ಬಾಗಲಕೋಟೆ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು 2025-26ನೇ ಸಾಲಿನ ಜುಲೈ ಆವೃತ್ತಿಯ ಪ್ರಥಮ ವರ್ಷದ ಪ್ರವೇಶಾತಿ ಪ್ರಾರಂಭವಾಗಿದ್ದು, ವಿಶ್ವವಿದ್ಯಾನಿಲಯದ ಸ್ನಾತಕ (ಯುಜಿ), ಸ್ನಾತಕೋತ್ತರ (ಪಿಜಿ) ಶಿಕ್ಷಣ ಕಾರ್ಯಕ್ರಮಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಜುಲೈ 1 ರಿಂದ ಅಗಷ್ಟ 15ರವರಿಗೆ ಅರ್ಜಿ ಸಲ್ಲಿಸಬಹುದು.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ ವಿ.ವಿ.ಯ ಅಂತರ್ಜಾಲ www.ksoumysuru.ac.in ಅನ್ನು ಸಂಪರ್ಕಿಸಿಬಹುದು ಅಥವಾ ಖುದ್ದಾಗಿ ಪ್ರಾದೇಶಿಕ ಕೇಂದ್ರದ ದೂ.ಸಂ. 88800 06044, 97435 82257, 73530 02301, 88610 40975ಗೆ ಸಂಪರ್ಕಿಸಿ ಪ್ರವೇಶಾತಿಗೆ ಸಂಬಂಧಿಸಿದ ಮಾಹಿತಿ ಪಡೆಯುವಂತೆ ಕರಾಮುವಿವಿ ಪ್ರಾದೇಶಿಕ ಕೇಂದ್ರದ ಪ್ರಾದೇಶಿಕ ನಿರ್ದೇಶಕ ಅರುಣ್ ಕೆ.ಎಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.