ಬಾಗಲಕೋಟೆ: ಸಾಂಪ್ರದಾಯಿಕ ಅಲೆಮಾರಿ ಕುರಿಗಾಹಿಗಳ ಹಿತರಕ್ಷಣಾ ಕಾಯ್ದೆ ಮಸೂದೆ ಮಂಡಿಸಿರುವ ಸರ್ಕಾರದ ಕ್ರಮವನ್ನು ಕರ್ನಾಟಕ ಪ್ರದೇಶ ಕುರುಬರ ಪದವೀಧರರ ಸಂಘ ಸ್ವಾಗತಿಸಿದೆ.
ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಯಂಕಣ್ಣ ಬಬಲಾದಿ, ಹಣಮಂತ ಯಮಗಾರ ಮಾತನಾಡಿದರು. ರಾಜ್ಯದ ನಾನಾ ಕಡೆಗಳಲ್ಲಿ ಸಾಂಪ್ರದಾಯಿಕ ಅಲೆಮಾರಿ ಕುರಿಗಾಹಿಗಳ ಮೇಲೆ ಆಗಾಗ್ಗೆ ದೌರ್ಜನ್ಯಗಳು ನಡೆಯುತ್ತಲೇ ಇವೆ. ಇಂತಹ ಕೃತ್ಯಗಳ ತಡೆಗೆ ಪರಿಣಾಮಕಾರಿ ಕಾನೂನು ಅಗತ್ಯವಾಗಿತ್ತು. ಈ ವಿಧೇಯಕ ತಡೆ ಕಾನೂನು ಜಾರಿಗೆ ಒತ್ತಾಯಿಸಿ ನಡೆದ ಹೋರಾಟ ಬೆಂಬಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಕೆ. ವೆಂಕಟೇಶ, ಶಾಸಕ ಭೀಮಸೇನ ಚಿಮ್ಮನಕಟ್ಟಿ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಅವರು ತಿಳಿಸಿದರು.
ಕುರಿಗಾಹಿಗಳ ಹಿತರಕ್ಷಣಾ ಮಸೂದೆ ಅಂಗೀಕಾರ ಆಗಿರುವುದು ಸಂತಸದ ಸಂಗತಿ ಎಂದು ಅವರು ತಿಳಿಸಿದರು. ಶಿವಲಿಂಗ ನಿಂಗನೂರ, ಎಂ.ಡಿ.ಬಿಲ್ಲಾರ, ರಾಘವೇಂದ್ರ ಯಾದಗಿರಿ, ತಿಪ್ಪಣ್ಣ ದೇವರೆಡ್ಡಿಇತರರುಇದ್ದರು.