ಬಾಗಲಕೋಟೆ: ಜಿಲ್ಲಾ ಕೇಂದ್ರಕ್ಕೆ ಹತ್ತಿರವಿರುವ ಕಾರಣ ಗದ್ದನಕೆರಿ ಕ್ರಾಸ್ ದಿನೇ ದಿನೇ ಬೆಳೆಯುತ್ತಿದ್ದು ಕ್ರಾಸ್ ಅಭಿವೃದ್ದಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಬೀಳಗಿ ಶಾಸಕ ಹಾಗೂ ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತದ ಅಧ್ಯಕ್ಷ. ಜೆ.ಟಿ ಪಾಟೀಲ್ ಹೇಳಿದರು
ಗುರುವಾರ ಗದ್ದನಕೆರೆ ಕ್ರಾಸ್ ನಲ್ಲಿ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ೨೦೨೩ ೨೪ನೇ ಸಾಲಿನ ಅಲ್ಪಸಂಖ್ಯಾತರ ಕಾಲೋನಿಗಳ ಸಮಗ್ರ ಅಭಿವೃದ್ಧಿ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕಾಮಗಾರಿಗಳಲ್ಲಿ ಸಿಸಿ ರಸ್ತೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಇಂದು ನನ್ನ ಮತಕ್ಷೇತ್ರದ ಅರ್ಕೇರಿ , ಕೊಪ್ಪ ಚಿಕ್ಕಾಲಗುಂಡಿ ಸೋರಕೊಪ್ಪ ಬನ್ನಿದಿನ್ನಿ ಸೇರಿದಂತೆ ಗದ್ದನಕೇರಿ ಕ್ರಾಸ್ ಹಾಗೂ ಮೂರನಾಳ ದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದರು.
ಕಾಮಗಾರಿಗಳನ್ನು ಸ್ವತಃ ಗ್ರಾಮಸ್ಥರು ಅದರ ಉಸ್ತುವಾರಿ ವಹಿಸಿಕೊಂಡು ಉತ್ತಮ ಗುಣಮಟ್ಟದ ಕಾರ್ಯವನ್ನು ನಿರ್ವಹಿಸಿಕೊಳ್ಳಬೇಕು ಇದರಲ್ಲಿ ಸಾರ್ವಜನಿಕರ ಜವಾಬ್ದಾರಿ ಕೂಡ ಇರುತ್ತದೆ ಎಂದು ಹೇಳಿದರು.
ಗದ್ದನಕೇರಿ ಕ್ರಾಸಿಗೆ ಬಸ್ ನಿಲ್ದಾಣ ಆರೋಗ್ಯ ಕೇಂದ್ರ ಮಾರುಕಟ್ಟೆ ಪೊಲೀಸ್ ಠಾಣೆ ಸೇರಿದಂತೆ ಅನೇಕ ಕಾರ್ಯಗಳು ಆಗಬೇಕಿದ್ದು ಈ ಮೊದಲು ಬಸ್ ನಿಲ್ದಾಣ ನನ್ನ ಅವಧಿಯಲ್ಲಿ ನಿರ್ಮಿಸಲು ಗ್ರಾಂಟ್ ಹಾಕಿಕೊಂಡಿದ್ದೆ . ಸ್ಥಳದ ಅಭಾವವಿರುವುದರಿಂದ ಅದು ಸರಕಾರಕ್ಕೆ ಮರಳಿ ಹೋಯಿತು. ಈಗ ಇಲ್ಲಿಯ ಎಣ್ಣೆ ಬೆಳೆಗಾರರ ಸಂಘ ಲೀಸ್ ಪಡೆದಿರುವ ಜಮೀನು ೨೦ ಎಕರೆ ಇದ್ದು ಅದರಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಅದರಲ್ಲಿ ಎಷ್ಟು ದಿನ ಲೀಜ್ ಇದೆ ಅದರಲ್ಲಿ ಏನಾದ್ರು ನಮಗೆ ಭೂಮಿ ಸಿಗುತ್ತದೆಯಾ ಎಂದು ವಿಚಾರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಗದ್ದನಕೇರಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಮಾಲಾ ಸಂಗಪ್ಪ ನಲತ್ವಾಡ ಗ್ರಾಪಂ ಸದಸ್ಯರಾದ ಚಂದ್ರಶೇಖರ್ ಸಾಲಗುಂದಿ ಸಂಭಾಜಿಕೊಕಾಟೆ ಗ್ರಾಮಪಂ ಮಾಜಿ ಅಧ್ಯಕ್ಷ ಸಂಗಣ್ನ, ನಲವತ್ವಾಡ ಅಹ್ಮದ್, ಕಿರ್ಸೂರ್ ಜಾವೇದ್ ಮುಜಾವರ್, ಶವತ್ಕಲಿ ಪಗಡಿ ಬಂದ ಹುಸೇನ್ ಬಂದ್ಕೇರಿ ಸಿದ್ದಣ್ಣ ಚಬ್ಬಿ ಶಿವು ರಾಥೋಡ್ ಹಾಗೂ ಜಿಲ್ಲಾ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಶಿವನಂದ ಪಟ್ಟಣಶೆಟ್ಟಿ ಸೇರಿ ಇತರರು ಇದ್ದರು.