ಪುತ್ತೂರು ಮೂಲದ ರಕ್ಷಿತ್ ಕುಮಾರ್ ಕಥೆ ಬರೆದು ನಿರ್ದೇಶಿಸಿರುವ ಬಹುನಿರೀಕ್ಷಿತ ‘ಜಂಗಲ್ ಮಂಗಲ್’ ಚಿತ್ರದ ಟ್ರೈಲರ್ ಜೂನ್ 24 ರಂದು ಬಿಡುಗಡೆಯಾಗಿದ್ದು, ಸಿನಿಪ್ರಿಯರಿಂದ ಭಾರಿ ಮೆಚ್ಚುಗೆ ಗಳಿಸುತ್ತಿದೆ.
ಅರೆ ಮಲೆನಾಡಿನ ಅರೆ ಮಲೆನಾಡಿನಲ್ಲಿ ನಡೆಯುವ ಪ್ರೇಮಕಥೆಯನ್ನೊಳಗೊಂಡ ಈ ಚಿತ್ರದ ಬಹುಪಾಲು ಭಾಗವನ್ನು ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯದ ದಟ್ಟ ಕಾಡಿನಲ್ಲಿ ಚಿತ್ರೀಕರಿಸಲಾಗಿದೆ.
ಚಿತ್ರದಲ್ಲಿ ಹರ್ಷಿತಾ ರಾಮಚಂದ್ರ ಜವಾಬ್ದಾರಿಯುತ ಕರಾವಳಿಯ ಹುಡುಗಿಯಾಗಿ ಮತ್ತು ಯಶ್ ಶೆಟ್ಟಿ ಜವಾಬ್ದಾರಿ ಇಲ್ಲದ ಹುಡುಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಜೊತೆಗೆ ಉಗ್ರಂ ಮಂಜು ಮತ್ತು ಬಲ ರಾಜವಾಡಿ ಸೇರಿದಂತೆ ಅನೇಕ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಸಹ್ಯಾದ್ರಿ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಪ್ರಸಾದ್ ಕೆ ಶೆಟ್ಟಿ ಸಂಗೀತ ಸಂಯೋಜಿಸಿದ್ದಾರೆ.
‘ಜಂಗಲ್ ಮಂಗಲ್’ ಚಿತ್ರವು ಜುಲೈ 4 ರಂದು ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿದೆ ಎಂದು ಚಿತ್ರ ತಂಡವು ತಿಳಿದೆ.