ಜೇಮ್ಸ್ ಕ್ಯಾಮರೂನ್ ನಿರ್ದೇಶನದ ಬಹುನಿರೀಕ್ಷಿತ ‘ಅವತಾರ್: ಫೈರ್ ಅಂಡ್ ಆಶ್’ ಚಿತ್ರದ ಟ್ರೈಲರ್ ಜುಲೈ 28 ರಂದು ಬಿಡುಗಡೆಯಾಗಿದ್ದು, ಸಿನಿಮಾ ಪ್ರಿಯರಲ್ಲಿ ಕುತೂಹಲ ಹೆಚ್ಚಿಸಿದೆ. ‘ಅವತಾರ್’ ಮತ್ತು ‘ಅವತಾರ್: ದಿ ವೇ ಆಫ್ ವಾಟರ್’ ಸಿನಿಮಾಗಳ ಮುಂದುವರಿದ ಭಾಗವಾಗಿರುವ ಈ ಚಿತ್ರವನ್ನು 20th ಸೆಂಚುರಿ ಸ್ಟುಡಿಯೋಸ್ ನಿರ್ಮಿಸಿ ವಿತರಿಸುತ್ತಿದೆ.
ಸ್ಯಾಮ್ ವರ್ತಿಂಗ್‌ಟನ್, ಝೋ ಸಲ್ಡಾನಾ, ಸಿಗೋರ್ನಿ ವೀವರ್, ಸ್ಟೀಫನ್ ಲ್ಯಾಂಗ್, ಜಿಯೋವಾನಿ ರಿಬಿಸಿ, ಕೇಟ್ ವಿನ್ಸ್‌ಲೆಟ್, ಡೇವಿಡ್ ಥೆವ್ಲಿಸ್, ಊನಾ ಚಾಪ್ಲಿನ್ ಸೇರಿದಂತೆ ಮೊದಲ ಭಾಗದ ತಾರಾಗಣದ ಜೊತೆಗೆ ಹೊಸ ಕಲಾವಿದರು ಕೂಡ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಮೊದಲ ಭಾಗ ‘ಅವತಾರ್’ ಡಿಸೆಂಬರ್ 2009 ರಂದು ಬಿಡುಗಡೆಯಾಗಿ ಐತಿಹಾಸಿಕ ಯಶಸ್ಸು ಗಳಿಸಿತ್ತು. ಎರಡನೆಯ ಭಾಗ ‘ಅವತಾರ್: ದಿ ವೇ ಆಫ್ ವಾಟರ್’ ಸಹ ಡಿಸೆಂಬರ್ 2022 ರಲ್ಲಿ ಬಿಡುಗಡೆಯಾಗಿ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತ್ತು.
‘ಅವತಾರ್: ಫೈರ್ ಅಂಡ್ ಆಶ್’ ಚಿತ್ರವು ಡಿಸೆಂಬರ್ 19, 2025 ರಂದು ತೆರೆ ಕಾಣಲು ಸಜ್ಜಾಗಿದೆ. ಚಿತ್ರದ ಬರವಣಿಗೆ, ಪೂರ್ವ-ನಿರ್ಮಾಣ ಮತ್ತು ವಿಝುಯಲ್ ಎಫೆಕ್ಟ್ಸ್‌ಗೆ ಹೆಚ್ಚಿನ ಸಮಯ ತೆಗೆದುಕೊಂಡ ಕಾರಣ ಈ ಚಿತ್ರದ ಬಿಡುಗಡೆ ದಿನಾಂಕ ಒಂಬತ್ತು ಬಾರಿ ಮುಂದೂಡಲ್ಪಟ್ಟಿತ್ತು. ಜೇಮ್ಸ್ ಕ್ಯಾಮರೂನ್ ಜೊತೆಗೆ ರಿಕ್ ಜಾಫಾ, ಅಮಂಡಾ ಸಿಲ್ವರ್, ಜೋಶ್ ಫ್ರೀಡ್‌ಮನ್ ಮತ್ತು ಶೇನ್ ಸಲೆರ್ನೊ ಚಿತ್ರಕಥೆಯನ್ನು ಬರೆದಿದ್ದಾರೆ.
