ಬಾಗಲಕೋಟೆ: ಬಾಗಲಕೋಟೆ ಯೂನಿಯನ್ ಆಫ್ ಮರ್ಚಂಟ್ಸ್ ಆಂಡ್ ಎಂಟರ್ ಪ್ರೈಸಸ್ ಅಸೋಸಿಯೇಷನ್ದಿಂದ ಬಾಗಲಕೋಟೆ ನಗರದ ವ್ಯಾಪಾರ ಪುನ ಚೇತರಿಸಲು 200 ಎಕರೆ ಭೂಮಿಯನ್ನು ವ್ಯಾಪಾರಕ್ಕಾಗಿ ಮೀಸಲಿಡಲು ಬೇಡಿಕೆ ಇಟ್ಟಿದ್ದು ಅದಕ್ಕೆ ಸ್ಪಂದಿಸಿರುವ ಬಾಗಲಕೋಟೆ ಶಾಸಕರಾದ ಎಚ್.ವಾಯ್. ಮೇಟಿ ಹಾಗೂ ಮುಖಂಡರಾದ ಹೊಳಬಸು ಶೆಟ್ಟರ ಅವರಿಗೆ ವ್ಯಾಪಾರಸ್ಥರ ನಿಯೋಗ ಅಭಿನಂದನಾ ಪತ್ರ ಸಲ್ಲಿಸಿತು.
ಶನಿವಾರ ನಗರದ ಶಾಸಕರ ನಿವಾಸದಲ್ಲಿ ಯೂನಿಯನ್ ಆಫ್ ಮರ್ಚಂಟ್ಸ್ ಆಂಡ್ ಎಂಟರ್ ಪ್ರೈಸಸ್ ಅಸೋಸಿಯೇಷನ್ದ ಪದಾಧಿಕಾರಿಗಳು ಭೇಟಿ ಮಾಡಿ ಸನ್ಮಾನಿಸಿದರು.
ಈ ವೇಳೆ ಮಾತನಾಡಿದ ಶಾಸಕ ಎಚ್.ವಾಯ್.ಮೇಟಿ, ಯುನಿಟ್ -೩ ರಲ್ಲಿ ಒಂದು ಸುಸಜ್ಜಿತ ಮತ್ತು ಅತ್ಯಾಧುನಿಕ ಮಾರುಕಟ್ಟೆಯನ್ನು ಶೀಘ್ರದಲ್ಲಿಯೇ ಕಾರ್ಯರೂಪಕ್ಕೆ ತರಲು ಸಂಪೂರ್ಣ ಪ್ರಯತ್ನ ಮಾಡುವುದಾಗಿ ಹೇಳಿದರು.
ಈ ವೇಳೆ ವ್ಯಾಪಾರಸ್ಥರ ನೀಯೋಗದ ಅಧ್ಯಕ್ಷರಾದ ರವಿ ಕುಮಟಗಿ, ಉಪಾಧ್ಯಕ್ಷರಾದ ಶ್ರೀನಿವಾಸ ಬಳ್ಳಾರಿ, ರಾಮ ಮುಂದಡಾ, ಕಾರ್ಯದರ್ಶಿ ವಿರುಪಾಕ್ಷ ಅಮೃತಕರ, ಬಾಳು ಉಳ್ಳಾಗಡ್ಡಿ, ಮುತ್ತು ಜೋಳದ, ಪುಕರಾಜ್ ಬೇತಾಳ, ನಾಗರಾಜ್ ಕುಪ್ಪಸ್ತ, ಆಂಜನೇಯ ಕಾಗೆ, ನಾಗರಾಜ ದಳವಾಯಿ, ಮಕ್ತುಮಸಾಬ ದೊಡಮನಿ ಸೇರಿದಂತೆ ವ್ಯಾಪಾರಸ್ಥರ ಸಂಘದ ಪದಾಧಿಕಾರಿಗಳು ಇದ್ದರು.