ಬಾಗಲಕೋಟೆ: ಸಂತಾನಹರಣ ಶಸ್ತ್ರ ಚಿಕಿತ್ಸೆಯಲ್ಲಿ ಮಹಿಳೆ, ಪುರುಷ ಎನ್ನುವ ತಾರತಮ್ಯ ಏಕೆ ಎಂದು ಮೇಲ್ಮನೆ ಸದಸ್ಯರಾದ ಉಮಾಶ್ರೀ ಪ್ರಶ್ನಿಸಿದ ಪ್ರಸಂಗ ನಡೆಯಿತು.
ಜಿಲ್ಲಾ ಪಂಚಾಯಿತಿ ನೂತನ ಸಭಾಭವನದಲ್ಲಿ ಶನಿವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನೆ ವೇಳೆ ಸಂತಾನಹರಣ ಚಿಕಿತ್ಸೆ ವೇಳೆ ಅಧಿಕಾರಿಗಳು ನೀಡಿದ ವಿವರಣೆಯಲ್ಲಿನ ಅಂಕಿ ಅಂಶಗಳನ್ನು ಗಮನಿಸಿದ ಅವರು, ಸಂತಾನಹರಣ ಚಿಕಿತ್ಸೆಯಲ್ಲಿ ಇಷ್ಟೊಂದು ವ್ಯತ್ಯಾಸ ಏಕೆ ಎಂದು ಪ್ರಶ್ನಿಸುವ ಜತೆಗೆ ಅಚ್ಚರಿ ವ್ಯಕ್ತಪಡಿಸಿದರು.
ಅಧಿಕಾರಿಗಳು ನೀಡಿದ ಮಾಹಿತಿಯಲ್ಲಿ ೫೦೦೦ ಕ್ಕೂ ಅಧಿಕ ಮಹಿಳೆಯರ ಸಂತಾನಹರಣ ಚಿಕಿತ್ಸೆ ನಡೆದಿದ್ದರೆ, ಕೇವಲ ೫೦ ಜನ ಪುರುಷರ ಸಂತಾನಹರಣ ಚಿಕಿತ್ಸೆ ನಡೆದಿರುವ ಅಂಶ ಬೆಳಕಿಗೆ ಬಂದಿತು. ಸಂತಾನಹರಣ ಚಿಕಿತ್ಸೆಗೆ ಗುರಿ ಏನಾದರೂ ನಿಗದಿ ಪಡಿಸಲಾಗಿದೆಯೆ ಎಂದು ಉಮಾಶ್ರೀ ಮರು ಪ್ರಶ್ನಿಸಿದಾಗ ಹಾಗೇನೂ ಇಲ್ಲ ಎನ್ನುವ ಉತ್ತರ ಬಂದಿತು.
ಸಂತಾನಹರಣ ಚಿಕತ್ಸೆಯಲ್ಲಿ ಇಷ್ಟೊಂದು ತಾರತಮ್ಯವೇ ಎಂದು ಉದ್ಗಾರ ತೆಗೆದ ಅವರು ಇದರಲ್ಲೂ ಮಹಿಳೆ ಮತ್ತು ಪುರುಷರಲ್ಲಿ ಸಮಾನತೆ ಬರಬೇಕು. ಎಲ್ಲವೂ ಮಹಿಳೆ ಎದುರಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಉಮಾಶ್ರೀ ಅವರ ಪ್ರಶ್ನೆಗೆ ಸಮಜಾಯಿಸಿ ನೀಡಲು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರು, ಮನೆಯ ಯಜಮಾನ, ಮನೆ ನಿರ್ವಹಣೆ ಜವಾವ್ದಾರಿ ಹೊತ್ತಿರುತ್ತಾನೆ. ಆತನು ಸಂತಾನಹರಣ ಶಸ್ತ್ರ ಚಿಕಿತ್ಸೆಗೆ ಒಳಗಾದಲ್ಲಿ, ಆತ ಅಶಕ್ತನಾಗುತ್ತಾನೆ ಎನ್ನುವ ಮಾತು ಜನಜನಿತವಾ ಗಿದ್ದು, ಆ ಹಿನ್ನೆಲೆಯಲ್ಲಿ ಮಹಿಳೆಯರೇ ಪುರುಷರ ಸಂತಾನಹರಣ ಚಿಕಿತ್ಸೆಗೆ ಒಪ್ಪುವುದಿಲ್ಲ ಎಂದರು.
ಈಗ ಸಮಾಜದಲ್ಲಿ ಎಲ್ಲರೂ ದುಡಿಯುತ್ತಾರೆ ಎನ್ನುವ ಮಾತು ಉಮಾಶ್ರೀ ಅವರಿಂದ ಬಂದಿತಾ ದರೂ ಸಭೆಯಲ್ಲಿದ್ದ ಶಾಸಕರು, ಸಂಸದರೆಲ್ಲ ಉಸ್ತುವಾರಿ ಸಚಿವರ ಮಾತಿಗೆ ಬೆಂಬಲ ವ್ಯಕ್ತಪಡಿಸಿ, ಈ ಬಗ್ಗೆ ಜನಜಾಗೃತಿ ಆಂದೋಲನ ನಡೆಸಬೇಕು ಎಂದಾಗ ಉಮಾಶ್ರೀ ಅವರು ಅಸಹಾಯಕತೆ ವ್ಯಕ್ತ ಪಡಿಸಿ ಮೌನಕ್ಕೆ ಶರಣಾದರು. ಬಳಿಕ ಬೇರೆ ಇಲಾಖೆ ಪ್ರಗತಿಯ ಚರ್ಚೆಆರಂಭಗೊಂಡಿತು.
ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಅವರ ಅಧ್ಯಕ್ಷತೆಯಲ್ಲಿ ಸಭೆಯು ಶನಿವಾರ ನಡೆಯಿತು. ಸಭೆಯಲ್ಲಿ ಸಂಸದ ಪಿ.ಸಿ.ಗದ್ದಿಗೌಡರ, ರಾಜ್ಯಸಭಾ ಸದಸ್ಯ ನಾರಾ ಯಣಸಾ ಭಾಂಡಗೆ, ಶಾಸಕರಾದ ಎಚ್. ವಾಯ್.ಮೇಟಿ, ಜೆ.ಟಿ.ಪಾಟೀಲ, ಸಿದ್ದು ಸವದಿ, ಪಿ.ಎಚ್.ಪೂಜಾರ, ಬಿ.ಬಿ.ಚಿಮ್ಮನಕಟ್ಟಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮೊಹಮದ್ಮ ಮೋ ಸಿನ್, ಜಿಲ್ಲಾಧಿಕಾರಿ ಸಂಗಪ್ಪ,ಸಿಇಓ ಶಶಿ ಧರ ಕುರೇರ, ಎಸ್ಪಿ ಸಿದ್ದಾರ್ಥ ಗೋಯಲ್ ಇದ್ದರು.