ನಟಿ ಅನುಷ್ಕಾ ಶೆಟ್ಟಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಘಾಟಿ’ ಸಿನಿಮಾದ ಟ್ರೈಲರ್ ಆಗಸ್ಟ್ 6 ರಂದು ಬಿಡುಗಡೆಯಾಗಿ ಸಿನಿಪ್ರಿಯರ ಗಮನ ಸೆಳೆದಿದೆ.
‘ಘಾಟಿ’ ಚಿತ್ರವನ್ನು ನಿರ್ದೇಶಕ ಕ್ರಿಶ್ ಜಗರ್ಲಮುಡಿ ಅವರು ಫಸ್ಟ್ ಫ್ರೇಮ್ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ತೆಲುಗಿನಲ್ಲಿ ನಿರ್ಮಿಸಿದ್ದಾರೆ. ಅನುಷ್ಕಾ ಶೆಟ್ಟಿ ಜೊತೆಗೆ, ಈ ಚಿತ್ರದಲ್ಲಿ ವಿಕ್ರಮ್ ಪ್ರಭು, ರಮ್ಯಾ ಕೃಷ್ಣನ್ ಮತ್ತು ಜಗಪತಿ ಬಾಬು ಅವರಂತಹ ಖ್ಯಾತ ನಟರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷವಾಗಿ, ವಿಕ್ರಮ್ ಪ್ರಭು ಅವರು ಈ ಚಿತ್ರದ ಮೂಲಕ ಮೊದಲ ಬಾರಿಗೆ ತೆಲುಗು ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ.
ಈ ಹಿಂದೆ ಎರಡು ಬಾರಿ ಈ ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿತ್ತು. ಇದೀಗ, ಚಿತ್ರದ ಟ್ರೈಲರ್‌ನಲ್ಲಿ ಹೊಸ ಬಿಡುಗಡೆ ದಿನಾಂಕವನ್ನು ಘೋಷಿಸಲಾಗಿದೆ. ಅದರಂತೆ, ‘ಘಾಟಿ’ ಸಿನಿಮಾ ಸೆಪ್ಟೆಂಬರ್ 5 ರಂದು ವಿಶ್ವಾದ್ಯಂತ ತೆರೆಗೆ ಬರಲು ಸಜ್ಜಾಗಿದೆ.
