ಬಾಗಲಕೋಟೆ : ಲೋಕಸಭಾ ಚುನಾವಣೆಗೆ ಸಲ್ಲಿಸಿದ ನಾಮಪತ್ರಗಳನ್ನು ಹಿಂಪಡೆಯಲು ಕೊನೆಯ ದಿನವಾದ ಸೋಮವಾರದಂದು ಒಟ್ಟು ೪ ಜನ ಪಕ್ಷೇತರ ಅಭ್ಯರ್ಥಿಗಳಾದ ಜಮೀನ್ದಾರ ಮಾರುತಿ, ಸಂಗಮೇಶ ಭಾವಿಕಟ್ಟಿ, ಬಸವರಾಜ ಹಲ್ಪಿ, ಹನಮಪ್ಪ ತಳವಾರ ತಮ್ಮ ಉಮೇದುವಾರಿಕೆಯನ್ನು ಹಿಂತೆಗೆದುಕೊಂಡಿದ್ದರಿಂದ ಅಂತಿಮವಾಗಿ ೨೨ ಅಭ್ಯರ್ಥಿಗಳು ಕಣದಲ್ಲಿ ಉಳಿದುಕೊಂಡಿದ್ದಾರೆ.
ಬಿಜೆಪಿ ಪಕ್ಷದಿಂದ ಪಿ.ಸಿ.ಗದ್ದಿಗೌಡರ, ಬಹುಜನ ಸಮಾಜ ಪಕ್ಷದಿಂದ ಎಂ.ಬಿ.ಸಿದಗೋಣಿ, ಕಾಂಗ್ರೆಸ್ ಪಕ್ಷದಿಂದ ಸಂಯುಕ್ತಾ ಶಿವಾನಂದ ಪಾಟೀಲ, ಉತ್ತಮ ಪ್ರಜಾಕೀಯ ಪಕ್ಷದಿಂದ ಅಂತೋಷ ಸವ್ವಾಸೆ, ಸೋಷಿಯಾಲಿಸ್ಟ ಯುನಿಟ್ ಸೆಂಟರ ಆಪ್ ಇಂಡಿಯಾ (ಕಮ್ಯೂನಿಸ್ಟ) ಪಕ್ಷದಿಂದ ಮಲ್ಲಿಕಾರ್ಜುನ ಎಚ್.ಟಿ, ರೈತ ಭಾರತ ಪಕ್ಷದಿಂದ ಮುತ್ತಪ್ಪ ಹಿರೇಕುಂಬಿ, ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ(ಎ) ಪಕ್ಷದಿಂದ ಶಂಕರ ನಾಯ್ಕರ, ಕರ್ನಾಟಕ ರಾಷ್ಟ್ರ ಸಮಿತಿಯಿಂದ ಸಾಗರ ಕುಂಬಾರ, ದೇಶ ಪ್ರೇಮ ಪಕ್ಷದಿಂದ ಸಿದ್ದನಗೌಡ ಮರಿಗೌಡ್ರ, ಟಿಪ್ಪು ಸುಲ್ತಾನ್ ಪಕ್ಷದಿಂದ ಸೈಯದ ಇಮಾನಸಾಬ ಜಕಲಿ, ಪಕ್ಷೇತರದಿಂದ ಅಬ್ದುಲ್‌ಅಜೀಜ ಪೆಂಡಾರಿ, ಅಂಬ್ರೋಸ್ ಡಿ ಮೆಲ್ಲೊ, ಮಲ್ಲಿಕಾರ್ಜುನ ಕೆಂಗನಾಳ, ಜ್ಯೋತಿ ಗುಳೇದಗುಡ್ಡ, ದತ್ತಾತ್ರೇಯ ತಾವರೆ, ನಾಗರಾಜ ಕಲಕುಟಗರ, ಪರಶುರಾಮ ನೀಲನಾಯಕ, ಪ್ರಶಾಂತ ರಾವ್, ಡಾ.ಮುತ್ತು ಸುರಕೋಡ (ಮಾದರ), ರವಿ ಪಡಸಲಗಿ, ರಾಜೇಸಾಬ ಮಸಳಿ, ಶರಣಪ್ಪ ಕೊತ್ತಣ್ಣವರ ಅಂತಿಮ ಕಣದಲ್ಲಿ ಉಳಿದ ಅಭ್ಯರ್ಥಿಗಳಾಗಿದ್ದಾರೆಂದು ಜಿಲ್ಲಾ ಚುನಾವಣಾಧಿಕಾರಿ ಜಾನಕಿ ಕೆ.ಎಂ ತಿಳಿಸಿದ್ದಾರೆ.