ಬಾಗಲಕೋಟೆ: ಭಾರತೀಯ ವಾಯುಪಡೆಯು ಭಾರತದ/ಗೂರ್ಖಾ (ನೇಪಾಳ) ಪುರುಷ ಅಭ್ಯರ್ಥಿಗಳನ್ನು ಭಾರತೀಯ ವಾಯುಪಡೆಗೆ ಏರ್‌ಮನ್ ಆಗಿ ಗ್ರೂಪ್ ವಾಯ್ (ತಾಂತ್ರಿಕವಲ್ಲದ) ವೈದ್ಯಕೀಯ ಸಹಾಯಕ ವೃತ್ತಿಯ ನೇಮಕಾತಿಗಾಗಿ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ವೈದ್ಯಕೀಯ ಸಹಾಯಕ ವೃತ್ತಿ ನೇಮಕಾತಿಗಾಗಿ ಅಭ್ಯರ್ಥಿಗಳು (10+2 ಹೊಂದಿರುವ ಅಭ್ಯರ್ಥಿಗಳಿಗೆ) ಅವಿವಾಹಿತರಾಗಿರಬೇಕು ಮತ್ತು ಜುಲೈ 2, 2005 ಮತ್ತು ಜುಲೈ 2, 2009ರ ನಡುವೆ ಜನಿಸಿರಬೇಕು. ಹಾಗೂ ಫಾರ್ಮಸಿಯಲ್ಲಿ ಡಿಪ್ಲೋಮಾ, ಬಿ.ಎಸ್ಸಿ ಹೊಂದಿದ ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ ಅವಿವಾಹಿತ ಅಭ್ಯರ್ಥಿಯು ಜುಲೈ 2, 2002 ಮತ್ತು ಜುಲೈ 2, 2007ರ ನಡುವೆ ಹಾಗೂ ವಿವಾಹಿತ ಅಭ್ಯರ್ಥಿಯು ಜುಲೈ 2, 2002 ಮತ್ತು ಜುಲೈ 2, 2005ರ ನಡುವೆ ಜನಿಸಿರಬೇಕು. ಆಸಕ್ತ ಅಭ್ಯರ್ಥಿಗಳು ಜುಲೈ 31 ರೊಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. https://airmenselection.cdac.in ವೆಬ್‌ಸೈಟ್‌ನಲ್ಲಿ ಹೆಚ್ಚಿನ ಮಾಹಿತಿ ಪಡೆಯಬಹುದು ಎಂದು ಜಿಲ್ಲಾ ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.