿರ್ದೇಶಕರಾದ ಎಲ್.ಆಯ್.ರೂಢಗಿ, ಕೆ.ಎಸ್.ಅಗಸನಾಳ, ಸಹಾಯಕ ನಿರ್ದೇಶಕರಾದ ಪಾಂಡಪ್ಪ ಲಮಾಣಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

    Share. Facebook Twitter Pinterest LinkedIn WhatsApp Reddit Tumblr Email

    Related Posts

    July 19, 2025 ಬಾಗಲಕೋಟೆ

    ಪಂಚಮಸಾಲಿ ಪೀಠಕ್ಕೆ ಪರ್ಯಾಯ ಶ್ರೀ ನೇಮಕ

    May 17, 2025 ಬಾಗಲಕೋಟೆ

    ನಿಡಗುಂದಿಯಲ್ಲಿ ಶಿಕ್ಷಕರಿಗಾಗಿ ಬೃಹತ್ ಉದ್ಯೋಗ ಮೇಳ

    February 18, 2024 ಇತರ ಜಿಲ್ಲಾ ಸುದ್ದಿ

    ಪಂಚಮುಖಿ ಆಂಜನೇಯ ದೇವಸ್ಥಾನಕ್ಕೆ ರಂಭಾಪುರಿ ಸ್ವಾಮೀಜಿ ಭೇಟಿ

    January 20, 2024 ಇತರ ಜಿಲ್ಲಾ ಸುದ್ದಿ

    ಪ್ರೌಢಶಾಲಾ ಸಹಶಿಕ್ಷಕಿ ಅಮಾನತ್ತು

    January 19, 2024 ಇತರ ಜಿಲ್ಲಾ ಸುದ್ದಿ

    ಬಾಗಲಕೋಟೆ ಎಫ್‍ಎಂ ಕೇಂದ್ರಕ್ಕೆ ಗದ್ದಿಗೌಡ ಚಾಲನೆ

    January 18, 2024 ಇತರ ಜಿಲ್ಲಾ ಸುದ್ದಿ

    ಪಂಚಮುಖಿ ಆಂಜನೇಯ ಮೂರ್ತಿಯ ಬೃಹತ್ ಮೆರವಣಿಗೆ

    Facebook X (Twitter) Instagram Pinterest
    • Privacy Policy
    © 2025 Sanjedarshan. Developed by Vikimediatec Pvt Ltd.
    ಮಹೇಶ ಅಂಗಡಿ, ಸಂಪಾದಕರು, ಸಂಜೆದರ್ಶನ ದಿನ ಪತ್ರಿಕೆ, ಶಿವಗಿರಿ ಬಡಾವಣೆ 6ನೇ ಕ್ರಾಸ್, ವಿದ್ಯಾಗಿರಿ, ಬಾಗಲಕೋಟೆ-587102. ಮೋ: 9845228092

    Type above and press Enter to search. Press Esc to cancel.