ಬಾಗಲಕೋಟೆ: ವೈದ್ಯ ವೃತ್ತಿ ಅತ್ಯಂತ ಮಹತ್ವವುಳ್ಳದ್ದು “ವೈದ್ಯೋ ನಾರಾಯಣ ಹರಿ” ವೈದ್ಯರನ್ನು ನಾರಾಯಣನಿಗೆ ಹೋಲಿಸಿದ್ದಾರೆ. ಹಾಗಾಗಿ ಜನರು ನಮ್ಮ ಮೇಲಿಟ್ಟಿರುವ ನಂಬಿಕೆ ಯನ್ನು ನಾವು ಉಳಿಸಿಕೊಳ್ಳಬೇಕು ಎಂದು ಡಾ. ಬಿ. ಹೆಚ್. ಕೆರೂಡಿ ಹೇಳಿದರು.
ನಗರದ ವಿದ್ಯಾ ಪ್ರಸಾರಕ ಮಂಡಳದ ಎಸ್ ಡಿ ಹೆರಂಜಲ್ ಕಲಾ, ಎಸ್ ಸಕ್ರಿ ವಾಣಿಜ್ಯ ಹಾಗೂ ಆರ್ ದೊಡ್ಡಿಹಾಳ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ವೈದ್ಯರ ದಿನ, ಪತ್ರಕರ್ತರ ದಿನ ಹಾಗೂ ಲೆಕ್ಕ ಪರಿಶೋಧಕರ ದಿನಾಚರಣೆ ಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
ಭಾರತದಲ್ಲಿ ೧೯೯೧ರಲ್ಲಿ ಈ ದಿನ ಪ್ರಾರಂಭವಾ ಯಿತು. ಶ್ರೇಷ್ಠ ವೈದ್ಯರು ಶಿಕ್ಷಣ ಪ್ರೇಮಿಗಳು, ರಾಜಕಾರಣಿಗಳೂ ಆದ ಬಿಧನೆ ಚಂದ್ರ ರಾಯ್ ಅವರ ಸವಿನೆನಪಿಗೆ ಈ ದಿನ ಆಚರಿಸಲಾಗುತ್ತದೆ. ಬಿ.ಸಿ.ರಾಯ್ ಅವರಿಗೆ ೧೯೬೧ರಲ್ಲಿ “ಭಾರತ ರತ್ನ” ನೀಡಿ ಗೌರವಿಸಲಾಗಿದೆ. ಅದು ಅವರ ಕರ್ತವ್ಯ ಪ್ರಜ್ಞೆಗೆ ಸಂದ ಗೌರವವೆಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ ಎಚ್ ಎಫ್ ಯೋಗಪ್ಪನವರ ಅವರು, ವೈದ್ಯರಾದವರು ಸಮಯ ಪ್ರಜ್ಞೆ ಹಾಗೂ ಕರ್ತವ್ಯ ಪ್ರಜ್ಞೆ ಉಳ್ಳವರಾಗಿರಬೇಕು. ಕೇವಲ ಹಣ ಮಾಡಲೆಂದು ಈ ವೃತ್ತಿಗೆ ಬಂದರೆ ರೋಗಿಗಳಿಗೆ ದ್ರೋಹ ಮಾಡಿದಂತೆ ಪ್ರಮಾಣಿಕತೆ ಮತ್ತು ತ್ಯಾಗ ಈ ವೃತ್ತಿಯ ಧರ್ಮ ಅದನ್ನು ಕಾಪಾಡಬೇಕು ಎಂದರು.
ವಿ ಪ್ರ ಮಂಡಳದ ಕಾರ್ಯಧ್ಯಕ್ಷರಾದ ಶ್ರೀಮತಿ ಶ್ರೀಲತಾ ಹೆರಂಜಲ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಡಾ. ಸುಭಾಸ ಪಾಟೀಲ, ಆನಂದ ದಲಬಂಜನ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಈ ಕಾರ್ಯಕ್ರಮ ದಲ್ಲಿ ಸುಮಾರು ೧೫ ಜನ ಖ್ಯಾತ ವೈದ್ಯರನ್ನು, ೩ ಜನ ಪತ್ರಕರ್ತರನ್ನು ಹಾಗೂ ಲೆಕ್ಕ ಪರಿಶೋದಕರನ್ನು ಸನ್ಮಾನಿಸಲಾಯಿತು. ಪದವಿ ಕಾಲೇಜಿನ ಪ್ರಾಚಾರ್ಯರಾದ ಶ್ರೀನಿವಾಸ ನರಗುಂದ ಸ್ವಾಗತಿಸಿದರು. ವಿ ಪ್ರ ಮಂಡಳದ ಗೌರವ ಕಾರ್ಯದರ್ಶಿಗಳಾದ ಡಾ. ಗಿರೀಶ ಮಾಸೂರಕರ ಅವರು ವಂದಿಸಿದರು. ವಿದ್ಯಾ ಪ್ರಸಾರಕ ಮಂಡಳದ ಕಾರ್ಯಕಾರಿ ಸಮಿತಿಯ ಸದಸ್ಯರು, ವಿವಿಧ ಅಂಗಸಂಸ್ಥೆಗಳ ಮುಖ್ಯಸ್ಥರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.