ಬಾಗಲಕೋಟೆ ; ಇನ್ನೇನು ಕರ್ನಾಟಕ ರಾಜ್ಯದಲ್ಲಿ ಎರಡನೇ ಹಂತದ ಲೋಕಸಭಾ ಚುನಾವಣೆಯ ಕೆಲವೇ ದಿನಗಳು ಬಾಕಿ ಇದ್ದು ಅಭ್ಯರ್ಥಿಗಳ ಪ್ರಚಾರ ಜೋರಾಗಿ ನಡೆದಿದೆ.
ಬಾಗಲಕೋಟೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ್ ಅವರು ತಮ್ಮ ಬೆಂಬಲಿಗರೊಂದಿಗೆ ನವನಗರದ ಬಾಂಬೆ ನಗರದಲ್ಲಿ ಪ್ರಚಾರವನ್ನು ಆರಂಭಿಸಿದರು.
ಕ್ರಮ ಸಂಖ್ಯೆ 03 ಕ್ಕೇ ನಿಮ್ಮ ಅಮೂಲ್ಯ ಮತ ನೀಡಬೇಕೆಂದು ಮತದಾರರಲ್ಲಿ ವಿನಂತಿ ಮಾಡಿದರು.
ಪ್ರಚಾರ ಸಭೆಯಲ್ಲಿ ಬಾಯಕ್ಕ ಮೇಟಿ,ಪ್ರಕಾಶ ತಪಶೆಟ್ಟಿ, ಸಂತೋಷ ಹೊಕ್ರಾಣಿ, ನಾಗರಾಜ ಹದ್ಲಿ, ಶ್ರೀನಿವಾಸ ಬಳ್ಳಾರಿ, ಶಂಕರ ತಪಶೆಟ್ಟಿ, ರಾಜು ಮನ್ನಿಕೇರಿ, ರಾಮ ಮುಂದಡಾ, ಸೇರಿದಂತೆ ಅನೇಕ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.