ಬಾಗಲಕೋಟೆ: 2025-2026ನೇ ಸಾಲಿನ ಲಯನ್ಸ್ ಸಂಸ್ಥೆ ಅಧ್ಯಕ್ಷರಾಗಿ ಡಿಂಕೇಶ್ ಬರಾಣಪುರ, ಕಾರ್ಯದರ್ಶಿಯಾಗಿ ಸಂಜೀವ ಪಾಟೀಲ್, ಖಜಾಂಚಿಯಾಗಿ ಚನ್ನಬಸಪ್ಪ ದಂಡಿನ ಅವರು ಆಯ್ಕೆಯಾಗಿದ್ದಾರೆ ಎಂದು ಹಿಂದಿನ ಅಧ್ಯಕ್ಷ ಸಿದ್ದಣ್ಣ ಹಂಪನಗೌಡರ ತಿಳಿಸಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಜು. ೬, ರವಿವಾರ ಸಂಜೆ ೬ ಗಂಟೆಗೆ ಸಿ.ವಿ. ಚರಂತಿಮಠ ಕಲ್ಯಾಣ ಮಂಟಪದಲ್ಲಿ ನಡೆಯಲಿದ್ದು, ಪದಗ್ರಹಣ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಸಂಧ್ಯಾ ಶೆನೈ, ಜಿಲ್ಲಾ ಗವರ್ನರ್ ಜೈಮೋಲ ನಾಯಕ್, ಜಿಲ್ಲಾ ಸೆಕ್ರೆಟರಿ ಡಾ. ಕೀರ್ತಿ ನಾಯಕ ಅವರು ಆಗಮಿಸಲಿದ್ದಾರೆ ಎಂದರು.
ನೂತನ ಅಧ್ಯಕ್ಷ ಡಿಂಕೇಶ್ ಬರಾಣಾಪೂರ್ ಮಾತನಾಡಿ, ಈ ವರ್ಷವೂ ಅನೇಕ ಯೋಜನೆಗಳನ್ನು ಹಾಕಿಕೊಂಡಿದ್ದು ಹಿಂದಿನ ಕಾರ್ಯಕ್ರಮಗಳ ಜೊತೆಗೆ ಎಲ್ಲ ಯೋಜನೆಗಳನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದರು.
ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಚಟುವಟಿಕೆ ಗಳನ್ನು ಇಲ್ಲಿ ಹಮ್ಮಿಕೊಳ್ಳಲಾಗಿದೆ ಕಣ್ಣಿನ ತಪಾಸಣೆ ಹಾಗೂ ಆಪರೇಷನ್ ರಕ್ತದೊತ್ತಡ ಮತ್ತು ಸಕ್ಕರೆ ಕಾಯಿಲೆ ತಪಾಸಣೆ ಮತ್ತು ಅದಕ್ಕೆ ಉತ್ತಮ ಚಿಕಿತ್ಸೆ ನೀಡುವುದು ಅದೇ ರೀತಿ ಎಲ್ಲರಿಗೂ ಆರೋಗ್ಯ ತಪಾಸಣೆ ಶಿಬಿರಗಳನ್ನು ನೆರವೇರಿಸುವುದು. ಹೀಗೆ ಹತ್ತು ಹಲವಾರು ಆರೋಗ್ಯಕ್ಕೆ ಸಂಬಂಧಿಸಿದ ಸಮಾಜಮುಖಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ತೀರ್ಮಾನಿಸಿದ್ದೇವೆ.
ಜಿಲ್ಲಾ ಲಯನ್ಸ್ ಸಂಸ್ಥೆ ಅಂತರರಾಷ್ಟ್ರೀಯ ಲಯನ್ಸ್ ಸಂಸ್ಥೆ ಹಾಗೂ ಎಂ.ಎಂ. ಜೋಶಿ ಕಣ್ಣಿನ ಆಸ್ಪತ್ರೆಯ ಸಹಯೋಗದೊಂದಿಗೆ ಹುನಗುಂದದಲ್ಲಿ ಈ ವರ್ಷ ಕಣ್ಣಿನ ಆಸ್ಪತ್ರೆಯನ್ನು ಪ್ರಾರಂಭಿಸಲು ತೀರ್ಮಾನಿಸಿದ್ದು, ಇದು ಪೂರ್ತಿ ಉಚಿತ ಆಸ್ಪತ್ರೆಯಾಗಿದೆ. ಬಾಗಲಕೋಟ ಲಯನ್ಸ್ ಸಂಸ್ಥೆಯು ಇದರ ಉಸ್ತುವಾರಿ ವಹಿಸಲಿದೆ. ಅದೇ ರೀತಿ ಕೆಲವು ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಲ್ಲಿನ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ಅನೇಕ ಸೇವಾ ಕಾರ್ಯಗಳನ್ನು ಕೈಗೊಳ್ಳಲಿದ್ದಾರೆ. ಅದರಂತೆ ನಿಸರ್ಗದತ್ತ ಕಾಳಜಿ ವಹಿಸಿ ಅನೇಕ ಗಿಡ ನೆಡುವ ಕಾರ್ಯಕ್ರಮಗಳನ್ನು ಕೂಡ ಹಮ್ಮಿಕೊಂಡಿದ್ದಾರೆ. ಈ ವರ್ಷ ಪೂರ್ತಿ ಹತ್ತು ಹಲವಾರು ಸಮಾಜಸೇವೆ, ಸಮಾಜಮುಖಿ ಮತ್ತು ಜನಪರ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುವುದು. ಸಮಾಜದಲ್ಲಿನ ಕಡುಬಡವರಿಗೆ ಮತ್ತು ಅವಶ್ಯಕತೆ ಇರುವ ಯಾರೇ ಆಗಿರಲಿ ಅವರ ಸಹಾಯಕ್ಕೆ ಲಯನ್ ಸಂಸ್ಥೆಯು ಯಾವಾಗಲೂ ತನ್ನ ಕೈ ಚಾಚಿರುತ್ತದೆ ಎಂದರು.
ಈ ವರ್ಷ ಲಯನ್ಸ್ ಬ್ರ್ಯಾಂಚ್ ಕ್ಲಬ್ಬಿನ ಅಧ್ಯಕ್ಷರಾಗಿ ತೃಪ್ತಿ ದರ್ಬಾರ್ ಮತ್ತು ಕಾರ್ಯದರ್ಶಿಯಾಗಿ ದೀಪಾ ಎಂ. ಶೀಲುವಂತ ಅವರು ಕೂಡ ಅಧಿಕಾರ ಸ್ವೀಕರಿಸಲಿದ್ದಾರೆ.
ಬ್ರ್ಯಾಂಚ್ ಕ್ಲಬ್‌ನಿಂದ ಕೂಡ ಅನೇಕ ಜನ ಸೇವಾ ಕಾರ್ಯಗಳನ್ನು ನೆರವೇರಿಸುವುದಾಗಿ ಅಧ್ಯಕ್ಷರು ತಿಳಿಸಿದರು. ಮಹಿಳೆಯರಿಗಾಗಿ ಆರೋಗ್ಯ, ಕ್ಯಾನ್ಸರ್, ರಕ್ತ ತಪಾಸಣೆ ಮತ್ತು ಅನೇಕ ಆರೋಗ್ಯ ಶಿಬಿರಗಳನ್ನು ಏರ್ಪಡಿಸುವುದಾಗಿ ತಿಳಿಸಿದರು. ಅದರ ಜೊತೆಗೆ ಮಹಿಳೆಯರ ಹಬ್ಬ ಹರಿದಿನಗಳ ಸಂಭ್ರಮದ ಕಾರ್ಯಕ್ರಮಗಳನ್ನು ಕೂಡ ಅವರು ನೆರವೇರಿಸಲಿದ್ದೇವೆ. ಮಹಿಳೆಯರಿಗಾಗಿ ಅನೇಕ ಸ್ಪರ್ಧಾತ್ಮಕ ಚಟುವಟಿಕೆಗಳನ್ನು ಕೂಡ ಹಮ್ಮಿಕೊಳ್ಳಲಾಗುವುದೆಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ನೂತನ ಕಾರ್ಯದರ್ಶಿ ಸಂಜು ಪಾಟೀಲ, ಚನ್ನಬಸಪ್ಪ ದಂಡಿನ , ಸ್ನೇಹಾ ಇಂಜಗನೇರಿ ಇದ್ದರು.