Close Menu
    Facebook X (Twitter) Instagram YouTube
    Facebook YouTube X (Twitter) Instagram
    Sanjedarshan
    Subscribe
    • ಇದೀಗ ಬಂದ ಸುದ್ದಿ
    • ಬಾಗಲಕೋಟೆ
    • ಸಿನೆಮಾ
    • ಸಣ್ಣ ಸುದ್ದಿಗಳು
    • ಅರ್ಜಿ ಆಹ್ವಾನ
    • EPaper
    • ಲೇಖನಗಳು
    Facebook X (Twitter) Instagram
    Sanjedarshan
    Home»ಬಾಗಲಕೋಟೆ»ಅನುಚಿತ ವರ್ತನೆ ಮಾಡಿರುವ ವಕೀಲನ ಬಂಧನಕ್ಕೆ ಆಗ್ರಹ
    ಬಾಗಲಕೋಟೆ

    ಅನುಚಿತ ವರ್ತನೆ ಮಾಡಿರುವ ವಕೀಲನ ಬಂಧನಕ್ಕೆ ಆಗ್ರಹ

    ಸಂಜೆ ದರ್ಶನBy ಸಂಜೆ ದರ್ಶನOctober 9, 20251 Min Read
    ಸುಪ್ರೀಂ ಕೋರ್ಟ್

    ಬಾಗಲಕೋಟೆ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಅವರ ಮೇಲೆ ವಕೀಲರೊಬ್ಬರು ಶೂ ಎಸೆದು ಹಲ್ಲೆ ನಡೆಸಲು ಯತ್ನಿಸಿದ ದಾಳಿಯನ್ನು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ, ಜೈ ಭೀಮ ಸಂಘಟನೆ ತೀವ್ರವಾಗಿ ಖಂಡಿಸಿದೆ.

    ಗುರುವಾರ ನವನಗರದ ಜಿಲ್ಲಾಡಳಿತ ಭವನ ಎದುರು ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಮನವಿ ಪತ್ರವೊಂದನ್ನು ಸಲ್ಲಿಸಿದರು.

    ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಟೀಕೆ ಟಿಪ್ಪಣಿಯನ್ನು ಗೌರವಯುತವಾಗಿ ಸ್ವೀಕರಿಸಬೇಕು. ಅದುವೇ ಪ್ರಜಾಪ್ರಭುತ್ವ. ಸಂವಿಧಾನ ಮತ್ತು ನ್ಯಾಯಾಂಗ ವ್ಯವಸ್ಥೆಯನ್ನು ಗೌರವಿಸಬೇಕಾದ ವಕೀಲರೊಬ್ಬರು ಅನುಚಿತ ವರ್ತನೆ ಮಾಡಿರುವುದನ್ನು ಯಾರೊಬ್ಬರು ಸಮರ್ಥನೆ ಮಾಡಿಕೊಳ್ಳಲು ಸಾಧ್ಯವಿಲ್ಲ. ವಕೀಲರೊಬ್ಬರು ಅನುಚಿತವಾಗಿ ವರ್ತಿಸಿದ ವೇಳೆಯೂ ಮುಖ್ಯ ನ್ಯಾಯಮೂರ್ತಿಗಳು ತೋರಿದ ಸಂಯಮ, ಶಾಂತತೆ ,ನ್ಯಾಯದ ಮೌಲ್ಯಗಳು ತೋರಿದ ಗೌರವ ಎಲ್ಲರಿಗೂ ಮಾದರಿಯಾಗಿದೆ. ಅನುಚಿತವಾಗಿ ವರ್ತನೆ ಮಾಡಿದಂತ ವಕೀಲರನ್ನು ಕೂಡಲೇ ಬಂಧಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

    ಪ್ರತಿಭಟನೆಯಲ್ಲಿ ಹಣಮಂತ ಚಿಮ್ಮಲಗಿ, ಶಂಕ್ರಪ್ಪ ದೊಡಮನಿ, ಮಾರುತಿ ಮರೆಗುದ್ದಿ, ಮಾರುತಿ ಬಾವಿಕಟ್ಟಿ, ಲಕ್ಷ್ಮಣ ದೊಡಮನಿ, ನಾಗಪ್ಪ ದೊಡಮನಿ, ರಮೇಶ ಪೂಜಾರಿ, ಮೌನೇಶ ಜೈಮುನಿ, ಪರಶುರಾಮ ಮಾಂಗ ಸೇರಿದಂತೆ ಸಂಘಟನೆ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.

    Share. WhatsApp Facebook Twitter Pinterest LinkedIn Telegram Reddit Email Copy Link

    Related Posts

    October 10, 2025 ಬಾಗಲಕೋಟೆ

    ಇಂದಿರಾ ಕ್ಯಾಂಟಿನ್ ಬಡವರ ಪಾಲಿಗೆ ವರದಾನ: ಶಾಸಕ ಮೇಟಿ

    October 10, 2025 ಬಾಗಲಕೋಟೆ

    ಬ್ರಾಹ್ಮಣ ಸಮುದಾಯದವರಿಗೆ ಸ್ವಯಂ ಉದ್ಯೋಗಕ್ಕಾಗಿ ಸಾಲ

    October 10, 2025 ಬಾಗಲಕೋಟೆ

    ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸತ್ತಿದೆ: ಶಾಂತಗೌಡ ಪಾಟೀಲ

    October 10, 2025 ಬಾಗಲಕೋಟೆ

    ನ್ಯಾಯಾಧೀಶರ ಮೇಲೆ ಶೂ ಎಸೆತ ; ಕಾಂಗ್ರೆಸ್ ಪ್ರತಿಭಟನೆ

    October 9, 2025 ಬಾಗಲಕೋಟೆ

    ಕುರುಬರನ್ನು ಎಸ್ಟಿಗೆ ಸೇರ್ಪಡೆ ಮಾಡಲು ಸಿಎಂ ಕೊಡುಗೆ ಶೂನ್ಯ

    October 8, 2025 ಬಾಗಲಕೋಟೆ

    ಅ.10 ರಿಂದ ನಗರದಲ್ಲಿ ಹರಿದಾಸ ಹಬ್ಬ

    Facebook YouTube X (Twitter) Instagram
    © 2025 Sanjedarshan. Developed by Vikimediatec Pvt Ltd.
    ಮಹೇಶ ಅಂಗಡಿ, ಸಂಪಾದಕರು, ಸಂಜೆದರ್ಶನ ದಿನ ಪತ್ರಿಕೆ, ಶಿವಗಿರಿ ಬಡಾವಣೆ 6ನೇ ಕ್ರಾಸ್, ವಿದ್ಯಾಗಿರಿ, ಬಾಗಲಕೋಟೆ-587102. ಮೋ: 9845228092
    Privacy Policy | Terms and Conditions | Disclaimer | Affiliate Disclosure | About Us | Contact Us

    Type above and press Enter to search. Press Esc to cancel.