ಬಾಗಲಕೋಟೆ ; ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಶಾಸಕ ಎಚ್.ವಾಯ್.ಮೇಟಿ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರದ ಆದೇಶ ಹೊರಡಿಸಿದೆ. ಬೀಳಗಿ ಶಾಸಕ ಜೆ.ಟಿ.ಪಾಟೀಲ ಅವರನ್ನು ಹಟ್ಟಿ ಚಿನ್ನದ ಗಣಿ ಹಾಗೂ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರರನ್ನು ಕರ್ನಾಟಕ ಕ್ರೀಡಾ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಿಸಿ ಶುಕ್ರವಾರ ಆದೇಶ ಹೊರಡಿಸಿದೆ.
Author: Sanje
ಬಾಗಲಕೋಟೆ ; ಆಸ್ತಿ ವಿಷಯದ ವೈಷಮ್ಯದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ ಘಟನೆ ಸೀತಿಮನಿ ಹತ್ತಿರ ಗುರುವಾರ ಮಧ್ಯರಾತ್ರಿ ನಡೆದ ವರದಿಯಾಗಿದೆ. ತಿಮ್ಮಾಪುರದ ಚನ್ನಪ್ಪ ಶಿವಪ್ಪ ತುಂಬರಮಟ್ಟಿ(೬೦)ಕೊಲೆಯಾದ ವ್ಯಕ್ತಿ ಎಂದು ಹೇಳಲಾಗಿದ್ದು, ಈ ಸಂಬಂಧ ಮೃತನ ಪುತ್ರ ಶಿವಾನಂದ ತುಮ್ಮರಮಟ್ಟಿ, ತನ್ನ ತಂದೆಯನ್ನು ಸಹೋದರ ಚನ್ನಬಸಪ್ಪ ತುಂಬರಮಟ್ಟಿ, ಶಿವಬಸವ್ವ ಚನ್ನಬಸಪ್ಪ ತುಂಬರಮಟ್ಟಿ, ರಮೇಶ ಮಹಾದೇವಪ್ಪ ಮನಗೂಳಿ ಹಾಗೂ ಇನ್ನಿತರರು ಸಂಚು ಮಾಡಿ ಸುಫಾರಿ ಕೊಟ್ಟು ಕೊಲೆ ಮಾಡಿಸಿದ್ದಾರೆಂದು ಬಾಗಲಕೋಟೆ ಗ್ರಾಮೀಣ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ. ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಡಿಎಸ್ ಪಿ ಪಂಪನಗೌಡ, ಗ್ರಾಮೀಣ ಸಿಪಿಐ ಎಚ್.ಆರ್.ಪಾಟೀಲ, ಪಿಎಸ್‌ಐ ಶರಣಬಸಪ್ಪ ಸಂಗಳದ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಗಲಕೋಟೆ ; ಭಾರತ ದೇಶವು ಗಣ ರಾಜ್ಯವಾಗಿ 75 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ರಾಜ್ಯಾದ್ಯಂತ “ಸಂವಿಧಾನ ಜಾಗೃತಿ ಜಾಥ” ಆಯೋಜಿಸಿದ್ದು, ಇದರ ಅಂಗವಾಗಿ ಶುಕ್ರವಾರ ಸಂಜೆ ಜಿಲ್ಲಾಡಾಳಿತ ಭವನ ಆವರಣದಲ್ಲಿರುವ Dr. B R ಅಂಬೇಡ್ಕರ ಪುತ್ತಳಿ ಹತ್ತಿರ ಬಾಗಲಕೋಟೆ ಜಿಲ್ಲೆಯಲ್ಲಿ ಸಂಚಾಸಲಿರುವ ಸಂವಿಧಾನ ಜಾಗೃತಿ ಜಾಥಾ ಸ್ತಬ್ದಚಿತ್ರಕ್ಕೆ ಅಬಕಾರಿ ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ R B ತಿಮ್ಮಾಪುರ ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮವು ಜನವರಿ 26 ರಿಂದ ಫೆಬ್ರವರಿ 23ರ ವರೆಗೆ ಎರಡು ಸ್ತಬ್ಧಚಿತ್ರಗಳ ಮೆರವಣಿಗೆಯ ಮೂಲಕ ಬಾಗಲಕೋಟೆ ಮತ್ತು ಜಮಖಂಡಿ ಉಪವಿಭಾಗ ವ್ಯಾಪ್ತಿಯಲ್ಲಿ ಬರುವ ಎಲ್ಲ ಗ್ರಾಮ ಪಂಚಾಯತಿ ಮತ್ತು ನಗರ ಪಟ್ಟಣ ಪ್ರದೇಶದಲ್ಲಿ ಸಂಚರಿಸಿ ಸಂವಿಧಾನ ಪೀಠಿಕೆ ಮತ್ತು ಅದರಲ್ಲಿನ ಅಂಶಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಸಂವಿಧಾನ ಜಾಗೃತಿ ಜಾಥಾ ಸ್ತಬ್ಧಚಿತ್ರಗಳು ಭಾರತದ ಸಂವಿಧಾನ ಪೀಠಿಕೆ ವಾಚನ, ನ್ಯಾಯ, ಸಾಮಾಜಿಕ, ಆರ್ಥಿಕ…
ಬಾಗಲಕೋಟೆ ; ಬಿಟ್ಟು ಹೋಗಿರುವ, ಯಾವುದೇ ದಾಖಲೆ ಹೊಂದಿರದ ಮತ್ತು ಬಡ ಕುಟುಂಬಗಳು ಸರಕಾರಿ ಯೋಜನೆಗಳ ಸವಲತ್ತುಗಳಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಜಿಲ್ಲೆಯಾಧ್ಯಾಂತ ಗ್ಯಾರಂಟಿ ಸಮಾವೇಶಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು. ಜಿಲ್ಲಾಡಳಿತ ಭವನದ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯಲ್ಲಿ ಶುಕ್ರವಾರದಂದು, ಸರಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಕುರಿತು ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು ರಾಜ್ಯ ಸರಕಾರದ ಮಹತ್ವಕಾಂಕ್ಷಿ ಐದೂ ಗ್ಯಾರಂಟಿ ಯೋಜನೆಗಳಿಗೆ ಚಾಲನೆ ನೀಡಲಾಗಿದ್ದು, ಈ ಯೋಜನೆಗಳಿಂದ ಅರ್ಹ ಫಲಾನುಭವಿಗಳು ಮಾಹಿತಿ ಕೊರತೆಯಿಂದ ವಂಚಿತರಾಗಬಾರದು ಎಂಬುದನ್ನು ಮನಗಂಡು ಮುಖ್ಯಮಂತ್ರಿಯವರು ಗ್ಯಾರಂಟಿ ಸಮಾವೇಶಗಳನ್ನು ಜನಪ್ರತಿನಿಧಿಗಳ ಸಮ್ಮುಖದಲ್ಲಿ ನಡೆಸಲು ಸೂಚಿಸಿದ್ದು, ಜಿಲ್ಲೆಯಲ್ಲಿ ಜ.೨೭ ರಿಂದ ಫೆ.೨ ರವರೆಗೆ ಗ್ಯಾರಂಟಿ ಸಮಾವೇಶ ಆಯೋಜಿಸಲು ಅಗತ್ಯ ಸಿದ್ದತೆಗಳನ್ನು ಅಧಿಕಾರಿಗಳು ಮಾಡಿಕೊಳ್ಳಬೇಕು ಎಂದರು. ಸಮಾವೇಶಗಳ ಆಯೋಜನೆಯ ಸಂಪೂರ್ಣ ಜವಾಬ್ದಾರಿಯು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೇಲೆ ಇದ್ದು, ತಾಲೂಕು ಮಟ್ಟದಲ್ಲಿ ತಹಶೀಲ್ದಾರರನ್ನು ಜವಾಬ್ದಾರಿ ಅಧಿಕಾರಿಯನ್ನಾಗಿ…
ಬಾಗಲಕೋಟೆ ; ಕಬ್ಬು ತುಂಬಿ ನಿಂತಿದ್ದ ಟ್ರ್ಯಾಕ್ಟರ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ನಾಲ್ವರು ಮೃತಪಟ್ಟಿರೋ ಘಟನೆ ಬಾಗಲಕೋಟೆ ಜಿಲ್ಲೆಯ ತುಂಬರಮಟ್ಟಿ ಕ್ರಾಸ್ ಬಳಿ ನಡೆದಿದೆ. ಹುಬ್ಬಳ್ಳಿ ಸೋಲ್ಹಾಪೂರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳಗಿನ ಜಾವ ೪ ಗಂಟೆಗೆ ಈ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಮಲ್ಲು ಪೂಜಾರಿ (24), ಕಲ್ಲಪ್ಪ ಕೌಟಗಿ, (34), ಕಾಮಾಕ್ಷಿ ಬಡಿಗೇರ (35), ತುಕಾರಾಮ್ ತಳೇವಾಡ (30) ಎಂಬ ನಾಲ್ವರು ಮೃತಪಟ್ಟಿದ್ದು, ಮೃತರನ್ನೆಲ್ಲಾ ವಿಜಯಪುರ ಜಿಲ್ಲೆಯ ಹೊನಗನಹಳ್ಳಿ ಗ್ರಾಮದವರು ಎಂದು ಗುರುತಿಸಲಾಗಿದೆ. ಇವರೆಲ್ಲಾ ಬಾದಾಮಿಯಿಂದ ಹೊನಗನಹಳ್ಳಿಗೆ ತೆರಳುತ್ತಿದ್ದರು, ಇನ್ನು ಘಟನೆ ಬೆನ್ನಲ್ಲೆ ಸ್ಥಳಕ್ಕೆ ಬಾಗಲಕೋಟೆ ಎಸ್.ಪಿ. ಅಮರನಾಥ ರೆಡ್ಡಿ ಭೇಟಿ ನೀಡಿದ್ದು, ಜೆಸಿಬಿ ಮೂಲಕ ಕಬ್ಬು ತೆರವುಗೊಳಿಸಿ ಕಾರು ಹೊರ ತೆಗೆಯಲಾಯಿತು. ಇತ್ತ ಮೃತದೇಹಗಳನ್ನು ಬೀಳಗಿ ತಾಲೂಕಾಸ್ಪತ್ರೆಗೆ ಶವಪರೀಕ್ಷೆಗೆ ಕೊಂಡೊಯ್ಯಲಾಯಿತು. ಸ್ಥಳದಲ್ಲಿ ಮೃತರ ಸಂಭಂಧಿಗಳ ಆಕ್ರಂದನ ಮುಗಿಲು ಮುಟ್ಟಿತ್ತು.
ಬಾಗಲಕೋಟೆ: ಐತಿಹಾಸಿಕ ಬಾದಾಮಿ ನಗರವನ್ನು ಅಂದಗೊಳಿಸಲು ಹಾಗೂ ಗತವೈಭವ ಮರುಕಳುಹಿಸುವ ಕಾರ್ಯವಾಗಬೇಕಿದ್ದು, ಈ ದಿಶೆಯಲ್ಲಿ ಚಾಲುಕ್ಯರ ಪ್ರಸಿದ್ದ ರಾಜ ಇಮ್ಮಡಿ ಪುಲಕೇಶಿ ಹಾಗೂ ಜಗಜ್ಯೋತಿ ಬಸವೇಶ್ವರರ ಪುತ್ಥಳಿಗಳು ನಿರ್ಮಾಣಗೊಂಡಿವೆ. ಅವುಗಳನ್ನು ಪ್ರತಿಷ್ಠಾಪಿಸಲು ಶೀಘ್ರದಲ್ಲಿಯೇ ಸ್ಥಳ ಗುರುತಿಸುವ ಕಾರ್ಯವಾಗಬೇಕೆಂದು ಸಂಸದ ಪಿ.ಸಿ.ಗದ್ದಿಗೌಡರ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾ ಪಂಚಾಯತ ನೂತನ ಸಭಾಭವನದಲ್ಲಿ ಬುಧವಾರ ಜಿಲ್ಲಾ ಅಭಿವೃದ್ದಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ ಸಭೆಯ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಹೃದಯ ಯೋಜನೆಯಡಿ ಪುಲಕೇಶಿಯ ಎಡರು ಪುತ್ಥಳಿ ಹಾಗೂ ಬಸವೇಶ್ವರರ ಒಂದು ಪುತ್ಥಳಿ ತಯಾರಾಗಿದ್ದು, ಅವುಗಳನ್ನು ಸ್ಥಾಪನಾ ಮಾಡುವ ಕಾರ್ಯ ವಿಳಂಭವಾಗಿದೆ. ಆದ್ದರಿಂದ ಸ್ಥಳೀಯ ಅಧಿಕಾರಿಗಳು ಪ್ರವಾಸಿಗರಿಕೆ, ಸಾರ್ವಜನಿರಿಗೆ ಕಾಣುವ ರೀತಿಯಲ್ಲಿ ಸೂಕ್ತ ಸ್ಥಳಗಳನ್ನು ಗುರುತಿಸಿ ಪುತ್ಥಳಿಗಳ ಪ್ರತಿಷ್ಠಾಪನೆ ಕಾರ್ಯ ಕೂಡಲೇ ಆಗಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಪಾರಂಪರಿಕ ಐಹೊಳೆಯಲ್ಲಿ ದುರ್ಗಾದೇವಾಲಯ ಹಾಗೂ ಹುಚ್ಚಿಮಲ್ಲಿ ಗುಡಿ ಪುನಶ್ಛೇತನಗೊಳಿಸುವ ಕಾಮಗಾರಿಗಳು ಪ್ರಗತಿ ಹಂತದಲ್ಲಿದ್ದು, ಉಳಿದ ಐತಿಹಾಸಿಕ ಅಭಿವೃದ್ದಿಗೆ ಕೈಗೊಂಡ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ತಿಳಿಸಿದರು.…
ಬಾಗಲಕೋಟೆ- ಕಾರು ಹಾಗೂ ಟಂಟಂ ನಡುವೆ ಡಿಕ್ಕಿ ಸಂಭವಿಸಿ ೧ ಒಂದು ವರ್ಷದ ಮಗು ಸೇರಿ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಗದ್ದನಕೇರಿ ಕ್ರಾಸ್ ಸಮೀಪದ ರಾಮಾರೂಢ ಮಠದ ಬಳಿಯ ರಸ್ತೆಯಲ್ಲಿ ಸಂಭವಿಸಿದೆ. ಗದ್ದನಕೇರಿಯಿಂದ ತುಳಸಿಗೇರಿ ಗ್ರಾಮದ ಕಡೆಗೆ ಟಂಟಂ ವಾಹನದಲ್ಲಿ ತೆರಳುತ್ತಿದ್ದಾಗ ಕಾರು ಹಾಗೂ ಟಂಟಂ ನಡುವೆ ಡಿಕ್ಕಿ ಸಂಭವಿಸಿದ್ದು ಗದ್ದನಕೇರಿ ಗ್ರಾಮದ ವಿಜಯ ತೇಲಿ (೬೨), ಒಂದು ವರ್ಷದ ಮಗು ಗೌರಿ ಚವ್ಹಾಣ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಟಂಟಂ ( ಕೆಎ೨೯-ಬಿ೧೫೦೭) ಇದರಲ್ಲಿ ೧೦ ಜನರು ಪ್ರಯಾ ಣ ಮಾಡುತ್ತಿದ್ದರು. ಎದುರಿಗೆ ಬಂದ ಕಾರು (ಪಿವಾಯ್೦೫-ಕ್ಯೂ೪೨೪೨) ಮುಖಾಮುಖಿ ಡಿಕ್ಕಿಯಾಗಿದ್ದು ಟಂಟಂದಲ್ಲಿ ಇದ್ದ ಇಬ್ಬರು ಸಾವನ್ನಪ್ಪಿದ್ದರೆ ೮ ಜನರು ಗಾಯಗೊಂಡಿದ್ದಾರೆ. ಟಂಟಂಗೆ ಕಾರು ಡಿಕ್ಕಿ ಹೊಡೆದ ರಭಸಕ್ಕೆ ಟಂಟಂನಲ್ಲಿದ್ದ ಪ್ರಯಾಣಿಕರು ರಸ್ತೆ ಹಾಗೂ ಪಕ್ಕದ ಹೊಲದಲ್ಲಿ ಬಿದ್ದು ನರಳುತ್ತಿದ್ದರು. ಅಪಘಾತ ನಡೆದ ಸ್ಥಳದಲ್ಲಿ ಸಾರ್ವಜನಿಕರು ಸೇರಿಕೊಂಡು ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು. ೧೦೮ ವಾಹನದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಯಿತು.…
ಬಾಗಲಕೋಟೆ ; ಮುಚಖಂಡಿ ಕ್ರಾಸನ ಪಂಚಮುಖಿ ಆಂಜನೇಯ ದೇವಸ್ಥಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಭೇಟಿ ನೀಡಿದರು. ನಾಳೆ ಪಂಚಮುಖಿ ಆಂಜನೇಯ ಪ್ರಾಣ ಪ್ರತಿಷ್ಠಾಪನೆಯಾಗಲಿದ್ದು, ಇಂದು ಸಚಿವರು ದೇವಸ್ಥಾನಕ್ಕೆ ಆಗಮಿಸಿ ಆಂಜನೇಯನ ದರ್ಶನ ಪಡೆದರು. ಈ ಸಂದರ್ಭದಲ್ಲಿ ಮಾರುತೇಶ್ವರ ಸೇವಾ ಸಂಘದ ವತಿಯಿಂದ ಸಚಿವರನ್ನು ಸನ್ಮಾನಿಸಲಾಯಿತು. ಮಲ್ಲಿಕಾರ್ಜುನ ಚರಂತಿಮಠ, ರವಿ ಕುಮಟಗಿ, ಬಸವರಾಜ ಕಟಗೇರಿ, ಎಂ ಆರ. ಶಿಂಧೆ, ವಿಜಯ ಸುಲಾಖೆ, ಆನಂದ ಜಿಗಜಿನ್ನಿ, ಅರುಣ ಲೋಕಾಪೂರ,ಶಿವಾನಂದ ಉದಪುಡಿ, ಗುರು ಅನಗವಾಡಿ, ವಿರೇಶ ಮುತ್ತಿನಮಠ ಸೇರಿದಂತೆ ಅನೇಕರು ಇದ್ದರು.
ಬಾಗಲಕೋಟೆ ; ಮಕ್ಕಳೊಂದಿಗೆ, ಪಾಲಕರೊಂದಿಗೆ ಮತ್ತು ಸಾರ್ವಜನಿಕರೊಂದಿಗೆ ಅನುಚಿತವಾಗಿ ಹಾಗೂ ಅಮಾನವೀಯವಾಗಿ ವರ್ತಿಸುತ್ತಿರುವ ತಾಲೂಕಿನ ಬೆವಿನಮಟ್ಟಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿಯೋಜನೆ ಮೇರೆಗೆ ಕಾರ್ಯನಿರ್ವಹಿಸುತ್ತಿರುವ ಸಹಶಿಕ್ಷಕಿ ಬಿ.ಸಿ.ಹಂಜಿ ಅವರನ್ನು ಇಲಾಖಾ ವಿಚಾರಣೆಗೆ ಆಯ್ದಿರಿಸಿ, ಸೇವೆಯಿಂದ ಅಮಾನತ್ತುಗೊಳಿಸಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಕೆ.ನಂದನೂರ ಆದೇಶ ಹೊರಡಿಸಿದ್ದಾರೆ. ಸದರಿ ಶಿಕ್ಷಕಿಯರು ಶಾಲೆಯಲ್ಲಿ ಅನುಚಿತವಾಗಿ, ಸರಕಾರಿ ನೌಕರರಿಗೆ ತರವಲ್ಲದ ರೀತಿಯಲ್ಲಿ ವರ್ತಿಸುತ್ತಿರುವ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಿಸ್ತುಕ್ರಮ ಜರುಗಿಸಲು ಶಿಫಾರಸ್ಸು ಮಾಡಿರುವ ಹಿನ್ನಲೆಯಲ್ಲಿ ಅಮಾನತ್ತುಗೊಳಿಸಿದ್ದು, ಅದರಿ ಅವಧಿಯಲ್ಲಿ ಶಿಕ್ಷಕಿಗೆ ಕರ್ನಾಟಕ ನಾಗರಿಕ ಸೇವಾ ನಿಯಮ-೯೮ರಡಿ ಜೀವನಾಂಶ ಭತ್ಯೆ ಪಾವತಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಬಾಗಲಕೋಟೆ ; ಬಹು ದಿನಗಳ ಬೇಡಿಕೆಯಾಗಿದ್ದ ಪ್ರಸಾರ ಭಾರತೀಯ ಆಕಾಶವಾಣಿ ಎಫ್.ಎಂ ಕೇಂದ್ರವನ್ನು ಸಂಸದ ಪಿ.ಸಿ.ಗದ್ದಿಗೌಡ ಶುಕ್ರವಾರ ಚಾಲನೆ ನೀಡಿದರು. ಮದರಾಸನಿಂದ ವಿಡಿಯೋ ವಚ್ರ್ಯೂವಲ್ ಮೂಲಕ ಪ್ರಧಾನ ಮಂತ್ರಿಯವರು ಏಕ ಕಾಲದಲ್ಲಿ 4 ಎಫ್‍ಎಂ ಕೇಂದ್ರ ಹಾಗೂ 2 ಶಿಲಾನ್ಯಾಸ ಕಾರ್ಯಕ್ರಮಗಳಿಗೆ ಚಾಲನೆ ನೀಡುವ ಕಾರ್ಯಕ್ರಮವನ್ನು ವೀಕ್ಷಿಸಿ ನಂತರ ಬಾಗಲಕೋಟೆ ಆಕಾಶವಾಣಿ ಎಫ್.ಎಂ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಕಳೆದ 10 ವರ್ಷಗಳಿಂದ ಬೇಡಿಕೆಯಲ್ಲಿರುವ ಆಕಾಶವಾಣಿ ಎಫ್‍ಎಂ ಕೇಂದ್ರ ಪ್ರಾರಂಭಗೊಳ್ಳಬೇಕಿದ್ದು, ತಾಂತ್ರಿಕ ಕಾರಣಗಳಿಂದಾಗಿ ತಡೆಯಾಗಿದೆ. ಇಂದು ಆ ಕಾಲ ಕೂಡಿ ಬಂದಿದೆ ಎಂದರು. ಸದ್ಯ 15 ರಿಂದ 20 ಕಿ.ಮೀ ವ್ಯಾಪ್ತಿಯವರಗೆ ಎಫ್‍ಎಂ ರೇಡಿಯೋ ಕೇಳಲು ಅವಕಾಶವಿದ್ದು, ಇದರಲ್ಲಿ ಪ್ರಸಾರವಾಗುವ ಸರಕಾರದ ಯೋಜನೆಗಳನ್ನು ಹಾಗೂ ಕೃಷಿಕರಿಗೆ ಉಪಯುಕ್ತವಾದ ಮಾಹಿತಿ ವಿದ್ಯಾರ್ಥಿಗಳಲ್ಲಿ ವ್ಯಾಸಂಗಕ್ಕೆ ಅನುಕೂಲವಾಗುವ ಕಾರ್ಯಕ್ರಮ ಮಾಹಿತಿಯನ್ನು ಪಡೆಯಬಹುದಾಗಿದೆ. ಇದರ ಜೊತೆಗೆ ವಿವಿಧ ಸಾಂಸ್ಕøತಿ ಕಾರ್ಯಕ್ರಮಗಳು ಸಹ ಪ್ರಸಾರವಾಗಲಿದೆ. ಈ ಕೇಂದ್ರಕ್ಕೆ ಸದ್ಯ ಇಬ್ಬರು ಸಿಬ್ಬಂದಿಗಳನ್ನು ನೇಮಿಸಲಾಗಿದ್ದು, ಮುಂಬರುವ ದಿನಗಳಲ್ಲಿ ಸ್ಟುಡಿಯೋ…