ರಾಜ್‌ಕುಮಾರ್ ರಾವ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಬಹುನಿರೀಕ್ಷಿತ ‘ಮಾಲಿಕ್’ ಚಿತ್ರದ ಟ್ರೈಲರ್ ಜುಲೈ 1 ರಂದು ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಟ್ರೈಲರ್ ಬಿಡುಗಡೆಯಾದ 24 ಗಂಟೆಯೊಳಗೆ 12 ಮಿಲಿಯನ್ ವೀಕ್ಷಣೆಗಳನ್ನು ಪಡೆದು ಗಮನ ಸೆಳೆದಿದೆ.
Tips Industries & Northern Lights Films ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರವನ್ನು ಪುಲ್ಕಿತ್ ನಿರ್ದೇಶಿಸಿದ್ದಾರೆ. ರಾಜ್‌ಕುಮಾರ್ ರಾವ್ ಮತ್ತು ಪುಲ್ಕಿತ್ ಜೋಡಿ ಎರಡನೇ ಬಾರಿಗೆ ಒಂದಾಗಿರುವುದು ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ಈ ಚಿತ್ರಕ್ಕೆ ಸಚಿನ್-ಜಿಗರ್ ಸಂಗೀತ ಸಂಯೋಜಿಸಿದ್ದಾರೆ.
ಚಿತ್ರದ ತಾರಾಬಳಗದಲ್ಲಿ ರಾಜ್‌ಕುಮಾರ್ ರಾವ್ ಜೊತೆಗೆ ಮಾನುಷಿ ಚಿಲ್ಲರ್, ಮೇಧಾ ಶಂಕರ್, ಹುಮಾ ಖುರೇಷಿ ಮತ್ತು ಸೌರಭ್ ಶುಕ್ಲಾ ಮುಂತಾದವರು ನಟಿಸಿದ್ದಾರೆ.
‘ಮಾಲಿಕ್’ ಚಿತ್ರವು ಜುಲೈ 11 ರಂದು ತೆರೆಗೆ ಬರಲಿದೆ ಎಂದು ಚಿತ್ರತಂಡ ತಿಳಿಸಿದೆ.