Author: Sanje

ಬಾಗಲಕೋಟೆ : ವಿಶ್ವ ಕ್ಯಾನ್ಸರ್ ದಿನಾಚರಣೆ ಅಂಗವಾಗಿ ಆರೈಕೆಯ ಅಂತರವನ್ನು ಕಡಿತಗೊಳಿಸಿ ಎಂಬ ಘೋಷವಾಕ್ಯದೊಂದಿಗೆ ಹಮ್ಮಿಕೊಂಡ ಕ್ಯಾನ್ಸರ್ ಕುರಿತ ಅರಿವು ಮತ್ತು ಜಾಗೃತಿ ಜಾಥಾಕ್ಕೆ ಶಾಸಕ ಹಾಗೂ ಬಿಟಿಡಿಎ ಅಧ್ಯಕ್ಷ ಎಚ್.ವಾಯ್.ಮೇಟಿ ಸೋಮವಾರ ಚಾಲನೆ ನೀಡಿದರು. ಜಿಲ್ಲಾಡಳಿತ ಭವನದ ಮುಖ್ಯ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸಮೀಕ್ಷಣಾಧಿಕಾರಿಗಳ ಕಚೇರಿ, ಜಿಲ್ಲಾ ಎನ್.ಸಿ.ಡಿ ಕೋಶ, ತಾಲೂಕಾ ಆರೋಗ್ಯ ಅಧಿಕಾರಿಗಳ ಕಚೇರಿ ಸಹಯೋಗದಲ್ಲಿ ಹಮ್ಮಿಕೊಂಡ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಕ್ಯಾನ್ಸರ ಬಗ್ಗೆ ಜನರಲ್ಲಿ ಇರುವ ತಪ್ಪು ಮಾಹಿತಿ ಮತ್ತು ತಪ್ಪು ಗ್ರಹಿಕೆಯಿಂದ ದೂರ ಮಾಡಲು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು. ಜಾಗೃತಿ ಜಾಥಾ ಜಿಲ್ಲಾಡಳಿತ ಭವನದಿಂದ ಪ್ರಾರಂಭವಾಗಿ ನವನಗರದ ನಾನಾ ಕಡೆ ಸಂಚರಿಸಿ ಜಿಲ್ಲಾ ಆಸ್ಪತ್ರೆಗೆ ಮುಕ್ತಾಯಗೊಂಡಿತು. ಜಾಥಾದಲ್ಲಿ ಸರಕಾರಿ ಅರೇ ವೈದ್ಯಕೀಯ ಕಾಲೇಜ, ಜಿಲ್ಲಾ ಆಸ್ಪತ್ರೆ, ನಂದಿ ಇನ್‌ಸ್ಟಿಟ್ಯೂಟ್ ಆಪ್ ನರ್ಸಿಂಗ್ ಸೈನ್ಸ, ಡಾ.ಸುಭಾಷ ಪಾಟೀಲ ಇನ್‌ಸ್ಟಿಟ್ಯೂಟ್ ಆಪ್…

Read More

ಬಾಗಲಕೋಟೆ ; ಕೃಷ್ಣಾ ಮೇಲ್ದಂಡ ಯೋಜನೆಯಡಿಯಲ್ಲಿ ಮುಳುಗಡೆಯಾದ ಸಂತ್ರಸ್ಥರಿಗೆ ಮಾತ್ರ ನಿವೇಶನ ನೀಡಲಾಗುವುದೆಂದು ಶಾಸಕ ಎಚ್.ವಾಯ್.ಮೇಟಿ ಹೇಳಿದರು. ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರದ ಆವರಣದಲ್ಲಿ ಸೋಮವಾರ ಜಲ ಸಂಪನ್ಮೂಲ ಇಲಾಖೆ, ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತದ ವತಿಯಿಂದ ಹಮ್ಮಿಕೊಂಡ ಬಿಟಿಡಿಎ ನೂತನ ಸಭಾಪತಿಗಳ ಪದಗ್ರಹಣ ಸಮಾರಂಭದಲ್ಲಿ ಸಭಾಪತಿಯ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು ಬಾಗಲಕೋಟೆ ನಗರ ಆನೆಕಟ್ಟಿನ ಹಿನ್ನೀರಿನಿಂದ ಮುಳುಗಡೆಗೊಂಡ ದೇಶದಲ್ಲಿಯೇ ದೊಡ್ಡ ನಗರವಾಗಿದ್ದು, ಇಲ್ಲಿನ ಆಸ್ತಿ ಪಾಸ್ತಿ ಕಳೆದುಕೊಳ್ಳುವದರ ಜೊತೆಗೆ ವ್ಯಾಪಾರ ವ್ಯವಹಾರಕ್ಕು ಹಿನ್ನಡೆಯಾಗಿದೆ ಎಂದರು. ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರ ಬಾಗಲಕೋಟೆ ನಗರವನ್ನು ಪುನಶ್ಚೇತನಗೊಳಿಸಲು ಸನ್ನದ್ದವಾಗಿದೆ. ಈ ದೃಷ್ಠಿಯಿಂದ ಅಭಿವೃದ್ದಿಗೆ ಇನ್ನು ಭೂಮಿ ಬೇಕಾಗಿದ್ದು, ಮುಳುಗಡೆಗೂ ತ್ಯಾಗಮಯಿಗಳಾದ ಸಂತ್ರಸ್ಥರು ನಗರ ಅಭಿವೃದ್ದಿಗಾಗಿ ತಮ್ಮ ಜಮೀನುಗಳನ್ನು ತಂಟೆ ತಕರಾರು ಇಲ್ಲದೇ ನೀಡಿ ನಗರ ಬೆಳೆಯಲು ಸಹಕಾರ ನೀಡಬೇಕು. ಸಂತ್ರಸ್ಥರು ನಿವೇಶನ ಪಡೆದುಕೊಳ್ಳುವಲ್ಲಿ, ಸಂತ್ರಸ್ಥರಲ್ಲದವರು ಕೆಲವು ಏಜೆಂಟರುಗಳ ಮೂಲಕ ಕೊಟ್ಟಿ ದಾಖಲೆ ಸೃಷ್ಠಿ ಮಾಡಿ ನಿವೇಶನ ಪಡೆಯಲು ಪ್ರಯತ್ನಿಸಿದರೆ ನಿರ್ಧಾಕ್ಷಣ್ಯವಾಗಿ…

Read More

ಬಾಗಲಕೋಟೆ ; ಹಳೇ ಬಾಗಲಕೋಟೆ ಶಿರೂರು ಆಸ್ಪತ್ರೆ ಹತ್ತಿರ ವಿರುವ ಚೀಟ್ ಚಾಟ್ ಪೋಟೋ ಸ್ಟೂಡಿಯೋದಲ್ಲಿ ಲಕ್ಷಾಂತರ ಮೌಲ್ಯದ ಕ್ಯಾಮರಾಗಳನ್ನು ರಾತ್ರಿ ಕಳ್ಳತನ ಮಾಡಲಾಗಿದೆ. ಶನಿವಾರ ರಾತ್ರಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದು ಚೀಟ್ ಚಾಟ್ ಅಂಗಡಿಯಲ್ಲಿಟ್ಟಿದ್ದ ನಿಕಾನ್ ಕಂಪನಿಯ 7200 ಹಾಗೂ ಡಿ 90 ಕ್ಯಾಮರಾಗಳನ್ನು ದೋಚಿರುವ ಕಳ್ಳರು ಅಂಗಡಿಯಲ್ಲಿ ಬೇರೆ ಯಾವುದೆ ವಸ್ತುಗಳನ್ನು ಮುಟ್ಟಿಲ್ಲ ಅಂದಾಜು 3ಲಕ್ಷ ರು.ಗಳ ಮೌಲ್ಯದ ಕ್ಯಾಮರಾ ಎಂದು ಹೇಳಲಾಗಿದೆ. ಕಳ್ಳತನ ಪ್ರಕರಣ ಸುಳಿವು ತಿಳಿದ ನಗರ ಸಿಪಿಐ ಗುರುನಾಥ ಚವ್ಹಾನ ಸಿಬ್ಬಂದಿಯೊಂದಿಗೆ ಬೇಟಿ ನೀಡಿ ಪರಿಶೀಲನೆ ನೆಡಸಿದರು ನಂತರ ಶ್ವಾನದಳ ಹಾಗೂ ಬೆರಳುಚ್ಚಗಾರ ತಜ್ಞರ ತಂಡ ಆಗಮಿಸಿ ತನಿಕೆ ಕೈಗೊಂಡಿದೆ. ಸ್ಟೂಡಿಯೋದಲ್ಲಿ ಕ್ಯಾಮರಾ ಇಡಬೇಡಿ. ಛಾಯಾಗ್ರಾಹಕ ಮಿತ್ರರು ತಮ್ಮ ಬೆಲೆಬಾಳುವ ಕ್ಯಾಮರಾ ಗಳನ್ನು ರಾತ್ರಿ ಮನೆಗೆ ಹೋಗುವಾಗ ಅಂಗಡಿಯಲ್ಲಿ ಇಡಬೇಡಿ ಅವುಗಳನ್ನು ಮನೆಗೆ ತಗೆದುಕೊಂಡು ಹೋಗಿ ಎಂದು ಛಾಯಾಗ್ರಾಹಕ ಸಂಘದ ತಾಲೂಕಾಧ್ಯಕ್ಷ ಚಂದ್ರು ಅಂಬಿಗೇರ ಛಾಯಾಗ್ರಾಹಕರಲ್ಲಿ ಮನವಿ ಮಾಡಿದ್ದಾರೆ. ಸ್ಟೂಡಿಯೋ ನಂಬಿಕೊಂಡು ಜೀವನ…

Read More

ದಾವಣಗೆರೆ ; ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 39ನೇ ರಾಜ್ಯ ಸಮ್ಮೇಳನ ಕಲ್ಪತರು ನಾಡು ತುಮಕೂರು ಜಿಲ್ಲೆಯ ನಡೆಸಲು ನಿರ್ಧರಿಸಲಾಗಿದೆ. ದಾವಣಗೆರೆಯಲ್ಲಿ ನಡೆದಿರುವ 38ನೇ ರಾಜ್ಯ ಸಮ್ಮೇಳನದಲ್ಲಿ ಇಂದು ಈ ತೀರ್ಮಾನ ಕೈಗೊಳ್ಳಲಾಗಿದೆ. ತುಮಕೂರು ಅಲ್ಲದೇ ರಾಯಚೂರು ಹಾಗೂ ಶಿವಮೊಗ್ಗ ಜಿಲ್ಲೆಗಳಿಂದ ಬೇಡಿಕೆ ಬಂದಿತ್ತಾದರೂ ಸಭೆಯಲ್ಲಿ 39ನೇ ಸಮ್ಮೇಳನ ತುಮಕೂರಿನಲ್ಲಿ ನಡೆಸಲು ತೀರ್ಮಾನಿಸಲಾಯಿತು. 40ನೇ ರಾಜ್ಯ ಸಮ್ಮೇಳನವನ್ನು ರಾಯಚೂರು ಜಿಲ್ಲೆಯಲ್ಲಿ ನಡೆಸುವುದಾಗಿ ಕಾನಿಪ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಪ್ರಕಟಿಸಿದರು.

Read More

ದಾವಣಗೆರೆ ; ಮೌಡ್ಯ, ಕಂದಾಚಾರ, ಕರ್ಮಸಿದ್ಧಾಂತವನ್ನು ಪತ್ರಕರ್ತರು ತಿರಸ್ಕರಿಸಿ ಜನರಿಗೆ ಸತ್ಯ ಹೇಳುವ ಧೈರ್ಯ ಬೆಳೆಸಿಕೊಳ್ಳಿ ಎಂದುಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು. ದಾವಣಗೆರೆಯಲ್ಲಿ 38 ನೇ ರಾಜ್ಯ ಪತ್ರಕರ್ತರ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು. ಪತ್ರಕರ್ತರಿಗೆ ರಾಜಕೀಯ ಬೇಕಾಗಿಲ್ಲ. ವಸ್ತುನಿಷ್ಠವಾಗಿ ಇರಬೇಕು. ನಾಡಿನ ಬಡವರು ಮತ್ತು ಮಧ್ಯಮ ವರ್ಗದವರ ಆರ್ಥಿಕ ಶಕ್ತಿ ಹೆಚ್ಚಿಸುವ ಗ್ಯಾರಂಟಿ ಯೋಜನೆಗಳನ್ನು ಪತ್ರಕರ್ತರು ಬಿಟ್ಟಿ ಗ್ಯಾರಂಟಿ ಎಂದು ಕರೆಯಬಾರದು. ಪಕ್ಷಾತೀತವಾಗಿ, ಜಾತ್ಯತೀತವಾಗಿ, ಧರ್ಮಾತೀತವಾಗಿ ಇರುವ ಈ ಯೋಜನೆಯನ್ನು ಬಿಟ್ಟಿ ಗ್ಯಾರಂಟಿ ಎಂದು ಕರೆಯದೆ, ನೀವೇ ಪರಿಶೀಲಿಸಿ ಬರೆಯಿರಿ. ಏನನ್ನಾದರೂ ಪ್ರಕಟಿಸುವ ಮೊದಲು ಪರಿಶೀಲನೆ ನಡೆಸಿ ಎಂದು ಸಲಹೆ ನೀಡಿದರು. ಪಟ್ಟಭದ್ರರನ್ನು ಗುರುತಿಸಿ ಮಟ್ಟ ಹಾಕುವ ನಿಷ್ಠುರತೆಯನ್ನು ಪತ್ರಕರ್ತರು ಬೆಳೆಸಿಕೊಳ್ಳಬೇಕು. ಗಂಡ-ಹೆಂಡತಿ ಜಗಳವನ್ನು ಇಡೀ ದಿನ ತೋರಿಸುವುದಕ್ಕಿಂತ, ಸಮಾಜದ ಬೆಳೆವಣಿಗೆಗೆ ಅಡ್ಡಿ ಆಗಿರುವ ಪಟ್ಟ ಭದ್ರರನ್ನು ಗುರುತಿಸಿ ಬರೆಯಿರಿ. ಇದರಿಂದ ಸಮಾಜಮುಖಿ ಪತ್ರಕೋದ್ಯಮ ಸಾಧ್ಯ ಎಂದರು. ಹಣವಂತರು, ಅತೀ ಶ್ರೀಮಂತರ ಕೈಯಲ್ಲಿ ಪತ್ರಿಕೋದ್ಯಮ ಸಿಲುಕಿದೆ. ಹೀಗಾಗಿ ಶ್ರೀಮಂತರ ಹಿತಾಸಕ್ತಿ ಕಾಯುವ…

Read More

ಬಾಗಲಕೋಟೆ: ಜಿಲ್ಲೆಯ ಜಮಖಂಡಿ ತಾಲೂಕಿನ ಆಲಗೂರ ಗ್ರಾಮದ ಬಳಿ ಭೀಕರ ರಸ್ತೆ ಅಪಘಾತದಿಂದ ನಾಲ್ವರು ಶಾಲಾ ಮಕ್ಕಳು ಮೃತಪಟ್ಟಿರುವ ಘಟನೆ ಮನ ಕಲಕುವಂತೆ ಮಾಡಿದ್ದು, ಇಂತಹ ಘಟನೆ ಮರುಕಳುಹಿಸದಂತೆ ಕಟ್ಟುನಿಟ್ಟಿನ ಕ್ರಮವಹಿಸಲು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಅಪಘಾತ ಸಂಭವಿಸಿದ ಸ್ಥಳಕ್ಕೆ ಈಗಾಗಲೇ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಿರಿ ಆದರೆ, ಅಪಘಾತವಾಗಲು ಏನು ಕಾರಣ. ರಸ್ತೆ ನಿರ್ಮಾಣದಲ್ಲಿ ಲೋಪವೇನಾದರೂ ಇದೇ ಎಂದು ಪ್ರಶ್ನಿಸಿದರು. ಅಲ್ಲದೇ ಡಿಸೆಂಬರ ತಿಂಗಳಲ್ಲಿ ಹೆಚ್ಚಾಗಿ ಅಪಘಾತಗಳು ಸಂಭವಿಸಿದ್ದು, ಪ್ರಾಣಹಾನಿ ಕೂಡಾ ಸಂಭವಿಸಿವೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಸಮೀಕ್ಷೆ ಮಾಡಿರುವ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿದರು. ಇತ್ತೀಚಿಗೆ ಸಂಭವಿಸಿದ ರಸ್ತೆ ಅಪಘಾತ ಸ್ಥಳಗಳಿಗೆ ೨೪ ಗಂಟೆಯೊಳಗಾಗಿ ಸಮೀಕ್ಷೆ ಕೈಗೊಲ್ಲದೇ ಇರುವ ಬಗ್ಗೆ ಪೊಲೀಸ್ ಇಲಾಖೆ ತಿಳಿಸಿದ್ದು, ಕಡ್ಡಾಯವಾಗಿ ಪೊಲೀಸ್, ಪ್ರಾದೇಶಿಕ ಸಾರಿಗೆ ಹಾಗೂ ಲೋಕೋಪಯೋಗಿ ಇಲಾಖೆಯೊಂದಿಗೆ ಜಂಟಿ ಸಮೀಕ್ಷೆ…

Read More

ಬಾಗಲಕೋಟೆ: ಜಿಲ್ಲೆಯಲ್ಲಿ ಗ್ರಾಮೀಣ ಭಾಗದ ಆಸ್ತಿಗಳ ತೆರಿಗೆ ಸಂಗ್ರಹಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋ ಜನೆ ಅನುಷ್ಠಾನದಲ್ಲಿ ಬಾಗಲಕೋಟೆ ಜಿಲ್ಲೆ ರಾಜ್ಯದಲ್ಲಿ ೮ ನೇ ಸ್ಥಾನದಲ್ಲಿ ಇದೆ ಎಂದು ಜಿಲ್ಲಾ ಪಂಚಾಯತ ಸಿಇಓ ಶಶಿಧರ ಕುರೇರ ತಿಳಿಸಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯ ದಲ್ಲಿ ಹಮ್ಮಿಕೊಂಡ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ೨೦೨೩-೨೪ರಲ್ಲಿ ಜಿಲ್ಲೆಗೆ ೫೦ ಲಕ್ಷ ಮಾನವ ದಿನಗಳನ್ನು ಸೃಜಿಸಲು ಗುರಿ ನೀಡಲಾಗಿದ್ದು ಜನವರಿ ಅಂತ್ಯದವರೆಗೆ ೪೯.೨೯ ಲಕ್ಷ ಮಾನವದಿನ ಸೃ ಜನೆ ಮಾಡಿ ಶೇ. ೯೮.೫೮ ರಷ್ಟು ಪ್ರಗತಿ ಸಾಧಿಸಲಾಗಿದ್ದು, ರಾಜ್ಯ ದಲ್ಲಿ ಬಾಗಲಕೋಟೆ ಜಿಲ್ಲೆಯು ೮ನೇ ಸ್ಥಾನದಲ್ಲಿ ರುತ್ತದೆ. ಅಲ್ಲದೇ ರೂ.೨೪೨.೬೩ ಕೋಟಿ ಅನುದಾನ ಖರ್ಚು ಭರಿಸಲಾಗಿದೆ ಎಂದು ಹೇಳಿದರು. ವಯಕ್ತಿಕ ಕಾಮಗಾರಿ ಅಡಿ ಜಿಲ್ಲೆಯಲ್ಲಿ ೨೦೦೫ ಬದು ನಿರ್ಮಾಣ, ೪೪೩ ಕೃಷಿ ಹೊಂ ಡ,…

Read More

ಬಾಗಲಕೋಟೆ ; ಪಾರದರ್ಶಕ ಆಡಳಿತ, ಜನಸಾಮಾನ್ಯರಿಗೆ ಹತ್ತಿರವಾಗಿ ಕೆಲಸ ಮಾಡುವ ಹಾಗೂ ಉತ್ತಮ ಕೆಲಸ ಮಾಡುವವರಿಗೆ ಲೋಕಾಯುಕ್ತ ಇಲಾಖೆ ಬೆನ್ನೆಲುಬಾಗಿ ನಿಲ್ಲಲಿದೆ ಎಂದು ಕರ್ನಾಟಕ ಲೋಕಾಯುಕ್ತ ಬಿ.ಎಸ್.ಪಾಟೀಲ ತಿಳಿಸಿದರು. ಜಮಖಂಡಿ ತಹಶೀಲ್ದಾರ ಕಚೇರಿಯ ಸಭಾಭವನದಲ್ಲಿ ಸೋಮವಾರ ಜರುಗಿದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಒಳ್ಳೆಯ ಕೆಲಸ ಮಾಡುವವರಿಗೆ ಲೋಕಾಯುಕ್ತ ಬೆನ್ನೆಲುಬಾಗಿ ಕೆಲಸ ಮಾಡಲಿದ್ದು, ತಪ್ಪು ಮಾಡುವವರಿಗೆ ಶಿಕ್ಷೆ ಕೂಡಾ ವಿಧಿಸಲಾಗುತ್ತದೆ. ಅಡಕೆ ಕದ್ದವರಿಗೆ ಹಾಗೂ ಆನೆ ಕದ್ದವರಿಗೆ ಅಂದರೆ ಅವರವರ ತಪ್ಪುಗಳಿಗೆ ತಕ್ಕಂತೆ ಶಿಕ್ಷೆ ನೀಡಲಾಗುತ್ತದೆ ಎಂಬ ಕಟ್ಟುನಿಟ್ಟಿನ ಸಂದೇಶ ಸಹ ನೀಡಿದರು. ಕಂದಾಯ ಇಲಾಖೆಯ ಸೇವೆಗಳು ತ್ವರಿತಗತಿಯಲ್ಲಿ ಆಗಬೇಕು. ಹೆಚ್ಚಿನ ಜನರಿಗೆ ಸೇವೆ ಒದಗಿಸಲು ಮುಂದಾಗಬೇಕು. ಬರ ಹಾಗೂ ಅತಿವೃಷ್ಟಿ ಸಂದರ್ಭದಲ್ಲಿ ಮನೆ ಬಿದ್ದವರಿಗೆ ಎ, ಬಿ ಮತ್ತು ಸಿ ವರ್ಗಗಳಲ್ಲಿ ಪರಿಹಾರ ಪಡೆಯುವಲ್ಲಿ ತಪ್ಪು ಮಾಹಿತಿ ನೀಡಿದ್ದರೆ ಅಂತವರ ಮೇಲೆ ಇಲಾಖೆ ಸೂಕ್ತ ಕ್ರಮಜರುಗಿಸಲು ತಿಳಿಸಿದ ಲೋಕಾಯುಕ್ತರು ಕಂದಾಯ ಇಲಾಖೆಯ ಸಕಾಲ…

Read More

ಬಾಗಲಕೋಟೆ ; ಕಳೆದು ನಾಲ್ಕೆದು ದಿನಗಳಿಂದ ತಾಲೂಕಿನ ಶಿರೂರ ಪಟ್ಟಣದ ಜನರ ನಿದ್ದೆಗೆಡಸಿ ೧೦ಕ್ಕೂ ಹೆಚ್ಚು ಜನರ ಮೇಲೆ ದಾಳಿಮಾಡಿ ಗಾಯಗೊಳಿಸಿದ ಮಂಗನನ್ನು ಸೋಮವಾರ ಅರಣ್ಯ ಸಿಬ್ಬಂದಿ ಸೆರೆ ಹಿಡಿದರು. ಇದರಿಂದ ಸಾರ್ವಜನಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಕಳೆದು ಹತ್ತುದಿನಗಳ ಹಿಂದೆ ಈ ಮಂಗನಿಗೆ ಗಾಯಗೊಳಿಸಿದ್ದ ರಿಂದ ಈ ತರನಾದ ವರ್ತನೆ ಮಾಡುತ್ತಿದ್ದು ಮೂರುದಿನಗಳಿಂದ ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಪಟ್ಟಣ ಪಂಚಾಯತಿಯ ಸಿಬ್ಬಂದಿಗಳು ಸೇರಿ ಮಂಗನ ಹಿಡಿಯುವ ಬಲೆಯೊಂದಿಗೆ ಮಿಣಚಮಡ್ಡಿ, ನೇಕಾರ ಕಾಲೋನಿ, ಇಂದ್ರಾನಗರ, ಗೌಡರಓಣಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಕಾರ್ಯಚರಣೆ ನಡೆಸಿದರು. ಸೋಮವಾರ ಬೆಳಗ್ಗೆ ಮಿಣಚಮಡ್ಡಿಯ ಹತ್ತಿರ ಬಲಿಯ ಸಹಾಯದೊಂದಿಗೆ ಮಂಗನನ್ನು ಸೆರೆ ಹಿಡಿಯಲಾಯಿತು. ಮಂಗನ ದಾಳಿಯಿಂದ ಗಾಯಗೊಂಡವರು ಸ್ಥಳೀಯ ಹಾಗೂ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖ ರಾಗುತ್ತಿದ್ದಾರೆ. ಈ ಮಂಗನ ಹಾವಳಿಯಿಂದ ಜನರು ಹೊರ ಬಂದರೆ ಭಯಗೊಂಡು ಬಡಿಗೆ, ಕೋಲುಗಳನ್ನು ಹಿಡಿದು ಸಂಚರಿಸುವಂತಾಗಿತ್ತು. ಸೆರೆ ಹಿಡಿದ ಮಂಗನನ್ನು ಹೊಸಪೇಟೆಯ ಹತ್ತಿರ ಜನವಸತಿ ಇಲ್ಲದ ಅರಣ್ಯ ಪ್ರದೇಶದಲ್ಲಿ…

Read More

ಬಾಗಲಕೋಟೆ ; ಶಾಲಾ ವಾಹನ ಅಪಘಾತಕ್ಕೀಡಾಗಿ ಕವಟಗಿ ಗ್ರಾಮದ ೪ ಜನ ವಿದ್ಯಾರ್ಥಿಗಳು ಮೃತಪಟ್ಟಿದ್ದು, ಮೃತರ ಕುಟುಂಬಸ್ಥರ ಮನೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಸೋಮವಾರ ಭೇಟಿ ನೀಡಿ ಸಾಂತ್ವನ ಹೇಳಿ, ದೌರ್ಯ ತುಂಬುವ ಕೆಲಸ ಮಾಡಿದರು. ಜಮಖಂಡಿ ತಾಲೂಕಿನ ಆಲಗೂರ ಸಮೀಪ ಸಂಭವಿಸಿದ ಭೀಕರ ರಸ್ತೆ ಅಪಘಾತ ಸಂಭವಿಸಿ ೪ ಜನ ವಿದ್ಯಾರ್ಥಿಗಳು ಸಾವನ್ನಪ್ಪಿರುವುದು ಮನಸ್ಸಿಗೆ ತೀವ್ರ ಆಘಾತ ತಂದಿದೆ. ಅಪಘಾತದಲ್ಲಿ ಮೃತಪಟ್ಟ ವಿದ್ಯಾರ್ಥಿಗಳ ಆತ್ಮಕ್ಕೆ ಭಗವಂತ ಶಾಂತಿ ನೀಡಲೇಂದು ಪ್ರಾರ್ಥಿಸುವುದಾಗಿ ತಿಳಿಸಿದ ಅವರು ಜಮಖಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಸಹ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಮೃತಪಟ್ಟ ವಿದ್ಯಾರ್ಥಿಗಳ ಕುಟುಂಬಕ್ಕೆ ತಲಾ ೨ ಲಕ್ಷ ರೂ. ಹಾಗೂ ಗಂಭೀರವಾಗಿ ಗಾಯಗೊಂಡಿರುವ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ತಲಾ ೫೦ ಸಾವಿರ ರೂ.ಗಳ ಪರಿಹಾರ ನೀಡಲಾಗುವುದೆಂದು ತಿಳಿಸಿದರು. ಭೇಟಿ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಸೇರಿದಂತೆ ಇತರೇ ಅಧಿಕಾರಿಗಳು ಇದ್ದರು.

Read More