Author: Sanje

ಬಾಗಲಕೋಟೆ ; ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಿಲ್ಲಾ ಪ್ರವಾಸ ಕೈಗೊಂಡಿದ್ದು, ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ನಡೆಯಲಿರುವ ಶರಣ ಮೇಳ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ದಿ.13 ರಂದು ಮಧ್ಯಾಹ್ನ 3.30 ಕ್ಕೆ ಕೂಡಲಸಂಗಮಕ್ಕೆ ಆಗಮಿಸುವ ಅವರು ಶರಣ ಮೇಳ ಕಾರ್ಯಕ್ರಮ ಉದ್ಘಾಟಿಸುವರು. ಕಾರ್ಯಕ್ರಮದ ನಂತರ ಹೆಲಿಪ್ಯಾಡ್ ಮೂಲಕ ಬಳ್ಳಾರಿ ಜಿಲ್ಲೆಯ ತೋರಣಗಲ್ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Read More

ಬಾಗಲಕೋಟೆ ; ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆ ಮೇಲೆ ಕಡಿವಾಣ, ಡ್ರಗ್ಸ್ ಕಂಟ್ರೋಲ್, ಕಡ್ಡಾಯ ಹೆಲ್ಮೆಟ್ ಅಭಿಯಾನ ಹಾಗೂ ಗ್ರಾಮ ವಾಸ್ತವ್ಯ ಸೇರಿದಂತೆ ಇನ್ನು ಅನೇಕ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಜಿಲ್ಲೆಯಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಸನ್ನದ್ದವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಹೇಳಿದರು. ನವನಗರದ ಪತ್ರಿಕಾಭವನದಲ್ಲಿ ಮಂಗಳವಾರ ಹಮ್ಮಿಕೊಂಡ ಮಾದ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಜಿಲ್ಲೆಗೆ ಬಂದು ಅಧಿಕಾರ ವಹಿಸಿಕೊಂಡಾಗ ನಗರದಲ್ಲಿ ಟ್ರಾಪಿಕ್ ಸಿಗ್ನಲ್‍ಗಳು ಬಂದ್ ಆಗಿರುವದನ್ನು ಕಂಡು ತಕ್ಷಣ ದುರಸ್ಥಿ ಮಾಡಿಸಿ, 5 ಕಡೆಗಳಲ್ಲಿ ಪ್ರಾರಂಭಗೊಳಿಸಲಾಗಿದೆ. ಗದ್ದನಕೇರಿ ಕ್ರಾಸ್‍ನಲ್ಲಿ ಟ್ರಾಪಿಕ್ ಕಂಟ್ರೋಲ್ ಮಾಡಲು ಸಿಗ್ನಲ್ಸ್ ಹಾಕಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ವಹಿಸಲಾಗಿದೆ. ಈ ಕಾರ್ಯ ಬೇಗನೆ ಕಾರ್ಯಗತಗೊಳ್ಳಲಿದೆ ಎಂದರು. ನಗರದಲ್ಲಿ ಅಕ್ರಮವಾಗಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳನ್ನು ಶೇ.90 ರಷ್ಟು ಹತೋಟಿಗೆ ತರಲಾಗಿದೆ. ಸಾದ್ಯವಾದಷ್ಟು ಅಕ್ರಮ ಚಟುವಟಿಕೆಗಳನ್ನು ತಡೆಯಲಾಗುತ್ತಿದ್ದು, ಅಲ್ಲಲ್ಲಿ ಕಂಡುಬರುವ ಅಕ್ರಮ ಚಟುವಟಿಕೆಗಳ ಕಂಡುಬಂದಲ್ಲಿ ತಮ್ಮ ಗಮನಕ್ಕೆ ತರಲು ತಿಳಿಸಿದರು. ಗಣೇಶ…

Read More

ಬಾಗಲಕೋಟೆ : ಸಮಸ್ತ ಭಾರತೀಯ ಹಿಂದೂಗಳು, ಹಲವು ವರ್ಷಗಳ ಕನಸು ಇದೀಗ ನನಸಾಗುತ್ತಿದೆ. ಇದೇ ಜ. 22, ಭಾರತೀಯರಿಗೆ ಸಂಭ್ರಮದ ದಿನವಾಗಿದೆ. ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಭವ್ಯ ರಾಮ ಮಂದಿರದಲ್ಲಿ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ನಡೆಯಲಿದ್ದು, ಈ ಕಾರ್ಯದಲ್ಲಿ ಪ್ರತಿಯೊಬ್ಬರೂ ಮನೆಯ ಮುಂದೆ ದೀಪ ಹಚ್ಚಿ ಸಂಭ್ರಮಿಸುವ ಮೂಲಕ ಭಾಗಿಯಾಗಬೇಕು ಎಂದು ಸಂಸದ ಪಿ.ಸಿ. ಗದ್ದಿಗೌಡರ ಮನವಿ ಮಾಡಿದರು. ಆಯೋಧ್ಯೆಯಿಂದ ಬಂದಿರುವ ಮಂತ್ರಾಕ್ಷತೆ, ಆಮಂತ್ರಣ ಪತ್ರಿಕೆ ಹಾಗೂ ಶ್ರೀರಾಮನ ಫೋಟೋಗಳನ್ನು ನವನಗರದ ಸೆಕ್ಟರ್ ನಂ.8ರಲ್ಲಿ ಮನೆ ಮನೆಗೆ ತೆರಳಿ ವಿತರಿಸಿ ಅವರು ಮಾತನಾಡಿದರು. ಶ್ರೀರಾಮನ ಜನ್ಮಭೂಮಿ ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರ ನಿರ್ಮಾಣಕ್ಕಾಗಿ ಹಲವಾರು ವರ್ಷಗಳಿಂದ ಹೋರಾಟ ನಡೆದಿದೆ. ಇದಕ್ಕಾಗಿ ಇಡೀ ದೇಶದ ಜನರೇ ಕಾತುರರಾಗಿದ್ದರು. ಜ.22ರಂದು ಈ ಕಾರ್ಯ ನೆರವೇರಲಿದೆ. ಬಾಗಲಕೋಟೆ ನಗರವೂ ಸೇರಿದಂತೆ ಜಿಲ್ಲೆಯ ಜನರು, ಈ ಕಾರ್ಯದಲ್ಲಿ ಭಾಗಿಯಾಗಬೇಕು. ಮನೆಯ ಮುಂದೆ ರಂಗೋಲಿ ಬಿಡಿಸಿ, ದೀಪಹಚ್ಚಬೇಕು. ಆಯೋಧ್ಯೆಯಿಂದ ಬಂದಿರುವ ಶ್ರೀರಾಮನ ಫೋಟೋಗೆ ನಿತ್ಯ ಪೂಜೆ ನೆರವೇರಿಸಬೇಕು ಎಂದು ಕೋರಿದರು.…

Read More

ಬಾಗಲಕೋಟೆ: ನವನಗರದ ಬಾಲಕಿಯರ ಬಾಲ ಮಂದಿರದಲ್ಲಿ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಬಾಲ ಮಂದಿರದ ಮಕ್ಕಳೊಂದಿಗೆ ಹೊಸ ವರ್ಷಾಚರಣೆಯನ್ನು ಕೇಕ್ ಕತ್ತಿರುವ ಮೂಲಕ ಆಚರಣೆ ಮಾಡಿದರು. ಈ ವೇಳ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ಅವರು ಮಕ್ಕಳು ಪ್ರತಿದಿನ ಏನಾದರೊಂದು ಹೊಸತನ ಕಲಿಯುವ ಸಂಕಲ್ಪ ಮಾಡಬೇಕು. ಒಂದೇ ದಿನದಲ್ಲಿ ಸಂಗೀತ ಕಲಿಯಲು ಆಗದಲು ಆದರೆ ಪ್ರಯತ್ನ, ಶ್ರಮಪಟ್ಟರೆ ಯಾವುದಾದರು ಸಾಧಿಸಬಹುದು. ಜಗತ್ತು ನೋಡುವ ದೃಷ್ಠಿ ಒಂದು ಕಡೆ ಇದ್ದರೆ, ನಮ್ಮನ್ನು ನೋಡುವ ದೃಷ್ಟಿ ಬದಲಾಗಬೇಕು. ಬಾಲ ಮಂದಿರದ ಅಂಬಿಕಾ ಬೊವೇರ್ ವಿದ್ಯಾರ್ಥಿ ಕರಾಟೆಯಲ್ಲಿ ರಾಜ್ಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿ, ತನ್ನನ್ನು ಗುರುತಿಸುವ ಕೆಲಸ ಮಾಡಿದ್ದಾಳೆ ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಗುಲಾಬ ನದಾಫ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದಸ್ತಗಿರಿ ಮುಲ್ಲಾ, ಸರಕಾರಿ ಬಾಲ ಮಂದಿರದ ಅಧೀಕ್ಷಕಿ ಜಯಮಾಲಾ ದೊಡಮನಿ ಸೇರಿದಂತೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಘಟಕ ಹಾಗೂ ಬಾಲ ಮಂದಿರದ ಸಿಬ್ಬಂದಿಗಳು ಉಪಸ್ಥಿತರಿದ್ದರು.

Read More

ಬಾಗಲಕೋಟೆ ; ವಿಧಾನ ಪರಿಷತ್ ಸದಸ್ಯರಾದ ಪಿ.ಎಚ್.ಪೂಜಾರ ಅವರ ಜನ ಸಂಪರ್ಕ ಕಾರ್ಯಾಲಯಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಪಿ.ಎಚ್.ಪೂಜಾರ ಅವರು ಬಿ.ವೈ.ವಿಜಯೇಂದ್ರ ಹಾಗೂ ರಾಜ್ಯ ಉಪಾಧ್ಯಕ್ಷ ಮುರುಗೇಶ ನಿರಾಣಿ ಅವರನ್ನು ಸನ್ಮಾನಿಸಿ, ಗೌರವಿಸಿದರು. ಸಂಸದ ಪಿ.ಸಿ.ಗದ್ದಿಗೌಡರ, ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ, ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಡಾ.ಶೇಖರ ಮಾನೆ, ಡಾ.ಗಿರೀಶ ಮಾಸೂರಕರ್, ಚಂದ್ರಕಾಂತ ಕೇಸನೂರ, ಶಂಭುಗೌಡ ಪಾಟೀಲ, ಸಂಗನಗೌಡ ಗೌಡರ, ಸೇರಿದಂತೆ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಇದ್ದರು.

Read More

ಬಾಗಲಕೋಟೆ; ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ ಹಂತ ಹಂತವಾಗಿ ಪೋಡಿ ಮುಕ್ತ ಅಭಿಯಾನ ಕೈಗೊಂಡು ವರ್ಷದಲ್ಲಿ ಬಾಗಲಕೋಟೆ ಜಿಲ್ಲೆಯನ್ನು ಪೋಡಿ ಮುಕ್ತ ಜಿಲ್ಲೆಯನ್ನಾಗಿಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ತಿಳಿಸಿದರು. ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಭೂಮಾಪನ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಈಗಾಗಲೇ ಪೋಡಿ ಮುಕ್ತ ಅಭಿಯಾನದಡಿಯಲ್ಲಿ ಮೊದಲ ಹಂತದಲ್ಲಿ ಸಪ್ಟೆಂಬರ 2015 ರಿಂದ ಜುಲೈ 2019ರ ಅಂತ್ಯಕ್ಕೆ ಒಟ್ಟು 590 ಗ್ರಾಮಗಳ ಬಹುಮಾಲಿಕತ್ವದ ಹಿಡುವಳಿದಾರರ ಜಮೀನುಗಳನ್ನು ಪೋಡಿ ಮಾಡಿ, 60476 ಪಹಣಿಗಳನ್ನು ನೀಡಲಾಗಿರುವುದಾಗಿ ತಿಳಿಸಿದರು. ಎರಡನೇ ಹಂತದ ಪೋಡಿ ಮುಕ್ತ ಅಬಿಯಾನ ಕೈಗೊಳ್ಳಲಾಗಿದ್ದು, ಈ ಅಭಿಯಾನದಡಿ 64 ಗ್ರಾಮಗಳಲ್ಲಿ ಒಟ್ಟು 1733 ಬ್ಲಾಕ್‍ಗಳ ಪೋಡಿ ಪ್ರಕರಣಗಳ ವಿಲೇವಾರಿ ಮಾಡಲಾಗಿದೆ. ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ ಹಂತ ಹಂತವಾಗಿ ಅಭಿಯಾನ ಕೈಗೊಂಡು ಜಿಲ್ಲೆಯನ್ನು ಪೋಡಿ ಮುಕ್ತ ಜಿಲ್ಲೆಯನ್ನಾಗಿಸಲು ಎಲ್ಲ ರೀತಿಯ ಕ್ರಮವಹಿಸಲಾಗುತ್ತಿದೆ. ಪೋಡಿಗೆ ಬಾಕಿ ಉಳಿದವುಗಳ ಬಗ್ಗೆ ಮಾಹಿತಿ ನೀಡಬೇಕು. ಬಾಕಿ ಉಳಿಯಲು ಕಾರಣವೆನು ಎಂಬುದನ್ನು ಸಹ…

Read More

ಬಾಗಲಕೋಟೆ : ಇಂದಿನ ಡಿಜಿಟಲೀಕರಣ ವ್ಯವಸ್ಥೆಯಲ್ಲಿ ಬಣ್ಣ, ರುಚಿಗಳಿಗೆ ಮರುಳಾಗದೇ ಒಳ್ಳೇಯ ಗುಣಮಟ್ಟದ ವಸ್ತುಗಳನ್ನು ಖರೀದಿಸಬೇಕೆಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಹೇಳಿದರು. ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಆಹಾರ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಾರ್ತಾ ಇಲಾಖೆ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ನೋಡಲು ಒಳ್ಳೆಯ ಗುಣಮಟ್ಟದ ವಸ್ತುವಿನ ಹಾಗೆ ಕಂಡರು ನಮ್ಮ ನಿರೀಕ್ಷಣೆಗೆ ಅಜಗಜಾಂತರವಾಗಿ ಕಂಡುಬರುತ್ತದೆ ಎಂದರು. ಗ್ರಾಹಕರಿಲ್ಲದೇ ವರ್ತಕರು ವ್ಯವಹಾರ ಮಾಡಲು ಸಾಧ್ಯವಿಲ್ಲ. ಆದರೆ ವರ್ತಕರು ಒಂದಲ್ಲ ಒಂದು ರೀತಿಯಲ್ಲಿ ಗ್ರಾಹಕರಿಗೆ ಅನ್ಯಾಯ ಮಾಡುತ್ತಿದ್ದು, ವ್ಯವಹಿಸುವಾಗ ಎಚ್ಚರಿಕೆಯಿಂದ ಇರಬೇಕು. ನಾವು ಕೊಡುವ ಮೌಲ್ಯಕ್ಕೆ ತಕ್ಕ ವಸ್ತು ಆಗಿರಬೇಕು. ಬಣ್ಣ, ರುಚಿಗೆ ಮರುಳಾಗದೇ ಗುಣಮಟ್ಟದ ವಸ್ತು ಖರೀದಿಗೆ ಮುಂದಾಗಬೇಕು. ಮೋಸ ಹೋದಲ್ಲಿ ಗ್ರಾಹಕರ ವೇದಿಕೆಗೆ ದೂರು ಸಲ್ಲಿಸಬೇಕು. ಈ…

Read More

* ಬಾಗಲಕೋಟೆ ; ಜಿಲ್ಲೆಯಲ್ಲಿ ಡಿಸೆಂಬರ 29 ರಂದು ಜರಗುವ ವಿಶ್ವ ಮಾನವ ದಿನಾಚರಣೆ, ಜನವರಿ 1 ರಂದು ಅಮರಶಿಲ್ಪಿ ಜಕನಾಚಾರಿ ಸಂಸ್ಕರಣಾ ದಿನಾಚರಣೆ, ಜನವರಿ 15 ಶಿವಯೋಗಿ ಸಿದ್ದರಾಮ ಜಯಂತಿ, ಜನವರಿ 19 ರಂದು ಜರಗುವ ಮಹಾಯೋಗಿ ವೇಮನ ಜಯಂತಿಗಳನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದು ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ ತಿಳಿಸಿದರು. ಜಿಲ್ಲಾ ಪಂಚಾಯತ ಸಭಾಭವನದಲ್ಲಿ ವಿವಿಧ ಮಹಾಪುರುಷರ ಜಯಂತಿ ಆಚರಣೆ ಕುರಿತು ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪ್ರತಿ ವರ್ಷದಂತೆ ಈ ವರ್ಷವೂ ಮಹಾಪುರುಷರ ಜಯಂತಿಗಳನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ವಿಶ್ವ ಮಾನವ ದಿನಾಚರಣೆಯನ್ನು ನವನಗರದ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ನಿಲಯದಲ್ಲಿ ಹಮ್ಮಿಕೊಳ್ಳಲಾಗುತ್ತಿದ್ದು, ಉಳಿದ ಮಹಾಪುರುಷರ ಜಯಂತಿಯನ್ನು ಅಂಬೇಡ್ಕರ ಭವನದಲ್ಲಿ ಆಚರಿಸಲು ನಿರ್ಧರಿಸಲಾಯಿತು. ಜಯಂತಿ ಆಚರಣೆ ಕುರಿತಂತೆ ವಿವಿಧ ಸಮುದಾಯ ಮುಖಂಡರ ಸಲಹೆಗಳನ್ನು ಪಡೆಯಲಾಯಿತು. ಶಿಷ್ಟಾಚಾರದ ಪ್ರಕಾರ ಆಮಂತ್ರಣ ಪತ್ರಿಕೆ ಮುದ್ರಣ, ವೇದಿಕೆ, ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳನ್ನು ಆಹ್ವಾನಿಸುವಂತೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ…

Read More

ಬಾಗಲಕೋಟೆ:ಜನತಾ ದರ್ಶನದ ಕಾರ್ಯಕ್ರಮದಲ್ಲಿ ಜನರು ಹೊತ್ತು ತಂದ ಸಮಸ್ಯೆಗಳಿಗೆ ಸ್ಪಂಧಿಸಿ, ಅವುಗಳನ್ನು ಇತ್ಯರ್ಥಪಡಿಸುವಲ್ಲಿ ಅಧಿಕಾರಿಗಳು ನಿರ್ವಹಿಸಿದ ಕಾರ್ಯ ತೃಪ್ತಿದಾಯಕವಾಗಿದೆ ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಸಂತಸ ವ್ಯಕ್ತಪಡಿಸಿದರು. ಸೀಮಿಕೇರಿ ಗ್ರಾಮದ ಲಡ್ಡುಮುತ್ಯಾ ದೇವಸ್ಥಾನದ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡ ಬೀಳಗಿ ಮತಕ್ಷೇತ್ರಕ್ಕೆ ಸಂಬಂಧಿಸಿದ ಜನತಾ ದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಅಧಿಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಿಸಿದರೆ ಮಾತ್ರ ಸರಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಜನರು ಹೊತ್ತು ತಂದ ಸಮಸ್ಯೆಗಳನ್ನು ಸಹಾನುಭೂತಿಯಿಂದ ಆಲಿಸಿ, ಕಾನೂನಾತ್ಮಕವಾಗಿ ಬಗೆ ಹರಿಯದಿದ್ದರೂ ಸಲಹೆ ಕೊಡಲು ಸಚಿವರು ತಿಳಿಸಿದರು. ಮುಖ್ಯಮಂತ್ರಿಗಳು ಇತ್ತೀಚೆಗೆ ನಡೆಸಿದ ರಾಜ್ಯ ಮಟ್ಟದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಜಿಲ್ಲೆಗೆ ಸಂಬಂಧಿಸಿದ 38 ಮನವಿಗಳು ಸ್ವೀಕೃತಗೊಂಡಿದ್ದವು. ಅದರಲ್ಲಿ 32 ಅರ್ಜಿಗಳಿಗೆ ಕ್ರಮಕೈಗೊಂಡು ಶೇ.99 ರಷ್ಟು ಪ್ರಗತಿ ಸಾಧಿಸಿದ್ದಾರೆ. ಜಿಲ್ಲಾ ಮತ್ತು ತಾಲೂಕಾ ಮಟ್ಟದಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿಯೂ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ ಬಗೆಹರಿಯಬಹುದಾದ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹಾರ ನೀಡಲು…

Read More

ಬಾಗಲಕೋಟೆ ; ಸ್ಥಳೀಯ ಸಂಜೆ ದರ್ಶನ ಕನ್ನಡ ದಿನ ಪತ್ರಿಕೆ 2024 ರ ಕ್ಯಾಲೆಂಡರನ್ನು ಸೋಮವಾರ ಶಾಸಕರಾದ ಎಚ್.ವೈ.ಮೇಟಿ ಅವರು ಬಿಡುಗಡೆಗೊಳಿಸಿದರು. ಪತ್ರಿಕೆ ಸಂಪಾದಕರಾದ ಮಹೇಶ ಅಂಗಡಿ, ಶರಣಪ್ಪ ಕೆರೂರ, , ವಿರೇಶ ನಾಲತವಾಡ, ಸುನೀಲ ಮಾರಬಸರಿ, ಅನಿಲ ಗಾಣಗೇರ, ನಾಗರಾಜ್ ಹದ್ಲಿ, ದ್ಯಾಮಣ್ಣ ಗಾಳಿ, ಎಸ್.ಎನ್.ರಾಂಪೂರ ಮತ್ತಿತರರು ಇದ್ದರು.

Read More