ಬೆನಕಟ್ಟಿ: ಗ್ರಾಮದಲ್ಲಿ ನಾಳೆ ದಿ. 20 ರಂದು ಹೇಮ – ವೇಮನ ಸದ್ಬೋಧನ ಪೀಠದ ವಾರ್ಷಿಕೋತ್ಸವ, ವಿದ್ಯಾರ್ಥಿಗಳ ದತ್ತು ಸ್ವೀಕಾರ, ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮ ಜರುಗಲಿದೆ.
ಗ್ರಾಮದ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದ ಆವರಣದಲ್ಲಿ ಭಾನುವಾರ ಮುಂಜಾನೆ 10.30 ಗಂಟೆಗೆ ಎರೆಹೊಸಳ್ಳಿಯ ರಡ್ಡಿ ಗುರುಪೀಠದ ಪೂಜ್ಯ ವೇಮನಾನಂದ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ನಡೆಯುವ ಸಮಾರಂಭದ ನೇತೃತ್ವವನ್ನು ಆಧ್ಯಾತ್ಮಿಕ ಚಿಂತಕ ಪ್ರದೀಪ ಗುರೂಜಿ ವಹಿಸುವರು.
ಹಿರಿಯ ವಕೀಲ ಎಸ್.ಕೆ.ಯಡಹಳ್ಳಿ ಅಧ್ಯಕ್ಷತೆ ವಹಿಸಲಿದ್ದು, ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ 1 ನೇ ಬೆಟಾಲಿಯನ್ ಕಮಾಂಡೆಂಟ್ ಅಮರನಾಥ ರೆಡ್ಡಿ ಕಾರ್ಯಕ್ರಮ ಉದ್ಘಾಟಿಸುವರು.
ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಉಪ ಆಯುಕ್ತ ಜಿ.ಬಿ.ಗೌಡಪ್ಪಗೋಳ ಮುಖ್ಯ ಅತಿಥಿಯಾಗಿ, ಧಾರವಾಡ ಕರ್ನಾಟಕ ವಿಶ್ವ ವಿದ್ಯಾಲಯದ ಮಹಾಯೋಗಿ ವೇಮನ ಪೀಠದ ಸಂಚಾಲಕ ಹೇಮರಡ್ಡಿ ನೀಲಗುಂದ ಹಾಗೂ ಸ್ಥಳೀಯ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನ ಸಮಿತಿ ಅಧ್ಯಕ್ಷ ಪಂಡಿತ ಮಾಚಾ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸದ್ಬೋಧನ ಪೀಠದ ಪ್ರಕಟಣೆ ತಿಳಿಸಿದೆ.