ಬಾಗಲಕೋಟೆ: ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಅಡಿ ಬಾಗಲಕೋಟೆಯಿಂದ ಸೀಗಿಕೇರಿ ನೀರಲಕೇರಿ 20 ಕೋಟಿ ರೂ ವೆಚ್ಚದ ರಸ್ತೆಯ ಅಭಿವೃದ್ಧಿಯ ಭೂಮಿ ಪೂಜೆಯನ್ನು ಶಾಸಕ, ಬಿಟಿಡಿಎ ಅಧ್ಯಕ್ಷ ಎಚ್.ವಾಯ್. ಮೇಟಿ ನೆರವೇರಿಸಿದರು.
ನಗರದ ಸಾನ್ವಿ ಹೋಂಡಾ ಬಳಿ ನಡೆದ ಕಾರ್ಯಕ್ರಮದಲ್ಲಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಹಳೇ ಎಪಿಎಂಸಿ ಸ್ಮಶಾನ 5 ಕೋಟಿ ರೂ ವೆಚ್ಚದಲ್ಲಿ ರಸ್ತೆಯ ಅಭಿವೃದ್ಧಿಯ ಕಾಮಗಾರಿಯು ಶೀಘ್ರ ಪ್ರಾರಂಭಿಸಲಾಗುವುದು ಎಂದರು. ರಾಜೀವ ಗಾಂಧಿ ವೈದ್ಯಕೀಯ ವಿಶ್ವವಿದ್ಯಾಲಯದ ಅಡಿಯಲ್ಲಿ ವೈದ್ಯಕೀಯ ಕಾಲೇಜಿನ ಅಡಿಗಲ್ಲು ಕಾರ್ಯಕ್ರಮ ಶೀಘ್ರದಲ್ಲಿ ನೆರವೇರಲಿದ್ದು, ಬಿಟಿಡಿಎ ವತಿಯಿಂದ 3 ನೇ ಯುನಿಟನಲ್ಲಿ 2೦೦ ಎಕರೆ ಪ್ರದೇಶದಲ್ಲಿ ವಾಣಿ ಜ್ಯ ಚಟುವಟಿಕೆಯ ಮೀಸಲಿಡಲಾಗಿದ್ದು ಭೂ ವರಿವರ್ತನೆಗೆ ಅನುಮತಿಯ ಸಿಕ್ಕಿದೆ ಎಂದರು.
ಹಲವಾರು ಅಭಿವೃದ್ಧಿಯ ಯೋಜನೆಗಳ ಅನುಷ್ಠಾನ ಮಾಡುವ ಮೂಲಕ ಬಾಗಲ ಕೋಟೆಯ ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ರೂಪಿಸಲಾಗುವುದು ಎಂದು ಹೇಳಿದರು.
ಬಸವೇಶ್ವರ ಬ್ಯಾಂಕಿನ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ನಿಂಗನಗೌಡ ಪಾಟೀಲ, ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷ ನಾಗರಾಜ ಹದ್ಲಿ, ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ರಾಜು ಮನ್ನಿಕೇರಿ, ಮುಖಂಡರಾದ ಚಂದ್ರಶೇಖರ ರಾಠೋ ಡ, ದ್ಯಾಮಣ್ಣ ಗಾಳಿ, ಬ್ಲಾಕ್ನ ಅಧ್ಯಕ್ಷ ಅಬ್ದುಲರಜಾಕ ಬೆಣೂರ, ರೇಣುಕಾ ನ್ಯಾಮಗೌಡ, ಹನಮಂತ ರಾಕುಂಪಿ, ಮಂ ಜುಳಾ ಭುಸಾರೆ, ರೇಣುಕಾ ನಾರಾಯ ಣಕರ, ವಿರೇಶ ಹುಂಡೆಕಾರ, ಅಂದಾ ನೆಪ್ಪಬ್ಯಾಡಗಿ ಅನೇಕರು ಇದ್ದರು.