ಬಾಗಲಕೋಟೆ ; ಬಾಗಲಕೋಟೆ ನಗರಕ್ಕೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನಗರೋತ್ಥಾನ -೪ ಅಡಿಯಲ್ಲಿ ಕೈಗೊಳ್ಳಲಾಗಿದೆ. ಗುತ್ತಿಗೆದಾ ರರು ಗುಣಮಟ್ಟದ ಕಾಮಗಾರಿ ನಡೆಸಬೇಕು ಎಂದು ಶಾಸಕ, ಬಿಟಿಡಿಎ ಅಧ್ಯಕ್ಷ ಎಚ್.ವೈ.ಮೇಟಿ ಹೇಳಿದರು.
ನಗರದ ಮಹಾವೀರ ರಸ್ತೆಯಲ್ಲಿರುವ ಮಾರುಕಟ್ಟೆ ಪ್ರಾರಂಗಣದಲ್ಲಿ ಶನಿವಾರ ನಗರಸಭೆ, ನಗರಾಭಿವೃದ್ಧಿ ಕೋಶಿ ಅಡಿಯಲ್ಲಿ ನಗರೋ ತ್ಥಾನ -೪ ಅಡಿಯಲ್ಲಿ ೩.೩೦ ಕೋಟಿ ರೂ. ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿ ಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಮಾರುಕಟ್ಟೆ ಪ್ರದೇಶದ ಒಳಗೆ ಇರುವ ಅಂಗಡಿ ಮುಂಗಟ್ಟುಗಳನ್ನು ಅಭಿವೃದ್ಧಿ ಪಡಿಸಿ ಸುಸಜ್ಜಿತ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಸಾರ್ವ ಜನಿಕರು, ತರಕಾರಿ ಮಾರಾಟ ಗಾರರು ಇದರ ಸದು ಪಯೋಗ ಪಡೆದುಕೊಳ್ಳಬೇಕು. ಇದರ ಜೊತೆಗೆ ೧೦ ಅಂಗ ನವಾಡಿ, ಗ್ರಂಥಾಲ ಯಗಳು, ಸೋಲಾರ ಲೈಟ ಸೇರಿದಂತೆ ವಿವಿಧ ಕಾಮಗಾರಿಗೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅನುದಾನ ನೀಡಿದೆ. ಅಚ್ಚುಕಟ್ಟಾದ ಕೆಲಸ ಆಗಬೇಕು. ಒಟ್ಟಾರೆ ಬಾಗಲ ಕೋಟೆ ನಗರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.
ವಿ.ಪ ಸದಸ್ಯ ಪಿ.ಎಚ್ .ಪೂಜಾರ ಮಾತನಾಡಿ, ಮುಳ ಗಡೆ ಹೊಂದಿರುವ ಬಾಗಲ ಕೋಟೆಯಲ್ಲಿ ಮಾರುಕಟ್ಟೆ ಚಟುವಟಿಕೆಗಳು ಮೊದಲಿನಂತೆ ಬರಬೇಕು. ಇದರಿಂದ ಸಹಜ ಸ್ಥಿತಿಗೆ ಬಾಗಲಕೋಟೆ ಬರುವಂತಾಗಬೇಕು. ಸರ್ಕಾರ ಕೈಗೊಳ್ಳುವ ಕಾಮಗಾರಿಗಳು ಗುಣಮಟ್ಟದಿಂದ ಕೂಡಿg ಬೇಕು. ಅಧಿಕಾರಿಗಳು, ಗುತ್ತಿಗೆ ದಾರರು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದರು.
ನಗರಸಭೆ ಅಧ್ಯಕ್ಷೆ ಸವಿತಾ ಲೆಂಕೆನ್ನವರ, ಸದಸ್ಯರಾದ ಸರಸತ್ವಿ ಕುರಬರ, ರೇಖಾ ಕಲಬುರಗಿ, ಭುವನೇ ಶ್ವರಿ ಕುಪ್ಪಸ್ತ, ಲಕ್ಷ್ಮೀ ಚವ್ಹಾಣ್, ಪ್ರೇಮಾ ಅಂಬಿಗೇರ, ಮುಖಂ ಡರಾದ ಹನುಮಂತ ರಾಕುಂ ಪಿ, ನಾಗರಾಜ ಹದ್ಲಿ, ಗೋವಿ ಂದ ಬಳ್ಳಾರಿ, ಕಿಶೋರ ಸುರ ಪುರ, ಶಂಕರ ನಾಯಕ, ರಜಾ ಕ ಬೆನ್ನೂರ, ಮಲ್ಲು ವಡಗೇರಿ, ಸಿಕಂದ್ರರ ಅಥಣಿ, ರಾಜು ಮನ್ನಿಕೇರಿ,ಪೌರಾಯುಕ್ತ ವಾಸ ಣ್ಣ, ಅಧಿಕಾರಿ ಗಳಾದ ಖಾಜಿ, ಸಾರ್ವನ್ ಮತ್ತಿತರರಿದ್ದರು.