ಬಾಗಲಕೋಟೆ: ರಾಜ್ಯ ಬ್ರಾಹ್ಮಣ ಅಭಿವೃದ್ದಿ ಮಂಡಳಿ ವತಿಯಿಂದ ಬ್ರಾಹ್ಮಣ ಸಮಾಜದವರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಸಾಲ, ಸಹಾಯಧನ ನೀಡಲಾ ಗುವುದು ಎಂದು ಮಂಡಳಿಯ ಅಧ್ಯಕ್ಷರಾದ ಅಸಗೋಡು ಜಯಸಿಂಹ ಹೇಳಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ರಾಹ್ಮಣ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಷ್ಯವೇತನ, ಯುವಕ, ಯುವತಿಯರಿಗೆ ಸಾಲ ಸೌಲಭ್ಯ ಒದಗಿಸಲಾಗುವುದು ಎಂದರು.
ಹಲವು ವೃತ್ತಿಗಳಾದ ಹಸು ಸಾಗಾಣಿಕೆ, ಗುಡಿ ಕೈಗಾರಿಕೆ, ಸಣ್ಣ ಕೈಗಾರಿಕೆ, ಹೋಟೆಲ್ ಉದ್ಯಮ, ಟ್ಯಾಕ್ಸಿ ಹಾಗೂ ವ್ಯಾಪಾರ ವಹಿವಾಟುಗಳನ್ನು ಕೈಗೊಳ್ಳಲು ಕನಿಷ್ಠ ೧ ಲಕ್ಷ ಹಾಗೂ ಗರಿಷ್ಠ ೨ ಲಕ್ಷ ರೂ.ಗಳನ್ನು ಆರ್ಥಿಕ ನೆರವು ನೀಡಲಾಗುವುದು ಎಂದು ತಿಳಿಸಿದರು.
ಈಗಾಗಲೇ ಮಂಡಳಿಯು ಸಾಕಷ್ಟು ಆರ್ಥಿಕ ನೆರವನ್ನು ಸಮುದಾಯದವರಿಗೆ ನೀಡಿದ್ದು, ಸಿದ್ದರಾಮಯ್ಯ ಸರ್ಕಾರದಲ್ಲಿ ೩೦ ಕೋಟಿ ರೂ. ಬಜೆಟ್‌ನಲ್ಲಿ ಇಟ್ಟಿದ್ದಾರೆ. ಯಾವ ಸರ್ಕಾರಗಳು ಬಜೆಟ್‌ನಲ್ಲಿ ಇಷ್ಟು ಹಣವನ್ನು ಇಟ್ಟಿಲ್ಲ. ಆದರೆ ಸಿದ್ದರಾಮಯ್ಯ ಸರ್ಕಾರ ಮಂಡಳಿ ಪರವಾಗಿದ್ದು, ಸಮುದಾಯವನ್ನು ಎತ್ತಿ ಹಿಡಿದಿದ್ದಾರೆಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ನಾರಾಯಣ ದೇಸಾಯಿ, ಗುರುರಾಜ್ ಗೊಂಬಿ, ವೆಂಕಟೇಶ ದೇಶಪಾಂಡೆ, ರಾಜೇಂದ್ರ ದೇಶಪಾಂಡೆ, ಪವನ ಸೀಮಿಕೇರಿ ಇದ್ದರು.