ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ಬಹುನಿರೀಕ್ಷಿತ ‘ಹರಿ ಹರ ವೀರ ಮಲ್ಲು: ಭಾಗ 1 – ಸ್ವೋರ್ಡ್ vs ಸ್ಪಿರಿಟ್’ ಚಿತ್ರದ ಟ್ರೈಲರ್ ಅದ್ದೂರಿಯಾಗಿ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಭಾರಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಟ್ರೈಲರ್‌ನಲ್ಲಿನ ದೃಶ್ಯಗಳು ಭವ್ಯವಾಗಿದ್ದು, ಚಿತ್ರದ ಸಂಗೀತವು ಮನಮುಟ್ಟುವಂತಿದೆ. ಬೃಹತ್ ಪ್ರಮಾಣದ ನಿರ್ಮಾಣವನ್ನು ಹೊಂದಿರುವ ಈ ಚಿತ್ರವು ಪ್ರೇಕ್ಷಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗುತ್ತಿದೆ.
ಚಿತ್ರದಲ್ಲಿ ಪವನ್ ಕಲ್ಯಾಣ್ ‘ವೀರ ಮಲ್ಲು’ ಪಾತ್ರದಲ್ಲಿ ಮಿಂಚಿದ್ದು, ಬಾಬಿ ಡಿಯೋಲ್ ‘ಔರಂಗಜೇಬ’ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ನಿಧಿ ಅಗರ್ವಾಲ್, ನರ್ಗಿಸ್ ಫಕ್ರಿ, ನೋರಾ ಫತೇಹಿ, ಸತ್ಯರಾಜ್, ಅನಸೂಯಾ ಭಾರದ್ವಾಜ್, ಸಚಿನ್ ಖೇಡೇಕರ್, ನಾಸರ್, ಸುನಿಲ್, ಮಕರಂದ್ ದೇಶಪಾಂಡೆ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರು ತಾರಾಬಳಗದಲ್ಲಿದ್ದಾರೆ.
‘ಮೆಗಾ ಸೂರ್ಯ ಪ್ರೊಡಕ್ಷನ್’ ಬ್ಯಾನರ್ ಅಡಿಯಲ್ಲಿ ಎ. ದಯಾಕರ್ ರಾವ್ ನಿರ್ಮಿಸಿರುವ ಈ ಚಿತ್ರಕ್ಕೆ ಎಂ.ಎಂ. ಕೀರವಾಣಿ ಅವರ ಸಂಗೀತವಿದೆ.
‘ಹರಿ ಹರ ವೀರ ಮಲ್ಲು’ ಚಿತ್ರ ಜುಲೈ 24ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.