ಬಾಗಲಕೋಟೆ: ಪೂರ್ವ-ಮಧ್ಯ ಅರೇಬಿಯನ್ ಸಮುದ್ರ ಮತ್ತು ರಾಜ್ಯದ ಕರಾವಳಿ ತೀರ ಪ್ರದೇಶಗಳ ಸಮುದ್ರದ ಮೇಲೆ ಸುಳಿಗಾಳಿ ಕಂಡು ಬಂದಿದ್ದು, ವಾಯುಭಾರ ಕುಸಿತವುಂಟಾಗಿ ಮತ್ತಷ್ಟು ತೀವ್ರಗೊಂಡು ಚಂಡಮಾರುತವಾಗಿ ರೂಪಗೊಳ್ಳುವ ಸಾಧ್ಯತೆಗಳಿದ್ದು, ಉತ್ತರದ ಕಡೆಗೆ ಚಲಿಸುವ ಸಾಧ್ಯತೆಗಳಿವೆ ಎಂದು ಹವಾಮಾನ ಪರಿಸ್ಥಿತಿ ಅವಲೋಕನ ಮಳೆ ಮುನ್ಸೂಚನೆ ನೀಡಿದೆ.
ಮುಂದಿನ 2-3 ದಿನಗಳಲ್ಲಿ ದಕ್ಷಿಣ ಅರಬ್ಬಿ ಸಮುದ್ರ, ಮಾಲ್ಡೀವ್ಸ್ ಮತ್ತು ಕೊಮೊರಿನ್ ಪ್ರದೇಶದ ಕೆಲವು ಭಾಗಗಳು ಹಾಗೂ ದಕ್ಷಿಣ, ಈಶಾನ್ಯ ಮತ್ತು ಮದ್ಯ ಬಂಗಾಳ ಕೊಲ್ಲಿಯ ಕೆಲವು ಭಾಗಗಳಲ್ಲಿ ನೈರುತ್ಯ ಮುಂಗಾರು ಮತ್ತಷ್ಟು ಬಲಿಷ್ಠಗೊಂಡು, ಮುಂಗಾರು ಪರಿಸ್ಥಿತಿ ಇನ್ನಷ್ಟು ಅನು ಕೂಲಕರವಾಗಿವೆ.
ಮುಂದಿನ 5 ದಿನಗಳವರೆಗೆ ರಾಜ್ಯಾದ್ಯಂತ ವ್ಯಾಪಕವಾಗಿ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದ್ದು, ಕೆಲವಡೆ ಗುಡುಗು-ಸಿಡಲು ಸಹಿತ ಅಧಿಕದಿಂದ ಅತ್ಯಧಿಕ ಮಳೆಯಾಗುವ ಸಾಧ್ಯತೆಗಳಿವೆ ಎಂದು ತಿಳಿಸಿದೆ.