ಬಾಗಲಕೋಟೆ: ಇತಿಹಾಸ ಪ್ರಸಿದ್ದ ಮೈಸೂರು ದಸರಾ ಉತ್ಸವ ಉದ್ಘಾಟಿಸಲು ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್ ಅವರಿಗೆ ಸರ್ಕಾರ ಆಹ್ವಾನ ನೀಡಿರುವುದು ಖಂಡನಾರ್ಹ ಎಂದು ವಿಧಾನ ಪರಿಷತ್ ಶಾಸಕ ಪಿ.ಎಚ್. ಪೂಜಾರ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾನು ಮುಷ್ತಾಕ್ ಅವರನ್ನು ಸಾಹಿತಿಯಾಗಿ, ಕನ್ನಡತಿಯಾಗಿ ಗೌರವಿಸುವೆ. ಕನ್ನಡ ಸಾಹಿತ್ಯಕ್ಕೆ ಅವರ ಕೊಡುಗೆ ಅಪಾರವಾಗಿದೆ. ಅದರಲ್ಲಿ ಎರಡು ಮಾತಿಲ್ಲ. ಅವರೊಬ್ಬ ಎಡಪಂಥಿಯ ಧೋರಣೆಯವರಾಗಿದ್ದು, ಅವರ ಮನೋಭಾವ ಮೈಸೂರು ದಸರಾ ಹಬ್ಬದ ವಿಧಿ ವಿಧಾನಗಳಿಗೆ ಹೊಂದಿಕೆ ಆಗದು. ಹಾಗಾಗಿ ಸರ್ಕಾರ ಅವರನ್ನು ಆಹ್ವಾನಿಸಿದ್ದು ತಪ್ಪು ಎಂದರು.
ಹಿಂದು ಸಂಸ್ಕೃತಿ, ಸಂಪ್ರದಾಯ, ವಿಧಿ ವಿಧಾನಗಳ ಮೂಲಕ ನಾಡ ಹಬ್ಬ ಮೈಸೂರು ದಸರಾ ನಡೆದುಕೊಂಡು ಬಂದಿದೆ. ಆ ಪ್ರಕಾರವಾಗಿಯೇ ಅದು ನಡೆಯಬೇಕು. ಹಾಗಾಗಿ ಅವರಿಗೆ ಆಹ್ವಾನ ನೀಡಿದ್ದು ತಪ್ಪು ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಎಡಪಂಥಿಯ ಸರ್ಕಾರವಾಗಿದ್ದು, ಕೋಮು ವೈಷಮ್ಯ ಹರಡುವ ಸರ್ಕಾರವಾಗಿದೆ ಎಂದರು. ಹಿಂದುಗಳ ಶ್ರದ್ದಾ ಕೇಂದ್ರವಾಗಿರುವ ಧರ್ಮಸ್ಥಳ ವಿಷಯದಲ್ಲಿ ನಡೆದುಕೊಂಡು ರೀತಿಯಿಂದ ಬಹಳಷ್ಟು ಅಪಮಾನಕ್ಕೀಡಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಗೃಹ ಸಚಿವ ಜಿ.ಪರಮೇಶ್ವರ ರಾಜ್ಯದ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಧರ್ಮಸ್ಥಳದ ಮಹಿಮೆ ಕಾಪಾಡುವ ನಿಟ್ಟಿನಲ್ಲಿ ಬಿಜೆಪಿ:
ಧರ್ಮಸ್ಥಳ ಯಾತ್ರೆ ಹಮ್ಮಿಕೊಂಡಿದೆ. ಬಾಗಲಕೋಟೆ,ವಿಜಯಪುರ ಸೇರಿದಂತೆ ರಾಜ್ಯದ ನಾನಾ ಮೂಲೆಗಳಿಂದ ಹಿಂದು ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಅವರು ಮಾತನಾಡಿದರು. ದಸರಾ, ಗಣೇಶ ಹಬ್ಬ, ದೀಪಾವಳಿ ಹಬ್ಬಗಳ ಆಚರಣೆ ವಿಷಯದಲ್ಲಿನ ನಿಯಮಗಳಲ್ಲಿ ಸರ್ಕಾರ ಸರಳೀಕರಣ ಮಾಡ ಬೇಕು. ಅನಗತ್ಯವಾಗಿ ಅಡತಡೆ ಮಾಡಬಾರದು ಎಂದು ಅವರು ಹೇಳಿದರು.
ಒಳ ಮೀಸಲು ನಿಗದಿ ವಿಷಯದಲ್ಲಿ ಸರ್ಕಾರ ತಾರತಮ್ಯ ನೀತಿ ಅನುಸರಿಸಿದೆ ಎಂದು ದೂರಿದ ಪೂಜಾರ್ ಅವರು, ಒಳ ಮೀಸಲು ವಿಷಯದಲ್ಲಿ ಭೋವಿ, ವಡ್ಡರ, ಬಂಜಾರಾ ,ಕೊಂಚ,ಕೊರಮ ಸಮುದಾ ಯಗಳಿಗೆ ಅನ್ಯಾಯವಾಗಿದೆ. ಇವರಿಗೆ ಇನ್ನೂ ಶೇಕಡಾ ೨ ರಷ್ಟು ಅಂದರೆ ಶೇ ೫ ರಿಂದ ೭ ರಷ್ಟಕ್ಕೆ ಹೆಚ್ಚಿಸಬೇಕು. ಜತೆಗೆ ಬುಡಕಟ್ಟು, ಅಲೆಮಾರಿಗಳಿಗೆ ಇನ್ನೊಂದು ಪರ್ಸೆಂಟ್ ಹೆಚ್ಚಳವಾಗಬೇಕು ಎಂದು ಅವರು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಶಂಭುಗೌಡ ಪಾಟೀಲ, ಕುಮಾರ ಗಿರಿಜಾ, ರಾಜು ಚಿತ್ತವಾಡಗಿ, ರಾಜು ನಾಗೂರ, ರಾಜು ಶ್ರೀರಾಮ ಇತರರು ಇದ್ದರು.
ಯುಕೆಪಿ ವಿಷಯದಲ್ಲಿ ವಿಳಂಬ ನೀತಿ ಸಲ್ಲ:
ಬಾಗಲಕೋಟೆ-೨೬: ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಳ ವಿಷಯದಲ್ಲಿ ಸರ್ಕಾರಕ್ಕೆ ಇಚ್ಛಾಶಕ್ತಿ ಇಲ್ಲವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ್ ತೀವ್ರ ವಾಗ್ದಾಳಿ ನಡೆಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳ ವಾರ ನಡೆದ ಸುದ್ದಿಗೋಷ್ಠಿಯಲ್ಲಿ ಆಲಮಟ್ಟಿ ಎತ್ತರ ಹೆಚ್ಚಳ, ಭೂಸ್ವಾಧೀನ, ಪರಿಹಾರ ಹಂಚಿಕೆ ಸಮಸ್ಯೆಗೆ ಪರಿಹಾರದ ಮಾರ್ಗ ಹುಡುಕುತ್ತಿಲ್ಲ. ಪರಿಣಾಮವಾಗಿ ಯೋಜ ನಾನುಷ್ಠಾನ ವಿಳಂಬವಾಗುತ್ತಿರುವುದು ಖಂಡನಾರ್ಹ ಎಂದರು.
ಯುಕೆಪಿ ಹಂತ-೩ ರ ಅನುಷ್ಠಾನ ಕುರಿತಂತೆ ಸದನದಲ್ಲಿ ಚರ್ಚೆ ನಡೆಸಲಾಗಿದ್ದು, ಸರ್ಕಾರ ಈ ವಿಷಯದಲ್ಲಿ ಧೋರಣೆ ಅನು ಸರಿಸುತ್ತಿದೆ ಎನ್ನುವುದು ನೀರಾವರಿ ಸಚಿವರ ಮಾತಿನಿಂದ ಸ್ಪಷ್ಟವಾಗುತ್ತಿದೆ.ಸರ್ಕಾರದ ವಿಳಂಬ ಧೋರಣೆ ಖಂಡ ನಾರ್ಹವಾಗಿದ್ದು, ಯುಕೆಪಿ ಯೋಜನೆ ಅನುಷ್ಠಾನಕ್ಕಾಗಿ ಶೀಘ್ರ ಜನಾಂದೋಲನ ರೂಪಿಸಲಾಗುವುದು ಎಂದರು.
ಬಾಗಲಕೋಟೆ ಬಳಿಯ ಮಲ್ಲಯ್ಯನ ಗುಡ್ಡಕ್ಕೆ ರಸ್ತೆ ನಿರ್ಮಾಣಕ್ಕೆ ಪೂರಕವಾದ ಉತ್ತರವನ್ನು ಪ್ರವಾಸೋದ್ಯಮ ಸಚಿವರು ಸದನದಲ್ಲಿ ಸ್ಪಷ್ಟ ಪಡಿಸಿದ್ದಾರೆ. ಜಿಲ್ಲಾಧಿಕಾರಿಗಳು ಶೀಘ್ರ ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಿದ್ದಾರೆ. ಅದಕ್ಕಾಗಿ ಜಿಲ್ಲಾಧಿಕಾರಿಗಳು ಸಭೆಯೊಂದನ್ನು ಕರೆಯುವ ನಿರೀಕ್ಷೆ ಇದೆ ಎಂದರು. ಬಾಗಲ ಕೋಟೆ ಜನತೆ ಇ ಖಾತೆ ಪಡೆಯಲು ಸಿಟಿಜನ್ ಲಾಗಿನ್ ಬಳಕೆ ಮಾಡಿಕೊಳ್ಳಬಹು ದಾಗಿದೆ. ಇದರಿಂದ ಸದ್ಯಕ್ಕೆ ಉಂಟಾಗಿರುವ ತೊಂದರ ನಿವಾರಣೆ ಆಗಲಿದೆ ಎಂದು ತಿಳಿಸಿದರು.