ಬಾಗಲಕೋಟೆ: ಭಾರತೀಯ ವಾಯುಪಡೆಯು ಭಾರತದ/ಗೂರ್ಖಾ (ನೇಪಾಳ) ಪುರುಷ ಅಭ್ಯರ್ಥಿಗಳನ್ನು ಭಾರತೀಯ ವಾಯುಪಡೆಗೆ ಏರ್‌ಮನ್ ಆಗಿ ಗ್ರೂಪ್ ವಾಯ್ (ತಾಂತ್ರಿಕವಲ್ಲದ) ವೈದ್ಯಕೀಯ ಸಹಾಯಕ ವೃತ್ತಿಯ ನೇಮಕಾತಿಗಾಗಿ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ವೈದ್ಯಕೀಯ ಸಹಾಯಕ ವೃತ್ತಿ ನೇಮಕಾತಿಗಾಗಿ ಅಭ್ಯರ್ಥಿಗಳು (10+2 ಹೊಂದಿರುವ ಅಭ್ಯರ್ಥಿಗಳಿಗೆ) ಅವಿವಾಹಿತರಾಗಿರಬೇಕು ಮತ್ತು ಜುಲೈ 2, 2005 ಮತ್ತು ಜುಲೈ 2, 2009ರ ನಡುವೆ ಜನಿಸಿರಬೇಕು. ಹಾಗೂ ಫಾರ್ಮಸಿಯಲ್ಲಿ ಡಿಪ್ಲೋಮಾ, ಬಿ.ಎಸ್ಸಿ ಹೊಂದಿದ ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ ಅವಿವಾಹಿತ ಅಭ್ಯರ್ಥಿಯು ಜುಲೈ 2, 2002 ಮತ್ತು ಜುಲೈ 2, 2007ರ ನಡುವೆ ಹಾಗೂ ವಿವಾಹಿತ ಅಭ್ಯರ್ಥಿಯು ಜುಲೈ 2, 2002 ಮತ್ತು ಜುಲೈ 2, 2005ರ ನಡುವೆ ಜನಿಸಿರಬೇಕು. ಆಸಕ್ತ ಅಭ್ಯರ್ಥಿಗಳು ಜುಲೈ 31 ರೊಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. https://airmenselection.cdac.in ವೆಬ್‌ಸೈಟ್‌ನಲ್ಲಿ ಹೆಚ್ಚಿನ ಮಾಹಿತಿ ಪಡೆಯಬಹುದು ಎಂದು ಜಿಲ್ಲಾ ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Author: Sanje
ಬಾಗಲಕೋಟೆ: ಶಾಲಾ ಮಕ್ಕಳಿಗಾಗಿ ಸರಕಾರ ನೀಡುವ ಮಧ್ಯಾಹ್ನದ ಬಿಸಿ ಊಟದ ಆಹಾರಧಾನ್ಯಗಳು ಕಳ್ಳಸಂತೆಯಲ್ಲಿ ಮಾರಾಟವಾದಲ್ಲಿ ಶಿಸ್ತುಕ್ರಮಕೈಗೊಳ್ಳಲಾಗುವುದೆಂದು ಅಬಕಾರಿ ಹಾಗು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾ ಪಂಚಾಯತ ನೂತನ ಸಭಾಭವನದಲ್ಲಿ ಶನಿವಾರ ಜಿಲ್ಲಾ ಪಂಚಾಯತಿಯ ಪ್ರಥಮ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಕೊಡಲಾಗುತ್ತಿದೆ. ಶಿಕ್ಷಕರಿಗೆ ಮಕ್ಕಳ ಸಂಖ್ಯೆ ಹೆಚ್ಚಿಸುವ ಕುರಿತು ತಿಳಿಸಬೇಕು. ಜೊತೆಗೆ ಗುಣಮಟ್ಟದ ಆಹಾರ ಕೊಡುವ ಅವಶ್ಯವಾಗಿದ್ದು, ಮಕ್ಕಳಿಗೆ ಕೊಡುವ ಆಹಾರ ಕಳ್ಳಸಂತೆ ಮಾರಾಟವಾಗದಂತೆ ಕ್ರಮವಹಿಸಲು ಸೂಚಿಸಿದರು. ಜಿಲ್ಲೆಯಲ್ಲಿ ಕೇವಲ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದವರಿಗೆ ಸನ್ಮಾನ ಮಾಡುವದರ ಜೊತೆಗೆ ಪಿಯುಸಿ, ಡಿಗ್ರಿ ಹಾಗೂ ಉನ್ನತ ಶಿಕ್ಷಣದಲ್ಲಿ ಹೆಚ್ಚು ಅಂಕ ಪಡೆದು ಜಿಲ್ಲೆಗೆ ಕೀರ್ತಿ ತಂದAತಹ ವಿದ್ಯಾರ್ಥಿಗಳನ್ನು ಸತ್ಕರಿಸಲು ಸಚಿವರು ತಿಳಿಸಿದರು. ಸರಕಾರಿ ಶಾಲೆ ಹಾಗೂ ಕಾಲೇಜುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ದಾಖಲಾಗುತ್ತಿರುವುದು ಸಂತೋಷ ವಿಷಯವಾಗಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ವಾರದಲ್ಲಿ ಒಂದು ಬಾರಿಯಾದರೂ ತಮ್ಮ…
ಬೆನಕಟ್ಟಿ: ಗ್ರಾಮದಲ್ಲಿ ನಾಳೆ ದಿ. 20 ರಂದು ಹೇಮ – ವೇಮನ ಸದ್ಬೋಧನ ಪೀಠದ ವಾರ್ಷಿಕೋತ್ಸವ, ವಿದ್ಯಾರ್ಥಿಗಳ ದತ್ತು ಸ್ವೀಕಾರ, ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮ ಜರುಗಲಿದೆ. ಗ್ರಾಮದ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದ ಆವರಣದಲ್ಲಿ ಭಾನುವಾರ ಮುಂಜಾನೆ 10.30 ಗಂಟೆಗೆ ಎರೆಹೊಸಳ್ಳಿಯ ರಡ್ಡಿ ಗುರುಪೀಠದ ಪೂಜ್ಯ ವೇಮನಾನಂದ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ನಡೆಯುವ ಸಮಾರಂಭದ ನೇತೃತ್ವವನ್ನು ಆಧ್ಯಾತ್ಮಿಕ ಚಿಂತಕ ಪ್ರದೀಪ ಗುರೂಜಿ ವಹಿಸುವರು. ಹಿರಿಯ ವಕೀಲ ಎಸ್.ಕೆ.ಯಡಹಳ್ಳಿ ಅಧ್ಯಕ್ಷತೆ ವಹಿಸಲಿದ್ದು, ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ 1 ನೇ ಬೆಟಾಲಿಯನ್ ಕಮಾಂಡೆಂಟ್ ಅಮರನಾಥ ರೆಡ್ಡಿ ಕಾರ್ಯಕ್ರಮ ಉದ್ಘಾಟಿಸುವರು. ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಉಪ ಆಯುಕ್ತ ಜಿ.ಬಿ.ಗೌಡಪ್ಪಗೋಳ ಮುಖ್ಯ ಅತಿಥಿಯಾಗಿ, ಧಾರವಾಡ ಕರ್ನಾಟಕ ವಿಶ್ವ ವಿದ್ಯಾಲಯದ ಮಹಾಯೋಗಿ ವೇಮನ ಪೀಠದ ಸಂಚಾಲಕ ಹೇಮರಡ್ಡಿ ನೀಲಗುಂದ ಹಾಗೂ ಸ್ಥಳೀಯ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನ ಸಮಿತಿ ಅಧ್ಯಕ್ಷ ಪಂಡಿತ ಮಾಚಾ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸದ್ಬೋಧನ ಪೀಠದ ಪ್ರಕಟಣೆ ತಿಳಿಸಿದೆ.
ಬಾಗಲಕೋಟೆ: ರೋಗಿ ಕರೆತಂದ ಬಾಡಿಗೆ ಚಾಲಕ ಹೃದಯಾಘಾತಕ್ಕೆ ಬಲಿಯಾದ ಘಟನೆ ಶನಿವಾರ ಮಧ್ಯಾಹ್ನ ನಗರದಲ್ಲಿ ನಡೆದಿದೆ. ಬೀಳಗಿ ತಾಲೂಕಿನ ಬಿಸನಾಳ ಗ್ರಾಮದ ನಿವಾಸಿ ಬೇರೊಂದು ಖಾಸಗಿ ಆಸ್ಪತ್ರೆಗೆ ರೋಗಿಯನ್ನು ಕರೆ ತಂದಿದ್ದ ಮೃತ ವ್ಯಕ್ತಿಯಾಗಿದ್ದು, ತನಗೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೆರೂಡಿ ಆಸ್ಪತ್ರೆಗೆ ಸ್ವತ ಕಾರು ಚಲಾಯಿಸಿಕೊಂಡು ಬಂದ ಶುಕ್ರರಾಜ್ ಸಂಕನ್ನವರ್ (45) ಆಸ್ಪತ್ರೆಯ ಒಳಗೆ ಹೋಗುತ್ತಿದ್ದಂತೆ ಹೃದಯಾಘಾತಕ್ಕೆ ಬಲಿಯಾಗಿದ್ದಾನೆ ಎಂದು ವರದಿಯಾಗಿದೆ.
ಬಾದಾಮಿ: ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘ (ರಿ)ದ ತಾಲೂಕಾ ಘಟಕದ ವತಿಯಿಂದ ಜು. 27 ರಂದು ರವಿವಾರ ಬೆಳಿಗ್ಗೆ 10.30 ಗಂಟೆಗೆ ಎಸ್.ವ್ಹಿ.ಪಿ.ಸಂಸ್ಥೆಯ ಬಸವಭವನದಲ್ಲಿ ಬಣಜಿಗ ಸಮಾಜದ ತಾಲೂಕಾ ಸಮಾವೇಶ ಹಾಗೂ ನಗರ ಘಟಕ ಉದ್ಘಾಟನಾ ಸಮಾರಂಭ ಪ್ರತಿಭಾ ಪುರಸ್ಕಾರ ಹಾಗೂ ಗಣ್ಯರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಣಜಗ ಸಮಾಜದ ತಾಲೂಕಾ ಅಧ್ಯಕ್ಷ ಡಾ.ಅವಿನಾಶ ಮಮದಾಪೂರ ತಿಳಿಸಿದರು. ಅವರು ಶನಿವಾರ ನಗರದ ಶ್ರೀ ವೀರಪುಲಿಕೇಶಿ ಸಂಸ್ಥೆಯ ಆಡಳಿತ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದರು. ಶ್ರೀ ಮ.ನಿ.ಪ್ರ. ಶಂಕರಾರೂಢ ಸ್ವಾಮಿಗಳು ಹಾಗೂ ಶ್ರೀ ರಾಮಾರೂಢ ಮಠ, ಶಿರೋಳ ಇವರು ಸಾನಿಧ್ಯ ವಹಿಸುವರು. ತಾಲೂಕಾ ಬಣಜಿಗ ಸಮಾಜದ ಅಧ್ಯಕ್ಷ ಡಾ. ಅವಿನಾಶ ಜೆ. ಮಮದಾಪೂರ ಅಧ್ಯಕ್ಷತೆ ವಹಿಸುವರು. ವೀರಪು ಲಿಕೇಶಿ ಸಂಸ್ಥೆಯ ಚೇರಮನ್ ಎ.ಸಿ. ಪಟ್ಟಣದ ಉದ್ಘಾಟಿಸುವರು. ಬಾದಾಮಿ ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ, ಸಂಸ್ಥೆಯ ನಿರ್ದೇಶಕ ಜಯದೇವ ಎಸ್. ಮಮದಾಪೂರ, ಪಿಕಾರ್ಡ ಬ್ಯಾಂಕ್ ಅಧ್ಯಕ್ಷ ಮಹಾಂತೇಶ ಜಿ.…
ಬಾಗಲಕೋಟೆ: ಸಂತಾನಹರಣ ಶಸ್ತ್ರ ಚಿಕಿತ್ಸೆಯಲ್ಲಿ ಮಹಿಳೆ, ಪುರುಷ ಎನ್ನುವ ತಾರತಮ್ಯ ಏಕೆ ಎಂದು ಮೇಲ್ಮನೆ ಸದಸ್ಯರಾದ ಉಮಾಶ್ರೀ ಪ್ರಶ್ನಿಸಿದ ಪ್ರಸಂಗ ನಡೆಯಿತು. ಜಿಲ್ಲಾ ಪಂಚಾಯಿತಿ ನೂತನ ಸಭಾಭವನದಲ್ಲಿ ಶನಿವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನೆ ವೇಳೆ ಸಂತಾನಹರಣ ಚಿಕಿತ್ಸೆ ವೇಳೆ ಅಧಿಕಾರಿಗಳು ನೀಡಿದ ವಿವರಣೆಯಲ್ಲಿನ ಅಂಕಿ ಅಂಶಗಳನ್ನು ಗಮನಿಸಿದ ಅವರು, ಸಂತಾನಹರಣ ಚಿಕಿತ್ಸೆಯಲ್ಲಿ ಇಷ್ಟೊಂದು ವ್ಯತ್ಯಾಸ ಏಕೆ ಎಂದು ಪ್ರಶ್ನಿಸುವ ಜತೆಗೆ ಅಚ್ಚರಿ ವ್ಯಕ್ತಪಡಿಸಿದರು. ಅಧಿಕಾರಿಗಳು ನೀಡಿದ ಮಾಹಿತಿಯಲ್ಲಿ ೫೦೦೦ ಕ್ಕೂ ಅಧಿಕ ಮಹಿಳೆಯರ ಸಂತಾನಹರಣ ಚಿಕಿತ್ಸೆ ನಡೆದಿದ್ದರೆ, ಕೇವಲ ೫೦ ಜನ ಪುರುಷರ ಸಂತಾನಹರಣ ಚಿಕಿತ್ಸೆ ನಡೆದಿರುವ ಅಂಶ ಬೆಳಕಿಗೆ ಬಂದಿತು. ಸಂತಾನಹರಣ ಚಿಕಿತ್ಸೆಗೆ ಗುರಿ ಏನಾದರೂ ನಿಗದಿ ಪಡಿಸಲಾಗಿದೆಯೆ ಎಂದು ಉಮಾಶ್ರೀ ಮರು ಪ್ರಶ್ನಿಸಿದಾಗ ಹಾಗೇನೂ ಇಲ್ಲ ಎನ್ನುವ ಉತ್ತರ ಬಂದಿತು. ಸಂತಾನಹರಣ ಚಿಕತ್ಸೆಯಲ್ಲಿ ಇಷ್ಟೊಂದು ತಾರತಮ್ಯವೇ ಎಂದು ಉದ್ಗಾರ ತೆಗೆದ ಅವರು ಇದರಲ್ಲೂ ಮಹಿಳೆ ಮತ್ತು ಪುರುಷರಲ್ಲಿ ಸಮಾನತೆ ಬರಬೇಕು. ಎಲ್ಲವೂ…
ಬಾಗಲಕೋಟೆ: ಕೂಡಲಸಂಗಮ ಪಂಚಮಸಾಲಿ ಪೀಠಾಧ್ಯಕ್ಷರ ಶ್ರೀಗಳ ಆರೋಗ್ಯ ದಲ್ಲಿ ದಿಢೀರ್ ಏರುಪೇರು ಕಂಡು ಬಂದ ಹಿನ್ನೆಲೆಯಲ್ಲಿ ಅವರನ್ನು ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶನಿವಾರ ಬೆಳಗಿನ ಜಾವ ಶ್ರೀಗಳಿಗೆ ತೆಲೆನೋವು, ವಾಂತಿ, ಎದೆ ನೋವು ಕಾಣಿಸಿ ಕೊಂಡಿದೆ. ಪರಿಣಾಮವಾಗಿ ಅವರು ಸುಸ್ತು ಗೊಂಡಿದ್ದಾರೆ. ಕೂಡಲೇ ಅವರನ್ನು ಬಾಗಲ ಕೋಟೆಯ ಕೆರೂಡಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತುರ್ತು ನಿಗಾ ಘಟಕದಲ್ಲಿ ಸ್ವಾಮೀಜಿಗೆ ವೈದ್ಯರಿಂದ ಚಿಕಿತ್ಸೆ ನೀಡುತ್ತಿದ್ದಾರೆ.
ಹುಬ್ಬಳ್ಳಿ: ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಜಯ ಮೃತ್ಯುಂಜಯ ಶ್ರೀಗಳ ನಡವಳಿಕೆ ಬದಲಾಗಿರುವ ಹಿನ್ನೆಲೆಯಲ್ಲಿ ಮಠಕ್ಕೆ ಪರ್ಯಾಯವಾಗಿ ಮತ್ತೋರ್ವ ಗುರುಗಳನ್ನು ನೇಮಕ ಮಾಡುತ್ತೇವೆ ಎಂದು ಶಾಸಕ ಹಾಗೂ ಪಂಚಮಸಾಲಿ ಟ್ರಸ್ಟ್ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದ್ದಾರೆ. ಮಠವನ್ನ ಸ್ವಾಮೀಜಿಗಳಿಗೆ ಇರೋದಕ್ಕೆ ಅಷ್ಟೇ ಕೊಟ್ಟಿದ್ದೇವೆ. ಆಚಾರ ವಿಚಾರ ಪ್ರಚಾರ ಮಾಡಿ ಅಂತ ಹೇಳಿದ್ದೇವೆ. ಊರೂರು ಸಂಚಾರ ಮಾಡಿ ಅಂತ ಹೇಳಿಲ್ಲ ಎಂದರು. ಶ್ರೀಗಳು ಮಠದಲ್ಲಿ ಇರುವುದು ಬಿಟ್ಟು ಬೆಳಗಾವಿ, ಬೆಂಗಳೂರು, ಹುಬ್ಬಳ್ಳಿ ಗಳಲ್ಲಿ ಮನೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿರುವ ಕಾಶಪ್ಪನವರ, ಮಠ ಮುನ್ನಡೆ ಬೇಕಾದ ಶ್ರೀಗಳು ಒಂದು ಪಕ್ಷದ ವೇದಿಕೆ ಮೇಲೆ ಕೂಡುತ್ತಾರೆ. ಅವರ ಈ ನಡವಳಿಕೆ ನೋಡಿದರೆ ಈ ಸಮಾಜವನ್ನು ಅವರೇ ಹುಟ್ಟು ಹಾಕಿದ್ದಾರೆ ಅನಿಸುತ್ತೆ ಎಂದರು. ಸಮುದಾಯದ ಅಗ್ರ ನಾಯಕರು ಸ್ವಾಮೀಜಿಗಳಿಗೆ ಹುಬ್ಬಳ್ಳಿ- ಬೆಳಗಾವಿ ನಡುವೆ ಮಠ ಕಟ್ಟೋದಾಗಿ ಹೇಳಿದ್ದಾರೆ. ಸ್ವತಃ ಶ್ರೀಗಳೇ ಮಲಪ್ರಭಾ ನದಿ ದಂಡೆ…
ಬಾಗಲಕೋಟೆ: ಚರಂತಿಮಠವನ್ನು ನಾಡಿನ ಮಠವನ್ನಾಗಿಸಿ, ಶಿವಯೋಗದ ಮೂಲಕ ಬಾಗಲಕೋಟೆಗೆ ಬೆಳಕಾದ ಚೇತನ ಪ್ರಭುದೇವರ ಕಾರ್ಯ ಮಾದರಿಯಾಗಿದೆ ಎಂದು ಬಿವಿವಿ ಸಂಘದ ಕಾರ್ಯಾಧ್ಯಕ್ಷರಾದ ಡಾ.ವೀರಣ್ಣ ಚರಂತಿಮಠ ಹೇಳಿದರು. ಅವರು ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘ ಹಾಗೂ ವಿದ್ಯಾಗಿರಿಯ ಬಿ.ವಿ.ವಿ.ಎಸ್ ಕಲಾ, ವಿಜ್ಞಾನ, ಹಾಗೂ ವಾಣಿಜ್ಯ ಸ್ವತಂತ್ರ ಪದವಿ-ಪೂರ್ವ ಮಹಾವಿದ್ಯಾಲಯದಿಂದ ಶುಕ್ರವಾರ ಇಂಜನಿಯರಿಂಗ್ ಕಾಲೇಜಿನ ನೂತನ ಸಭಾಭವನದಲ್ಲಿ ಚರಂತಿಮಠದ ಪೂಜ್ಯರು ಸಂಘದ ಅಧ್ಯಕ್ಷರಾದ ಪ್ರಭುಸ್ವಾಮಿಗಳಿಗೆ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿದ ಪ್ರಯುಕ್ತ ಶ್ರೀಗಳಿಗೆ ಗೌರವಾಭಿನಂಧನೆ ಹಾಗೂ 2025-26 ನೇ ಶೈಕ್ಷಣಿಕ ಸಾಲಿನ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ, ಪೂಜ್ಯರಿಗೆ ಸಂಘದ ಪರವಾಗಿ ಗೌರವಾಭಿನಂದನೆಗಳನ್ನು ಸಲ್ಲಿಸಿ ಮಾತನಾಡಿದರು. ಅವರು ಓಣಿಯ ಮಠದಂತೆ ಇದ್ದ ಚರಂತಿಮಠವನ್ನು ಅನೇಕ ಧಾರ್ಮಿಕ ಆಚರಣೆಯಿಂದ ಶಿವಯೋಗದ ಪ್ರವಚನಗಳ ಮೂಲಕ ಧಾರ್ಮಿಕ ವಾತವಾರಣವನ್ನು ನಿರ್ಮಾಣ ಮಾಡಿ, ನಾಡಿನ ಮಠವನ್ನಾಗಿ ಬೆಳಗಿಸಿದ ಕೀರ್ತಿ ಪೂಜ್ಯ ಪ್ರಭುಸ್ವಾಮಿಗಳಿಗೆ ಸಲ್ಲುತ್ತದೆ, ಬಾಗಲಕೋಟೆ ಹಾಗೂ ನಿಡಸೋಸಿಯ ಮಠದೊಂದಿಗೆ ಶಿಕ್ಷಣ ಸಂಸ್ಥೆಯಗಳನ್ನು…
ಗ್ಯಾಸ್ಟ್ರಿಕ್ ಸಮಸ್ಯೆಗಳು ಸಾಮಾನ್ಯ ಜೀರ್ಣ ಸಮಸ್ಯೆಗಳಾಗಿದ್ದು, ವಿಶ್ವದ ಹಲವಾರು ಜನರು ಇದರಿಂದ ಬಳಲುತ್ತಾರೆ. ಇವುಗಳಲ್ಲಿ ಆಮ್ಲ ಪಿತ್ತ, ಗ್ಯಾಸ್ಟ್ರಿಕ್, ಹೊಟ್ಟೆ ಬೊಮ್ಮು, ಹೊಟ್ಟೆ ನೋವು, ಮತ್ತು ಇತರ ಜೀರ್ಣತಂತ್ರದ ಅಸೌಕರ್ಯಗಳು ಸೇರಿವೆ. ಇವುಗಳು ದೈನಂದಿನ ಜೀವನ ಮತ್ತು ಒಟ್ಟಾರೆ ಆರೋಗ್ಯಮಟ್ಟಕ್ಕೆ ನಾನಾ ರೀತಿಯ ಪರಿಣಾಮ ಬೀರುತ್ತವೆ. ಈ ಸಮಸ್ಯೆಗಳು ಕೆಟ್ಟ ಆಹಾರ ಪದ್ಧತಿ, ಒತ್ತಡ, ಜಡ ಜೀವನಶೈಲಿ ಮತ್ತು ಕೆಲವು ವೈದ್ಯಕೀಯ ಸ್ಥಿತಿಗಳಿಂದ ಸಂಭವಿಸಬಹುದು. ಸೌಭಾಗ್ಯವಶಾತ್, ವೈದ್ಯಕೀಯ ಚಿಕಿತ್ಸೆಗಳಿಗೆ ಜೊತೆಗೆ, ಯೋಗವು ಸಹ ಪ್ರಕೃತಿ ಮತ್ತು ಸಮಗ್ರತೆಯ ದೃಷ್ಟಿಯಿಂದ ಸಮಸ್ಯೆಗಳನ್ನು ನಿರ್ವಹಿಸಲು ಮತ್ತು ಹ್ರಾಸವಾಗಿಸಲು ಉತ್ತಮ ಮಾರ್ಗವಾಗಿದೆ. ಯೋಗ ಜೀರ್ಣಕ್ರಿಯೆಯನ್ನು ಸುಧಾರಿಸುವುದು, ಒತ್ತಡವನ್ನು ಕಡಿಮೆ ಮಾಡುವುದು ಮತ್ತು ಹೊಟ್ಟೆದೈಹಿಕ ಸ್ನಾಯುಗಳನ್ನು ಬಲಪಡಿಸುವುದರಲ್ಲಿ ಸಹಾಯಮಾಡುತ್ತದೆ. ಗ್ಯಾಸ್ಟ್ರಿಕ್ ಸಮಸ್ಯೆಗಳ ಕಾರಣಗಳು: ಗ್ಯಾಸ್ಟ್ರಿಕ್ ಲಕ್ಷಣಗಳು: ಯೋಗಿಕ ಚಿಕಿತ್ಸೆ: ಗ್ಯಾಸ್ಟ್ರಿಕ್ ಸಮಸ್ಯೆಗಳು, ಅಂದರೆ ಆಮ್ಲಪಿತ್ತ, ಗ್ಯಾಸ್ಟ್ರಿಕ್, ಹೊಟ್ಟೆ ನೋವು ಇವು ಸಾಮಾನ್ಯವಾಗಿ ಕಂಡುಬರುವ ಅಸೌಕರ್ಯಗಳಾಗಿದ್ದು, ವೈಯಕ್ತಿಕ ಜೀವನಗುಣಮಟ್ಟವನ್ನು ಪ್ರಮುಖವಾಗಿ ಹಾನಿ ಮಾಡಬಹುದು. ಔಷಧಿಗಳು ತಾತ್ಕಾಲಿಕ ಪರಿಹಾರ ನೀಡಬಹುದು,…