ಬಾಗಲಕೋಟೆ: ವಿಜಯಪುರ ಜಿಲ್ಲಾ ಖಾಸಗಿ ಅನುದಾನ ರಹಿತ ಶಾಲೆಗಳ ಸಹಯೋಗದಲ್ಲಿ ಪ್ರಪ್ರಥಮ ಬಾರಿಗೆ ನಿಡಗುಂದಿ ಪಟ್ಟಣದಲ್ಲಿ ಶಿಕ್ಷಕರಿಗಾಗಿ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ಮೇ 20 ರಂದು ಬೆಳಿಗ್ಗೆ 9:30 ರಿಂದ ಮಧ್ಯಾಹ್ನ 1:30 ಗಂಟೆಯವರೆಗೆ ಬನಶಂಕರಿ ಪಬ್ಲಿಕ್ ಶಾಲೆಯ ಆವರಣದಲ್ಲಿ ಈ ಮೇಳ ನಡೆಯಲಿದೆ ಎಂದು ಬದಾಮಿ ತಾಲೂಕಿನ ಅನುದಾನ ರಹಿತ ಶಾಲೆಗಳ ಒಕ್ಕೂಟದ ಅಧ್ಯಕ್ಷ ನ್ಯಾಯವಾದಿ ಸುಭಾಷ್ ಕೊಳ್ಳಿ ತಿಳಿಸಿದರು.
ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯಪುರ, ಬಾಗಲಕೋಟೆ, ನಿಡಗುಂದಿ, ಹುನಗುಂದ, ಇಲಕಲ್, ಮುದ್ದೇಬಿಹಾಳ, ಬಸವನ ಬಾಗೇವಾಡಿ, ಕೊಲ್ದಾರ, ಸಿಂದಗಿ, ಬಬಲೇಶ್ವರ ಹಾಗೂ ಕುಷ್ಟಗಿ ತಾಲೂಕುಗಳಿಂದ ಹಲವಾರು ಶಾಲಾ-ಕಾಲೇಜುಗಳು ವಿದ್ಯಾರ್ಥಿಗಳು ಈ ಉದ್ಯೋಗ ಮೇಳದಲ್ಲಿ ನೋಂದಾಯಿಸಿಕೊಂಡಿವೆ ಎಂದರು.
ಈ ಕೆಳಗಿನ ವಿದ್ಯಾರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದು: ಬಿಎ, ಬಿಎಡ್, ಬಿಎಸ್ಸಿ, ಬಿಎಡ್. ಎಂ.ಎ, ಎಂಎಸ್ಸಿ, ಬಿಸಿಎ, ಬಿಕಾಂ, ಎಂಕಾಮ್, ಅದೇ ರೀತಿ ಅಡುಗೆ ತಯಾರಕರು, ಡ್ರೈವರ್‌ಗಳು, ಆಯಾಗಳು, ವಾಚ್‌ಮನ್ ಹುದ್ದೆಗಳಿಗೆಲೂ ಅವಕಾಶವಿದ್ದು, ಮೇಳದಲ್ಲಿ ಭಾಗವಹಿಸಲು ಬಯಸುವ ಅಭ್ಯರ್ಥಿಗಳು ತಮ್ಮ ಎಲ್ಲಾ ಶೈಕ್ಷಣಿಕ ದಾಖಲೆಗಳು, ಆಧಾರ್ ಕಾರ್ಡ್, ಭಾವಚಿತ್ರ ಹಾಗೂ ಬಯೋಡೇಟಾವನ್ನು ಹೊಂದಿರಬೇಕು. ಉದ್ಯೋಗ ಮೇಳದಲ್ಲಿ ಭಾಗವಹಿಸುವಿಕೆಗಾಗಿ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ ಎಂದು ತಿಳಿಸಿದರು.
ಇದು ಉದ್ಯೋಗ ಹುಡುಕುತ್ತಿರುವ ಶಿಕ್ಷಕರಿಗೆ ಸುವರ್ಣಾವಕಾಶವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಳ್ಳಬೇಕು ಕಾರ್ಯದರ್ಶಿ ಎಸ್.ಎಸ್. ಪಾಟೀಲ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಎಮ್. ಎಸ್. ಕೊಪ್ಪ, ಬಿ.ಎಮ್. ಬಿರಾದಾರ, ಮುಸ್ತಾಕಮುಲ್ಲಾಇದ್ದರು.