ಬಾಗಲಕೋಟೆ: ಡೇ-ಎನ್.ಆರ್.ಎಲ್. ಎಂ ಯೋಜನೆಯಡಿ ಉತ್ತಮ ಸಾಧನೆ ಮಾಡಿ ಹಾಗೂ ಕೆಲಸ ನಿರ್ವಹಿಸುತ್ತಿರುವ ಕಟಗೇರಿ ಗ್ರಾಮ ಪಂಚಾಯತ ಮಟ್ಟದ ಒಕ್ಕೂಟವು ರಾಷ್ಟ್ರ ಮಟ್ಟದಲ್ಲಿ ಆತ್ಮ ನಿರ್ಬರ್ ಸಂಘಟನಾ ಪ್ರಶಸ್ತಿಗೆ ಭಾಜನವಾಗಿದೆ.
ಬಾಗಲಕೋಟೆಯ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಶಶಿಧರ ಕುರೇರ ಅವರ ನಿರಂತರ ಮಾರ್ಗ ದರ್ಶನ, ಸಲಹೆ ಹಾಗೂ ಪ್ರೋತ್ಸಾಹದಿಂದಾಗಿ ಕರ್ನಾಟಕ ರಾಜ್ಯದಿಂದ ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಕಟಗೇರಿ ಗ್ರಾಮ ಪಂಚಾಯತಿಯ ಚಾಮುಂಡೇಶ್ವರಿ ಸಂಜೀವಿನಿ ಮಹಿಳಾ ಗ್ರಾಮ ಪಂಚಾಯತ ಮಟ್ಟದ ಒಕ್ಕೂಟಕ್ಕೆ ಆತ್ಮ ನಿರ್ಬರ್ ಸಂಘಟನಾ ಪ್ರಶಸ್ತಿ-೨೦೨೪ ನೇ ಸಾಲಿನ ಉತ್ತಮ ಒಕ್ಕೂಟದ ವಿಭಾಗದಲ್ಲಿ ರಾಷ್ಟ್ರ ಮಟ್ಟದಲ್ಲಿ ಪ್ರಥಮ ಪ್ರಶಸ್ತಿ ಲಭಿಸಿದೆ.
ಚಾಮುಂಡೇಶ್ವರಿ ಕಟಗೇರಿ ಗ್ರಾಮ ಪಂಚಾ ಯತ ಒಕ್ಕೂಟದಡಿಯಲ್ಲಿ ೧೪೦೦ ಕುಟುಂಬ ಗಳನ್ನು ಸಂಘಟಿಸಿ ೧೧೨ ಸ್ವ-ಸಹಾಯ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ಸದರಿ ಒಕ್ಕೂಟದ ಮಹಿಳೆಯರು ಯೋಜನೆಯಡಿ ಜಿಲ್ಲಾ ಪಂಚಾ ಯತದಿಂದ ಸ್ವ-ಉದ್ಯೋಗ ಕೌಶಲ್ಯ ತರಬೇತಿ ಪಡೆದುಕೊಂಡು ಸುತ್ತುನಿಧಿ, ಸಮುದಾಯ ಬಂಡವಾಳ ನಿಧಿ, ದುರ್ಬಲ ವರ್ಗದವರ ನಿಧಿ ಹಾಗೂ ಕಾರ್ಯ ಸಾಧ್ಯತಾ ಅಂತರ ನಿಧಿ ಸೇರಿ ಒಟ್ಟು ೨೫ ಲಕ್ಷ ಅನುದಾನ ಹಾಗೂ ಬ್ಯಾಂಕ ಲಿಂಕೇಜ ಮೂಲಕ ಸಾಲ ಸೌಲಭ್ಯ ಪಡೆದುಕೊಂಡು ವಿವಿಧ ಜೀವನೋಪಾಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ.
ಅಲ್ಲದೆ ಗ್ರಾಮ ಪಂಚಾಯತದಲ್ಲಿ ಘನ ತಾಜ್ಯ ನಿರ್ವಹಣೆಯನ್ನು SHG ಮಹಿಳೆಯರೆ ನಿರ್ವಹಿಸುತ್ತಿದ್ದಾರೆ SHG ಮಹಿಳೆಯರು ಗ್ರಾಮದಲ್ಲಿ ಸಾಮಾಜಿಕ ಚಟುವಟಿಕೆಗಳಾದ ಲಿಂಗತ್ವ, ಪೋಷನಾ ಹಾಗೂ ಪರಿವರ್ತನೆ ಅಭಿಯಾನ ಮೂಲಕ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿ ಸಿಕೊಂಡಿದ್ದಾರೆ. ಈ ಎಲ್ಲಾ ಕಾರ್ಯಚಟುವಟಿ ಕೆಗಳಿಂದ ರಾಷ್ಟ್ರ ಮಟ್ಟದ ಉತ್ತಮ ಸಂಘಟನಾ ಪ್ರಥಮ ಪ್ರಶಸ್ತಿ ದೊರೆತಿದೆ.
ಸದರಿ ಪ್ರಶಸ್ತಿಯನ್ನು ಸ್ವಾತಂತ್ರ ದಿನಾಚರಣೆಯ ೧೫ ನೇ ಅಗಷ್ಟ ೨೦೨೫ ಕಾರ್ಯಕ್ರಮ ಪ್ರಯುಕ್ತ ನವದೆಹಲಿಯಲ್ಲಿ ಆತ್ಮ ನಿರ್ಬರ್ ಸಂಘಟನಾ ಪ್ರಶಸ್ತಿ-೨೦೨೪ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ಕಾರಣ ಕಟಗೇರಿ ಗ್ರಾಮ ಪಂಚಾಯತ ಒಕ್ಕೂಟದ ಎಲ್ಲಾ ಪದಾಧಿಕಾರಿಗಳಿಗೆ, ಸದಸ್ಯರಿಗೆ, SHG ಮಹಿಳೆ ಯರಿಗೆ ಜಿಲ್ಲಾ ಪಂಚಾಯತ ಬಾಗಲಕೋಟೆಯಿಂದ ಅಭಿನಂದನೆಸಲ್ಲಿಸಿದ್ದಾರೆ.