ಬಾದಾಮಿ: ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘ (ರಿ)ದ ತಾಲೂಕಾ ಘಟಕದ ವತಿಯಿಂದ ಜು. 27 ರಂದು ರವಿವಾರ ಬೆಳಿಗ್ಗೆ 10.30 ಗಂಟೆಗೆ ಎಸ್.ವ್ಹಿ.ಪಿ.ಸಂಸ್ಥೆಯ ಬಸವಭವನದಲ್ಲಿ ಬಣಜಿಗ ಸಮಾಜದ ತಾಲೂಕಾ ಸಮಾವೇಶ ಹಾಗೂ ನಗರ ಘಟಕ ಉದ್ಘಾಟನಾ ಸಮಾರಂಭ ಪ್ರತಿಭಾ ಪುರಸ್ಕಾರ ಹಾಗೂ ಗಣ್ಯರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಣಜಗ ಸಮಾಜದ ತಾಲೂಕಾ ಅಧ್ಯಕ್ಷ ಡಾ.ಅವಿನಾಶ ಮಮದಾಪೂರ ತಿಳಿಸಿದರು.
ಅವರು ಶನಿವಾರ ನಗರದ ಶ್ರೀ ವೀರಪುಲಿಕೇಶಿ ಸಂಸ್ಥೆಯ ಆಡಳಿತ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದರು. ಶ್ರೀ ಮ.ನಿ.ಪ್ರ. ಶಂಕರಾರೂಢ ಸ್ವಾಮಿಗಳು ಹಾಗೂ ಶ್ರೀ ರಾಮಾರೂಢ ಮಠ, ಶಿರೋಳ ಇವರು ಸಾನಿಧ್ಯ ವಹಿಸುವರು. ತಾಲೂಕಾ ಬಣಜಿಗ ಸಮಾಜದ ಅಧ್ಯಕ್ಷ ಡಾ. ಅವಿನಾಶ ಜೆ. ಮಮದಾಪೂರ ಅಧ್ಯಕ್ಷತೆ ವಹಿಸುವರು. ವೀರಪು ಲಿಕೇಶಿ ಸಂಸ್ಥೆಯ ಚೇರಮನ್ ಎ.ಸಿ. ಪಟ್ಟಣದ ಉದ್ಘಾಟಿಸುವರು. ಬಾದಾಮಿ ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ, ಸಂಸ್ಥೆಯ ನಿರ್ದೇಶಕ ಜಯದೇವ ಎಸ್. ಮಮದಾಪೂರ, ಪಿಕಾರ್ಡ ಬ್ಯಾಂಕ್ ಅಧ್ಯಕ್ಷ ಮಹಾಂತೇಶ ಜಿ. ಮಮದಾಪೂರ, ತಾಲೂಕಾ ಬಣಜಿಗ ಸಮಾಜದ ಗೌರವಾಧ್ಯಕ್ಷ ಸಿದ್ದಣ್ಣ ಆರ್. ಟೆಂಗಿನಕಾಯಿ, ಕೆರೂರ ಘಟಕದ ಬಣಜಿಗ ಸಮಾಜದ ಅಧ್ಯಕ್ಷ ಚನಮಲ್ಲಪ್ಪ ಎಂ. ಘಟ್ಟದ ಆಗಮಿಸುವರು.
ಕಾರ್ಯಕ್ರಮಕ್ಕೆ ತಾಲೂಕಿನ ಗ್ರಾಮೀಣ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಪುರಸಭೆ ಸದಸ್ಯ ನಾಗರಾಜ ಕಾಚೆಟ್ಟಿ, ಮುತ್ತಣ್ಣ ಚಿನಿವಾಲರ, ಅಪ್ಪಣ್ಣ ಪಟ್ಟಣದ, ಸಂಜು ಬರಗುಂಡಿ, ನಾಗರಾಜ ಕಡಗದ, ಎಸ್.ಬಿ.ಕಲಹಾಳ, ಬಸವರಾಜ ಟೆಂಗಿನಕಾಯಿ, ಹೊ ಬಸಪ್ಪ ಲೋಕಾಪೂರ, ಚಂದ್ರು ಕಾಚೆಟ್ಟಿ, ಸತೀಶ ಹಂಜಿ, ಚನ್ನಪ್ಪ ಪಟ್ಟಣದ, ಶಿವು ಗೋಕಾಕ, ಮುದಕಪ್ಪ ಮಣ್ಣೂರ, ಅಶೋಕ ಜವಳಿ ಹಾಜರಿದ್ದರು.
ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
ಬಾದಾಮಿ ತಾಲೂಕಿನ ಬಣಜಿಗ ಸಮಾಜದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿಗಳನ್ನು ಅಗತ್ಯ ದಾಖಲೆಗಳೊಂದಿಗೆ ಕೆರೂರ-ಬಿ.ಸಿ.ಪ್ಯಾಟಿ ಮೊ: 9481880848, ಬಾದಾಮಿ-ಎಸ್.ಕೆ. ಜವಳಗದ್ದಿ ಮೊ: 9449436618, ವ್ಹಿ.ಎಸ್. ಶೆಟ್ಟರ ಮೊ: 9448686025 ಬೇಲೂರ- ಸಾಗರ ಹರ್ತಿ ಮೊ: 8105450493, ಕುಳಗೇರಿ ಕ್ರಾಸ್- ಬಸವ ರಾಜ ಶೆಟ್ಟರ ಮೊ: 9845449182 ಸಂಪರ್ಕಿಸಿ ಹೆಸರು ನೋಂದಾಯಿಸಬೇಕು ಎಂದು ಡಾ. ಅವಿನಾಶ ಮಮದಾಪೂ ರಮನವಿಮಾಡಿದರು.