ಬಾಗಲಕೋಟೆ: ಮಾತೃಭೂಮಿ ಯುವಕ ಮಂಡಳದ ವತಿಯಿಂದ ಪುರಪ್ರವೇಶಿಸಿದ ಹಿಂದೂ ಮಹಾಗಣಪತಿಗೆ ಭಕ್ತರು ಭವ್ಯವಾಗಿ ಬರಮಾಡಿ ಕೊಂಡರು. ನಗರದ ಬಸವೇಶ್ವರ ವೃತ್ತದಲ್ಲಿ ಭಕ್ತಜನರು ಮಹಾಗಣಪತಿಯ ದರ್ಶನ ಪಡೆದು ಕಣ್ತುಂಬಿ ಕೊಂಡರು.
ಬಸವೇಶ್ವರ ವೃತ್ತದಿಂದ ಕಟ್ಟಿ ಆಸ್ಪತ್ರೆವರೆಗೆ ಆಯೋಜಿಸಲಾಗಿದ್ದ ಭವ್ಯ ಶೋಭಾಯಾತ್ರೆಯಲ್ಲಿ ಭಕ್ತರ ಹರ್ಷೋಲ್ಲಾಸ ಮುಗಿಲು ಮುಟ್ಟಿತ್ತು.ವಿವಿಧ ಜಾನಪದ ಕಲಾತಂಡಗಳು ಮತ್ತು ಡಿಜೆ ಸೌಂಡ್ ಗೆ ಯುವಕರು, ಮಹಿಳೆಯರು ಹಾಗೂ ಮಕ್ಕಳು ಭರ್ಜರಿ ಹೆಜ್ಜೆ ಹಾಕಿ ಸಂಭ್ರಮಿಸಿದರು.
ನಗರದಾದ್ಯಂತ ಗಣಪತಿ ಬಪ್ಪಾ ಮೋರಯಾ ಘೋಷಣೆಗಳು ಮೊಳಗಿದವು. ಈ ಸಂದರ್ಭದಲ್ಲಿ ಸುಜಾತಾ ಶಿಂಧೆ ಮಾತನಾಡಿ, ಪ್ರತಿ ವರ್ಷ ಗಣೇಶ ಹಬ್ಬವು ಅದ್ದೂರಿಯಾಗಿ ಆಚರಣೆ ಮಾಡುವ ಮೂಲಕ ಹಿಂದು ಸಂಘಟನೆ ಮಹತ್ವ ನೀಡಬೇಕಾಗಿದೆ ಎಂದರು. ಮೆರವಣಿಗೆ ಮಂಡಳ ಮುಖಂಡರು ಸೇರಿದಂತೆ ಗಣ್ಯರು ಭಾಗವಹಿಸಿದ್ದರು.