Close Menu
    Facebook X (Twitter) Instagram YouTube
    Facebook X (Twitter) Instagram YouTube
    Sanjedarshan
    Subscribe
    • ಇದೀಗ ಬಂದ ಸುದ್ದಿ
    • ಬಾಗಲಕೋಟೆ
    • ಇತರ ಜಿಲ್ಲಾ ಸುದ್ದಿ
    • ಸಿನೆಮಾ
    • ರಾಜ್ಯ
    • ರಾಷ್ಟ್ರೀಯ
    • ಕ್ರೀಡಾ ಸುದ್ದಿ
    • EPaper
    Facebook X (Twitter) Instagram
    Sanjedarshan
    Home»ಸಿನೆಮಾ»ಟಿವಿ»ಜೂ.16ರಿಂದ ಜೀ಼ ಕನ್ನಡದಲ್ಲಿ ‘ಕರ್ಣ’ ಧಾರಾವಾಹಿ ಆರಂಭ
    ಟಿವಿ

    ಜೂ.16ರಿಂದ ಜೀ಼ ಕನ್ನಡದಲ್ಲಿ ‘ಕರ್ಣ’ ಧಾರಾವಾಹಿ ಆರಂಭ

    SanjeBy SanjeJune 14, 20252 Mins Read
    ಕರ್ಣ

    ‘ವಿಧಿ’ಯಾಟದ ವಿರುದ್ಧ ಪ್ರೀತಿಯ ಹೋರಾಟ ಬರ್ತಿದೆ ಕರ್ಣ. ವಿಭಿನ್ನವಾದ ಕಥೆಯುಳ್ಳ ಧಾರಾವಾಹಿಗಳು, ವಿನೋದಮಯವಾದ ಕಾನ್ಸೆಪ್ಟ್ ಇರೋ ಗೇಮ್ ಶೋಗಳು ಮತ್ತು ಸೂಪರ್ ಹಿಟ್ ಚಲನಚಿತ್ರಗಳನ್ನು ಪ್ರಸಾರ ಮಾಡುವ ಮೂಲಕ ಜನರ ಮನಗೆದ್ದು ಮನರಂಜನೆಯ ಮಹಾರಾಜ ಎಂದು ಖ್ಯಾತಿ ಪಡೆದ ವಾಹಿನಿ ಜೀ಼ ಕನ್ನಡ. ಈಗ ಜೀ಼ ಕನ್ನಡ ವಾಹಿನಿ ಪ್ರೀತಿಯ ವೀಕ್ಷಕರನ್ನು ಮನರಂಜಿಸಲು ಮತ್ತೊಂದು ಅಮೋಘ ಧಾರಾವಾಹಿಯನ್ನು ಹೊತ್ತುತರಲಿದೆ. ‘ಕರ್ಣ’ ಎಂಬ ಶೀರ್ಷಿಕೆಯುಳ್ಳ ಈ ಧಾರಾವಾಹಿಯು ಭಾವನೆಗಳಿಗೆ ಒತ್ತು ಕೊಟ್ಟಿರುವುದರಿಂದ ಎಲ್ಲಾ ವಯೋಮಿತಿಯ ಜನರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿ ಆಗಲಿದೆ ಎಂದರೆ ತಪ್ಪಾಗಲ್ಲ.

    ‘ಕರ್ಣ’ ಧಾರಾವಾಹಿಯ ಮೊದಲ ಪ್ರೊಮೊ ಬಿಡುಗಡೆ ಆದ ಸ್ವಲ್ಪ ಹೊತ್ತಿಗೆ ಸಕ್ಕತ್ ವೈರಲ್ ಆಗಿದ್ದು ಕನ್ನಡಿಗರ ಮನಗೆದ್ದಿದೆ. ಸಿನೆಮಾಟೋಗ್ರಫಿ, ನಿರ್ದೇಶನ, ಕಿರಣ್ ರಾಜ್ ನಟನೆ ಬಗ್ಗೆ ಪ್ರೇಕ್ಷಕರು ಅತಿಯಾದ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಮತ್ತೊಂದು ಸರ್ಪ್ರೈಸ್ ಎಂಬಂತೆ ವಾಹಿನಿ ಭವ್ಯ ಗೌಡ-ಕಿರಣ್ ರಾಜ್ ಹಾಡನ್ನು ಬಿಟ್ಟಿದ್ದು ಇವರಿಬ್ಬರ ಕೆಮಿಸ್ಟ್ರಿ ಪ್ರೇಕ್ಷಕರ ಮನದಲ್ಲಿ ಕಚಗುಳಿ ಎಬ್ಬಿಸಿದೆ. ಅಷ್ಟೇ ಅಲ್ಲದೇ ಪ್ರೊಮೊ ಮತ್ತು ಹಾಡು ಎರಡೂ ಸಕ್ಕತ್ ಆಗಿ ಮೂಡಿ ಬಂದಿದ್ದು ಧಾರಾವಾಹಿಯನ್ನು ನೋಡಲು ಜನರು ಹಾತೊರೆಯುತ್ತಿದ್ದಾರೆ.

    ಇನ್ನು, ವರುಷಗಳ ನಟ ಕಿರಣ್ ರಾಜ್ ಮರಳಿ ಕಿರುತೆರೆಗೆ ಬರುತ್ತಿರುವುದು ಅವರ ಅಭಿಮಾನಿಗಳಲ್ಲಿ ಉತ್ಸುಕತೆಯನ್ನು ಹೆಚ್ಚಿಸಿದೆ. ಅಷ್ಟೇ ಅಲ್ಲದೇ ಕಿರುತೆರೆಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ ಭವ್ಯ ಗೌಡ ಮತ್ತು ನಮ್ರತಾ ಗೌಡ ಅವರು ಕಿರಣ್ ರಾಜ್ ಅವರಿಗೆ ಜೋಡಿಯಾಗಿ ನಟಿಸಲಿದ್ದಾರೆ. ಇನ್ನು ಈ ಫ್ರೆಶ್ ಜೋಡಿಯ ಮೋಡಿ ಹೇಗಿರಲಿದೆ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಹೆಚ್ಚಾಗಿದೆ. ಅಷ್ಟೇ ಅಲ್ಲದೇ ಕರ್ಣ ಪ್ರೊಮೊ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ಸದ್ದು ಮಾಡಿದ್ದು ಅಲ್ಲದೇ ಕಾಮೆಂಟ್ ಸೆಕ್ಷನ್ ಗಳು ಪಾಸಿಟಿವ್ ಕಾಮೆಂಟ್ ಗಳಿಂದ ತುಂಬಿವೆ. ಶ್ರುತಿ ನಾಯ್ಡು ಪ್ರೊಡ್ಯೂಸ್ ಮಾಡುತ್ತಿರುವ ಈ ಧಾರಾವಾಹಿಯಲ್ಲಿ ಹಿರಿಯ ನಟರಾದ ಅಶೋಕ್, ನಾಗಾಭರಣ ಸೇರಿ ಹಲವಾರು ದಿಗ್ಗಜರು ಅಭಿನಯಿಸಿದ್ದಾರೆ.

    ಪ್ರತಿಷ್ಠಿತ ಕುಟುಂಬದ ರಾಮ ಕೃಷ್ಣ ವಸಿಷ್ಠ ಅನಾಥವಾಗಿ ಬಿದ್ದಿದ್ದ, ಕಸದಬುಟ್ಟಿಯಿಂದ ರಕ್ಷಿಸಿದ ಮಗುವೇ ‘ಕರ್ಣ’. ತಾತನಿಗೆ ಕೊಟ್ಟ ಮಾತಿನಂತೆ ದೊಡ್ಡವನಾದ ಮೇಲೆ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞನಾಗಿ ತಾತ ಕಟ್ಟಿಸಿದ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಾನೆ. ಅಷ್ಟೇ ಅಲ್ಲದೇ ಯಾವ ತಾಯಿಯು ಮಗುವನ್ನು ಕಳೆದುಕೊಳ್ಳಬಾರದು ಮತ್ತು ಯಾವ ಮಗುವು ಅಮ್ಮನಿಲ್ಲದ ತಬ್ಬಲಿಯಾಗಬಾರದು ಎಂಬುದು ಇವನ ಸಿದ್ದಾಂತ. ಸದಾ ಬಡವರ ಸೇವೆಗೆ ತುಡಿಯುವ ಈ ನಿಷ್ಕಲ್ಮಶ ಮನಸ್ಸಿನ ಕರ್ಣನಿಗೆ ಮನೆಯಲ್ಲಿ ಸಿಕ್ಕಿದ್ದು ಮಾತ್ರ ತಿರಸ್ಕಾರ. ಎಲ್ಲಾ ಆಸ್ತಿಯೂ ತನ್ನ ಹೆಸರಿನಲ್ಲೇ ಇದ್ದರೂ ಕರ್ಣ ಬಯಸುತ್ತಿರುವುದು ಮಾತ್ರ ಅಪ್ಪನ ಪ್ರೀತಿ, ಮಾಯೆಯವರ ವಾತ್ಸಲ್ಯದ ಅಪ್ಪುಗೆ. ಅಜ್ಜಿ ಬಿಟ್ಟು ಮನೆಯಲ್ಲಿರೋ ಎಲ್ಲರಿಗೂ ಕರ್ನನ್ನು ಕಂಡ್ರೆ ಅಷ್ಟಕಷ್ಟೇ. ಕರ್ಣನಿಗೆ ಮನೆಯವರ ಪ್ರೀತಿ ಸಿಗೋದು ಯಾವಾಗ? ಇನ್ನೇನು ಸದ್ಯದಲ್ಲೇ ನಿಮಗೆ ಸಿಗತ್ತೆ!

    ನಿಷ್ಕಲ್ಮಶ ಮನಸ್ಸಿನ ಕರ್ಣನಿಗೆ ನಿಷ್ಕಲ್ಮಶ ಪ್ರೀತಿ, ಅಪ್ಪನ ಪ್ರೀತಿ, ಮನೆಯವರ ಒಪ್ಪಿಗೆಯ ಅಪ್ಪುಗೆ ಸಿಗುತ್ತಾ? ತಿಳ್ಕೊಳೋಕೆ ವೀಕ್ಷಿಸಿ ಕರ್ಣ ಇದೇ 16 ರಿಂದ ರಾತ್ರಿ 8 ಗಂಟೆಗೆ.

    ಕರ್ಣ
    Share. Facebook Twitter Pinterest LinkedIn WhatsApp Reddit Tumblr Email

    Related Posts

    July 5, 2025 ಬಾಗಲಕೋಟೆ

    ನಾಳೆ ಪ್ರತಿಭಾ ಪುರಸ್ಕಾರ- ಸಾಧಕರಿಗೆ ಸನ್ಮಾನ

    July 5, 2025 ಅರ್ಜಿ ಆಹ್ವಾನ

    ಕ.ರಾ.ಮು.ವಿ. ಪ್ರಥಮ ವರ್ಷದ ಪ್ರವೇಶಾತಿ ಪ್ರಾರಂಭ

    July 5, 2025 ಅರ್ಜಿ ಆಹ್ವಾನ

    ಅಲ್ಪಸಂಖ್ಯಾತ ನರ್ಸಿಂಗ್ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ

    July 4, 2025 ಸಿನೆಮಾ

    ‘ರಾಮಾಯಣ’ ಚಿತ್ರದ Introduction ವಿಡಿಯೋ ಬಿಡುಗಡೆ

    July 4, 2025 ಬಾಗಲಕೋಟೆ

    ಸಕ್ರಿ ಪದವಿ ಪೂರ್ವ ಕಾಲೇಜಿನಲ್ಲಿ ವೈದ್ಯರ ದಿನಾಚರಣೆ

    July 4, 2025 ಬಾಗಲಕೋಟೆ

    ಕಟಗೇರಿ ಗ್ರಾಪಂ ಮಟ್ಟದ ಒಕ್ಕೂಟಕ್ಕೆ ಆತ್ಮ ನಿರ್ಬರ್ ಪ್ರಶಸ್ತಿ

    Facebook X (Twitter) Instagram Pinterest
    • Privacy Policy
    © 2025 Sanjedarshan. Developed by Vikimediatec Pvt Ltd.
    ಮಹೇಶ ಅಂಗಡಿ , ಸಂಪಾದಕರು, ಸಂಜೆದರ್ಶನ ದಿನ ಪತ್ರಿಕೆ, ಶಿವಗಿರಿ ಬಡಾವಣೆ 6ನೇ ಕ್ರಾಸ್, ವಿದ್ಯಾಗಿರಿ, ಬಾಗಲಕೋಟೆ-587102. ಮೋ: 9845228092

    Type above and press Enter to search. Press Esc to cancel.