ನಟಿ ಕಾಜೋಲ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಬಹುನಿರೀಕ್ಷಿತ ‘ಮಾ’ ಚಿತ್ರದ ಟ್ರೈಲರ್ ಇಂದು(ಮೇ 29) ಬಿಡುಗಡೆಯಾಗಿದ್ದು, ಪ್ರೇಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿದೆ.
ಜಿಯೋ ಸ್ಟುಡಿಯೋಸ್ ಮತ್ತು ದೇವಗನ್ ಫಿಲಮ್ಸ್ ಬ್ಯಾನರ್ ಅಡಿ ಹಿಂದಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರ, ಹಿಂದಿ ಸೇರಿದಂತೆ ತಮಿಳು, ತೆಲುಗು ಮತ್ತು ಬೆಂಗಾಲಿ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ.
‘ಮಾ’ ಚಿತ್ರದಲ್ಲಿ ಕಾಜೋಲ್ ಜೊತೆಗೆ ಖ್ಯಾತ ನಟ ರೋನಿತ್ ರಾಯ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಶಾಲ್ ಫ್ಯೂರಿಯಾ ನಿರ್ದೇಶನದ ಈ ಚಿತ್ರಕ್ಕೆ ಸಾಯಿವಿನ್ ಕ್ವಾಡ್ರಸ್ ಮತ್ತು ಆಮಿಲ್ ಕೀಯಾನ್ ಖಾನ್ ಕಥೆ ಬರೆದಿದ್ದಾರೆ.
‘ಮಾ’ ಚಿತ್ರವನ್ನು ಜೂನ್ 27 ರಂದು ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವುದಾಗಿ ಚಿತ್ರತಂಡ ತಿಳಿಸಿದೆ.