ಬಾಗಲಕೋಟೆ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೈದಿಯಂತೆ ಅಪಮಾನಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಟೋ ಹರಿಬಿಟ್ಟಿದ್ದ ಜಿಲ್ಲೆಯ ಕಲಾದಗಿಯ ಯುವಕನನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ.
ಮೊಹ್ಮದ ಅಜೀಜ್ ಅಬ್ದುಲಸಾಬ್ ರೋಣ(27) ಎಂಬಾತ ಸಾಮಾಜಿಕ ಜಾಲತಾಣದಲ್ಲಿ ಮೋದಿ ಅವರನ್ನು ಕೇಸರಿ ಸಮವಸ್ತ್ರದಲ್ಲಿ ಕೈದಿಯಂತೆ ಹಾಗೂ ಎಐಎಂಎಐಎಂ ಮುಖ್ಯಸ್ಥ ಅಸಾಸುದ್ದೀನ್ ಓವೈಸಿಯನ್ನು ಪೋಲಿಸ್ ವೇಷದಲ್ಲಿ ಬಿಂಬಿಸಿ ಪೋಟೋ ಹಾಕಿದ್ದ.
ಇದನ್ನು ಗಮನಿಸಿದ ಕಲಾದಗಿ ಪೋಲಿಸರು ಮೊಹ್ಮದ ಅಜೀಜ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆಂದು ತಿಳಿದುಬಂದಿದೆ.