Author: Sanje

ಬಾಗಲಕೋಟೆ ; ಜ.೨೨ ರಂದು ಸೋಮವಾರದಂದು ಐತಿಹಾಸಿಕ ಶ್ರೀರಾಮ ಜನ್ಮ ಸ್ಥಾನ ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ಬಾಲ ರಾಮನ ಮೂರ್ತಿಯ ಪ್ರತಿಷ್ಠಾ ಪನಾ ಸಂಭ್ರಮಗಳನ್ನು ದೇಶ ದಾದ್ಯಂತ ಎಲ್ಲ ಮಂದಿರಗಳಲ್ಲಿ ಆಚರಣೆ ಮಾಡುತ್ತಿರುವ ಶುಭ ಸಂದರ್ಭದಲ್ಲಿ ಬಾಗಲಕೋಟೆ ತಾಲೂಕಿನ ಶ್ರೀಕ್ಷೇತ್ರ ತುಳಸಿಗೇ ರಿಯ ಜಾಗೃತ ಸ್ಥಾನ ಶ್ರೀರಾಮ ಭಂಟ ಭಜರಂಗಬಲಿ ಶ್ರೀ ಮಾರುತಿ ಮಂದಿರದಲ್ಲಿ ಕೂಡ ನಾಳೆ ೨೦,೨೧, ಮತ್ತು ೨೨ ರಂದು ಅನೇಕ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿ ವೆ ಎಂದು ವಿಧಾನಪರಿಷತ್ತ ಸದಸ್ಯ ಮತ್ತು ತುಳಸಿಗೇರಿ ಮಾರುತಿ ದೇವಾಸ್ಥಾನ ಸಮಿತಿ ಯ ಸದಸ್ಯರಾದ ಪಿ.ಎಚ್ ಪೂಜಾರ ಪತ್ರಿಕಾ ಪ್ರಕಟಣೆೆ ಯಲ್ಲಿ ತಿಳಿಸಿದ್ದಾರೆ. ೨೦ ರಂದು ಶನಿವಾರ ಬ್ರಾಹ್ಮ ಮುಹೂರ್ತದಲ್ಲಿ ಬೆಳಿಗ್ಗೆ ಅಭಿಷೇಕ, ವಾಯುಸ್ತುತಿ ಪುನಃಸ್ಮರಣ, ಲೋಕಕಲ್ಯಾಣಾ ರ್ಥ ಸುಂದರಕಾAಡ ಪಾರಾಯಣ. ಪುಣ್ಯಾಹವಾಚನ ಪ್ರಾರಂಭ, ದೇವತಾ ಸ್ಥಾಪನ, ಜಪ ನಂತರ ರಾಮತಾರಕ ಹವನ ಮಹಾಮಂಗಾಳರತಿ, ಪ್ರಸಾದ ವಿತರಣೆ ನಂತರ ನಾಡಿನ ಖ್ಯಾತ ವಿಧ್ಯಾಂಸರಾದ ಶ್ರೀ ಬಿಂದಾಚಾರ್ಯನಾಗ ಸಂಪಿಗೆ ಇವರು ರಾಮನ…

Read More

ಬಾಗಲಕೋಟೆ; ಅಗಣಿತ ಭಕ್ತಗಣದ ಆರಾದ್ಯ ದೈವ ಮುಚಖಂಡಿ ಕ್ರಾಸ್‌ನ ಮಾರುತೇಶ್ವರ ದೇವಸ್ಥಾನದ ಪಂಚಮುಖಿ ಆಂಜನೇಯ ಪ್ರಾಣದೇವರ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ನಗರದಲ್ಲಿ ಗುರುವಾರ ಭವ್ಯ ಶೋಭಾಯಾತ್ರೆ ಸಂಭ್ರಮ ಸಡಗರ ನಡುವೆ ಜರುಗಿತು. ಆಯೋಧ್ಯೆಯಲ್ಲಿ ರಾಮ ಮಂದಿರ ಪ್ರತಿಷ್ಠಾಪನೆ ಮಹೋತ್ಸವ ಸುಸಂದರ್ಭದಲ್ಲಿ ಶ್ರೀರಾಮನ ಬಂಟ ಹನುಮನ ಮೂರ್ತಿ ಬಾಗಲಕೋಟೆ ನಗರದಲ್ಲಿ ಜ.೨೨ ರಂದು ಪಂಚಮುಖಿ ಆಂಜನೇಯ ದೇವಾಲಯ ಉದ್ಘಾಟನೆ ಅಂಗವಾಗಿ ನಡೆದ ಬೃಹತ್ ಶೋಭಾಯಾತ್ರೆ ಬಾಗಲಕೋಟೆ ನಗರವನ್ನು ಭಕ್ತಿಯಲ್ಲಿ ಮಿಂದೇಳುವಂತೆ ಮಾಡಿತು. ನಗರದ ಕೊತ್ತಲೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಆರಂಭಗೊಂಡ ಶೋಭಾಯಾತ್ರೆಗೆ ಕೆರೂರ ಚರಂತಿಮಠದ ಶ್ರೀಗಳು, ಮಳೇರಾಜೇಂದ್ರ ಸ್ವಾಮಿಗಳು ಚಾಲನೆ ನೀಡಿದರು. ಪಂಕಾ ಮಸೀದಿ, ಪೊಲೀಸ್ ಗೇಟ್, ಎಂ.ಜಿ.ರಸ್ತೆ, ಬಸವೇಶ್ವರ ಸರ್ಕಲ್, ಕುಮಟಗಿ ಶೋರಂ, ವಾಸವಿ ಟಾಕೀಜ್, ಮಹಾವೀರ ರೋಡ, ಕೆರೂಡಿ ಆಸ್ಪತ್ರೆ ರೋಡ, ಮುಚಖಂಡಿ ಕ್ರಾಸ್ ರೋಡ ಮೂಲಕ ಮಾರುತೇಶ್ವರ ದೇವಾಲಯಕ್ಕೆ ತಲುಪಿ ಸಮಾಪ್ತಿಗೊಂಡಿತು. ಮೆರವಣಿಗೆಯುದ್ದಕ್ಕೂ ಜೈ ಶ್ರೀರಾಮ, ಜೈ ಆಂಜನೇಯ ಘೋಷಣೆಗಳು ಮುಗಿಲು ಮುಟ್ಟಿದವು. ಪ್ರಮುಖ ಬೀದಿಗಳಲ್ಲಿ…

Read More

ಬಾಗಲಕೋಟೆ: ಇಂದು ಕುಡಚಿ ರೈಲು ಮಾರ್ಗದ ರೈಲ್ವೆ ಹಳಿಗಳ ಕಾಮಗಾರಿ ಮತ್ತು ಜೋಡಿ ಮಾರ್ಗ ವಿದ್ಯುತೀಕರಣ ಪರಿಶೀಲನೆಯನ್ನು ರೈಲು ಮಹಾವ್ಯವಸ್ಥಾಪಕರಾದ ಸಂಜೀವ ಕಿಶೋರ,ವಿಭಾಗಿಯ ವ್ಯವಸ್ಥಾಪಕರಾದ ಹರ್ಷಾ ಖರೆ ಅವರೊಳಗೊಂಡ ವಿವಿಧ ವಿಭಾಗದ ಅಧಿಕಾರಿಗಳನ್ನು ಒಳಗೊಂಡ ತಂಡವು ಬಾಗಲಕೋಟೆ ರೈಲು ನಿಲ್ದಾಣಕ್ಕೆ ಸೇರಿದಂತೆ ಕುಡಚಿ ಮಾರ್ಗಕ್ಕೆ ಒಳಗೊಂಡಿರುವ ನಿಲ್ದಾಣಗಳು ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಹಾವ್ಯವಸ್ಥಾಪಕ ಸಂಜೀವ ಕಿಶೋರ, ಮಾರ್ಚ್ ವೇಳೆಗೆ ಲೋಕಾಪೂರ ರೈಲು ನಿಲ್ದಾಣ ಉದ್ಘಾಟನೆ ಮಾಡಲಾಗುವುದು. 2025 ರ ಒಳಗೆ ಕುಡಚಿ ಮಾರ್ಗ ಪೂರ್ಣಗೊಳಿಸುವ ಕ್ರಮ ಕೈಗೊಳ್ಳಲಾಗಿದೆಂದರು. ಈ ಸಂದರ್ಭದಲ್ಲಿ ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷರಾದ ಶ್ರೀ ಕುತ್ಬುದೀನ ಖಾಜಿ ರವರ ನೆತೃತ್ವದಲ್ಲಿ ಹೋರಾಟ ಸಮಿತಿಯ ಶ್ರೀನಿವಾಸ ಬಳ್ಳಾರಿ, ಶ್ರೀಮತಿ ಜಯಶ್ರೀ ಗುಳಬಾಳ, ಮಂಜುಳಾ ಬುಸಾರೆ, ಪ್ರೇಮಾ ರಾಠೋಡ, ಧರ್ಮ ಡಿ.ಸಿ. ಫಹಾದ ಪಟೇಲ, ಮೈನುದ್ದೀನ ಖಾಜಿ ಅವರೊಳಗೊಂಡ ಸಮೀತಿಯ ಪದಾಧಿಕಾರಿಗಳು ಭೇಟಿಯಾಗಿ ಸಮಸ್ಯೆಗಳನ್ನು ವಿವರಿಸಿ ಮನವಿ ಸಲ್ಲಿಸಿದರು.

Read More

ಬಾಗಲಕೋಟೆ ; ಆಹಾರ ಇಲಾಖೆ ಅಧಿಕಾರಿ 60 ಸಾವಿರ ಲಂಚ ಸ್ವೀಕರಿಸುತ್ತಿರುವಾಗ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಪುಡ್ ಇನ್ಸಪೆಕ್ಟರ್ ವೀರಯ್ಯ ಕೋಟಿ ಹಾಗೂ ಮಲ್ಲಿಕಾರ್ಜುನ ಹಾವರಗಿ ಲೋಕಾಯುಕ್ತರ ಬಲೆಗೆ ಬಿದ್ದಿದ್ದು, ಬಾಗಲಕೋಟೆ ತಹಶಿಲ್ದಾರ ಕಛೇರಿಯಲ್ಲಿ ಆಹಾರ ಇಲಾಖೆ ವಿಭಾಗದಲ್ಲಿ ಕಾರ್ಯನಿರ್ವಸುತ್ತಿದ್ದರು. ವಿದ್ಯಾಗಿರಿಯ 7 ನೇ ಕ್ರಾಸ್ ನಲ್ಲಿರುವ ನ್ಯಾಯಬೆಲೆ ಅಂಗಡಿ ಮಾಲೀಕರಿಂದ ಲಂಚಕ್ಕೆ ಬೇಡಿಕೆ ಇಟ್ಟದ್ದ ಅಧಿಕಾರಿ. ರದ್ದಾದ ರೇಷನ್ ಅಂಗಡಿಗೆ ಪುನ: ಆರಂಭಿಸಲು ಅನುಮತಿಗಾಗಿ ಸುರೇಶ ಗಡಗಡೆ ಎಂಬುವವರಿಂದ 60 ಸಾವಿರ ರೂ.ಗೆ ಪಡೆಯುವ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಲೋಕಾಯುಕ್ತ ಡಿವೈಎಸ್ಪಿ ಪಿ.ಪುಷ್ಪಲತಾ, ಸಿಪಿಐ ಬಿದರಿ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ.

Read More

ಬಾಗಲಕೋಟೆ ; ಬಾಗಲಕೋಟೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಬಜೆಟ್ ನಲ್ಲಿ ಹೆಚ್ಚಿನ ಅನುದಾನ ನೀಡುವಂತೆ ಶಾಸಕ ಎಚ್.ವಾಯ್.ಮೇಟಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದರು. ಮಂಗಳವಾರ ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಬಾಗಲಕೋಟೆಗೆ ತಾವು 2013 ರಲ್ಲಿ ತಾವು ಬಜೆಟ್ ನಲ್ಲು ವೈದ್ಯಕೀಯ ಮಹಾವಿದ್ಯಾಲಯವನ್ನು ಸ್ಥಾಪನೆಗೆ ಬಜೆಟ್ ನಲ್ಲಿ ಮಂಜೂರು ಮಾಡಿದ್ದು ಆದರೆ ಇಲ್ಲಿವರೆಗೂ ಯಾವುದೇ ಸರ್ಕಾರದಿಂದ ಸೂಕ್ತ ಅನುದಾನ ಬಿಡುಗಡೆಗೊಂಡಿಲ್ಲ ಈಗ ತಾವೇ ಮುಖ್ಯಮಂತ್ರಿಯಾಗಿದ್ದು, ಮಂಜೂರು ಆಗಿರುವ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಬಜೆಟ್ ನಲ್ಲಿ ಸೂಕ್ತ ಅನುದಾನ ಬಿಡುಗಡೆ ಮಾಡಿ ಆರಂಭಿಸಬೇಕು ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಯುವ ಮುಖಂಡರಾದ ಹೊಳಬಸು ಶೆಟ್ಟರ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ನಾಗರಾಜ ಹದ್ಲಿ,ಬ್ಲಾಕ್ ಅದ್ಯಕ್ಷ ಎಸ.ಎನ್. ರಾಂಪೂರ ಮತ್ತಿತರರು ಇದ್ದರು.

Read More

ಬಾಗಲಕೋಟೆ ; ಯುವಜನರಲ್ಲಿ ಮತದಾನದ ಮಹತ್ವ ಸಾರುವ ಉದ್ದೇಶದಿಂದ ಜನವರಿ 25 ರಂದು ಆಚರಿಸಲ್ಪಡುವ ರಾಷ್ಟ್ರೀಯ ಮತದಾರರ ದಿನ ಕಾರ್ಯಕ್ರಮಕ್ಕೆ ಅಗತ್ಯ ಸಿದ್ದತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಮಂಗಳವಾರ ನಡೆದ ರಾಷ್ಟ್ರೀಯ ಮತದಾರರ ದಿನ ಆಚರಿಸುವ ಕುರಿತ ಪೂರ್ವ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಚುನಾವಣಾ ಆಯೋಗದ ನಿರ್ದೇಶನದಂತೆ ದೇಶದ ಜನತೆಯಲ್ಲಿ ಅದರಲ್ಲೂ ಯುವಜನರಲ್ಲಿ ಚುನಾವಣೆ ಕುರಿತು ಅರಿವು ಮೂಡಿಸುವ ಆಶಯದೊಂದಿಗೆ ಪ್ರತಿ ವರ್ಷ ಜನವರಿ 25 ರಂದು ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ ಎಂದರು. ಈ ಕಾರ್ಯಕ್ರಮವನ್ನು ತಾಲೂಕಾ, ಮತಗಟ್ಟೆ ಮಟ್ಟದಲ್ಲಿ ಹಾಗೂ ಕಾಲೇಜುಗಳಲ್ಲಿ ವ್ಯಾಪಕವಾಗಿ, ಪರಿಣಾಮಕಾರಿಯಾಗಿ ಹಬ್ಬದ ವಾತಾವರಣ ಮೂಡುವ ರೀತಿಯಲ್ಲಿ ಕಾರ್ಯಕ್ರಮ ಆಯೋಜನೆಗೆ ಕ್ರಮಕೈಗೊಳ್ಳಬೇಕು. ಸಂವಿಧಾನ ರಚನೆಯಾಗಿ 75 ವರ್ಷಾಚರಣೆ ಹಿನ್ನಲೆಯಲ್ಲಿ ಸ್ವೀಪ್‍ಅಡಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲು ಸೂಚಿಸಿದರು. ನಗರ ಸ್ಥಳೀಯ ಹಾಗೂ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಸ್ವಚ್ಚವಾಹಿನಿಯಲ್ಲಿ ಕಡ್ಡಾಯ ಮತದಾನದ ಮಹತ್ವವನ್ನು ಧ್ವನಿವರ್ಧಕಗಳ ಮೂಲಕ…

Read More

ಬಾಗಲಕೋಟೆ ; ಸಂವಿಧಾನ ಜಾರಿಗೆ ಬಂದು 75ನೇ ವರ್ಷಾಚರಣೆ ಅಂಗವಾಗಿ ಜನವರಿ 26 ರಿಂದ ಜಿಲ್ಲೆಯಾದ್ಯಂತ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಹೇಳಿದರು. ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸಂವಿಧಾನ ಜಾಗೃತಿ ಜಾಥಾ ಕುರಿತು ಮಂಗಳವಾರ ಜರುಗಿದ ವಿಡಿಯೋ ಸಂವಾದ ಸಭೆಯ ಬಳಿಕ ಮಾತನಾಡಿದ ಅವರು ಸಂವಿಧಾನದ ಮಹತ್ವ ಹಾಗೂ ರಾಷ್ಟ್ರೀಯ ಏಕತೆಯನ್ನು ಎತ್ತಿ ಹಿಡಿಯುವ ಉದ್ದೇಶದಿಂದ ಬುದ್ದ, ಬಸವ, ಅಂಬೇಡ್ಕರ ಹಾಗೂ ನಾರಾಯಣ ಗುರುಗಳ ಒಳಗೊಂಡ ಸ್ಥಬ್ದ ಚಿತ್ರಗಳೊಂದಿಗೆ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಜಾಗೃತಿ ಜಾಥಾ ಸಂಚರಿಸಲಿದೆ ಎಂದರು. ಜನವರಿ 26 ರಂದು ಜರಗುವ ಸ್ಥಬ್ದಚಿತ್ರದ ಮೆರವಣಿಗೆಗೆ ಜಿಲ್ಲಾ ಉಸ್ತುವಾರಿ ಸಚಿವರು ಚಾಲನೆ ನೀಡಲಿದ್ದಾರೆ. ಸ್ಥಬ್ದಚಿತ್ರಗಳ ಮೆರವಣಿಗೆಗೆ ಜಿಲ್ಲಾ, ತಾಲೂಕಾ ಹಾಗೂ ಗ್ರಾಮ ಪಂಚಾಯತ ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನೊಳಗೊಂಡ ಸಮಿತಿಯನ್ನು ರಚಿಸಲಾಗುತ್ತಿದೆ. ಸಮಿತಿಯು ಸ್ಥಬ್ದಚಿತ್ರ ಮೆರವಣಿಗೆ ಮಾರ್ಗ ಅಂತಿಮಗೊಳಿಸಲಾಗುತ್ತಿದೆ. ಮೆರವಣಿಗೆಯಲ್ಲಿ ಸಾಂಸ್ಕøತಿ ಕಾರ್ಯಕ್ರಮ ಹಾಗೂ ಭಾರತದ ಸಂವಿಧಾನ ಪೀಠಿಕೆಯ ಮಾಹಿತಿಯುಳ್ಳ ಕರ ಪತ್ರಗಳನ್ನು…

Read More

ಬಾಗಲಕೋಟೆ: ಆಚಾರ ವಿಚಾರಗಳೊಂದಿಗೆ ಸಕಲ ಜೀವಿಗಳಿಗಳ ಒಳತಿಗಾಗಿ ಕೆರೆ, ಕಟ್ಟೆ, ಬಾವಿ ನಿರ್ಮಿಸಿ, ನೀರಿನ ಮಹತ್ವನ್ನು ತಿಳಿಸಿಕೊಡಲು ಶ್ರಮಿಸಿದ ಶಿವಯೋಗಿ ಸಿದ್ದರಾಮೇಶ್ವರರು ಕಾಯಕಯೋಗಿಯಾಗಿದ್ದರು ಎಂದು ಸಂಸದ ಪಿ. ಸಿ. ಗದ್ದಿಗೌಡರ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸೋಮವಾರ ನವನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಯಾವುದೇ ಕಾಯಕವಾಗಲಿ ಶ್ರದ್ದೆಯಿಂದ ಪ್ರಾಮಾಣಿಕವಾಗಿ ಮಾಡಬೇಕು ಎಂಬ ನಂಬಿಕೆಯನ್ನುಳ್ಳ ಅಂದಿನ ೧೨ ನೇ ಶತಮಾನದ ಶಿವಯೋಗಿ ಸಿದ್ದರಾಮೇಶ್ವರರು ಕಾಯಕ ಮಾಡುತ್ತಾ, ವಚನಗಳನ್ನು ರಚಿಸಿ ಅವುಗಳ ಮೂಲಕ ಸಮಾಜದ ಅಂಕುಡೊAಕುಗಳನ್ನು ತಿದ್ದಿದರು. ಅವರ ಆದರ್ಶಗಳನ್ನು ಇಂದಿನ ಪೀಳಿಗೆ ಅಳವಡಿಸಿಕೊಳ್ಳಬೇಕಾಗಿದೆ ಎಂದರು. ಎಮ್ ಎಲ್ ಸಿ. ಪಿ ಹೆಚ್ ಪೂಜಾರ ಅವರು ಮಾತನಾಡಿ ಸಿದ್ದರಾಮೇಶ್ವರರು ಕೇವಲ ಪ್ರವಚನ ಮಾಡುವ ಯೋಗಿ ಆಗದೇ ಕಾಯಕಯೋಗಿ ಆದವರು. ಕಾಯಕದಲ್ಲೇ ಕೈಲಾಸ ಕಂಡವರು. ಕಾಯಕದೊಂದಿಗೆ ವಚನಗಳ ಮೂಲಕ ಸಮಾಜದ ಅಂಕು ಡೊಂಕುಗಳನ್ನು ತಿದ್ದಿ,…

Read More

* ಕೂಡಲಸಂಗಮ ; ರಾಜಕೀಯ ಉದ್ದೇಶದಿಂದ ಕಾರವಾರ ಸಂಸದ ಅನಂತಕುಮಾರ ಹೆಗ್ಡೆಯವರು ರಾಜ್ಯದ ಮುಖ್ಯಮಂತ್ರಿಗಳಿಗೆ ಅಶ್ಲೀಲ ಪದಗಳನ್ನು ಬಳಸಿದ್ದರೆ, ಆ ಭಾಷೆ ಅವರ ಸಂಸ್ಕೃತಿಯನ್ನು ಬಿಂಬಿಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಕೂಡಲಸಂಗಮ ಹೆಲಿಪ್ಯಾಡ್ ನಲ್ಲಿ ಕಾರ್ಯಕ್ರಮಕ್ಕೆ ತೆರಳುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದರು. ಕಾರವಾರ ಸಂಸದ ಅನಂತಕುಮಾರ ಹೆಗ್ಡೆಯವರು ಅಯೋಧ್ಯೆ ಕಾರ್ಯಕ್ರಮಕ್ಕೆ ಆಹ್ವಾನವಿದ್ದರೂ ಮುಖ್ಯಮಂತ್ರಿಗಳು ತೆರಳುತ್ತಿಲ್ಲವೆಂದು ಏಕವಚನದಲ್ಲಿ ಆರೋಪಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಇಂತಹ ಹೇಳಿಕೆಗಳು ಅವರ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಕೇಂದ್ರದ ಮಂತ್ರಿಯಾಗಿದ್ದಾಗ, ಸಂವಿಧಾನವನ್ನೇ ಬದಲಾಯಿಸುತ್ತೇನೆ ಎಂದು ಹೇಳಿದ್ದ ಅನಂತ ಕುಮಾರ್ ಹೆಗ್ಡೆಯವರಿಂದ ಉತ್ತಮ ಸಂಸ್ಕೃತಿಯನ್ನು ಅಪೇಕ್ಷಿಸಲು ಸಾಧ್ಯವಿಲ್ಲ. ಅವರ ಭಾಷೆ ಸುಸಂಸ್ಕೃತವಾಗಿಲ್ಲ. ಈ ಭಾಷೆ ಅವರ ಘನತೆಗೆ ಕುಂದು ಬರುತ್ತದೆ ಎಂದು ತಿಳಿಸಿದರು.

Read More

ಕೂಡಲ ಸಂಗಮ ; ಬಸವಾದಿ ಶರಣರ ಆಶಯದ ಜಾತಿ ರಹಿತ ಸಮಾಜ ನಿರ್ಮಾಣ ಶರಣರಿಂದ ಸಾಧ್ಯ. ಶರಣ ಎಂದರೆ ಜಾತಿ-ವರ್ಗ ಇಲ್ಲದ್ದು. ಶರಣ ಮೇಳ ಎಂದರೆ ಜಾತಿಯಿಂದ ಮುಕ್ತರಾದ ಮನುಷ್ಯರ ಮೇಳ ಎಂದು ಸಿ.ಎಂ ಸಿದ್ದರಾಮಯ್ಯ ಅವರು ನುಡಿದರು. ಲಿಂಗಾಯತ ಧರ್ಮ ಸಂಸ್ಥಾಪನಾ ದಿನದ ಅಂಗವಾಗಿ ಕೂಡಲ ಸಂಗಮದಲ್ಲಿ ಆಯೋಜಿಸಿದ್ದ 37 ನೇ ಶರಣ ಮೇಳವನ್ನು ಉದ್ಘಾಟಿಸಿ ಮಾತನಾಡಿದರು. ಬಸವಾದಿ ಶರಣರು 12 ನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿ ಮಾಡಿದರು. ನಮ್ಮ ಚಲನೆ ರಹಿತ ಜಾತಿ ವ್ಯವಸ್ಥೆಯ ಸಾಮಾಜಿಕ ವ್ಯವಸ್ಥೆಯನ್ನು ಪಟ್ಟಭದ್ರ ಹಿತಾಸಕ್ತಿಗಳು ರೂಪಿಸಿದರು. ಇದನ್ನು ಮಾಡಿದ್ದು ದೇವರಲ್ಲ ಎಂದು ನುಡಿದರು. ಬಹು ಸಂಖ್ಯಾತರನ್ನು ಶಿಕ್ಷಣದಿಂದ ದೂರ ಇಡಲು ಅಸಮಾನತೆಯಿಂದ ಕೂಡಿದ ಚಾತುವರ್ಣ ವ್ಯವಸ್ಥೆಯನ್ನು ಮಾಡಿದರು. ಬಸವಾದಿ ಶರಣರ ವಚನ ಚಳವಳಿ ತಾರತಮ್ಯದಿಂದ ಕೂಡಿದ ಕರ್ಮ ಸಿದ್ಧಾಂತವನ್ನು, ಮೌಡ್ಯವನ್ನು ತೊಡೆದು ಹಾಕಿತು. ಹಣೆ ಬರಹ ಮತ್ತು ಕರ್ಮ ಸಿದ್ಧಾಂತವನ್ನು, ಹಿಂದಿನ ಜನ್ಮ-ಮುಂದಿನ ಜನ್ಮ ಎನ್ನುವುದನ್ನು ಬಸವಣ್ಣನವರು ಸಂಪೂರ್ಣ ತಿರಸ್ಕರಿಸಿದರು. ಅಯ್ಯಾ ಎಂದರೆ…

Read More