ಬಾಗಲಕೋಟೆ ; ಸ್ಥಳೀಯ ಶಾಸಕ, ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ವಾಯ್.ಮೇಟಿ ಅವರು ಶನಿವಾರ ಸಂಜೆ ಬಿಟಿಡಿಎ ಕಾಮಗಾರಿಗಳನ್ನು ಪರಿಶೀಲಿಸಿದರು.
ನವನಗರದ ಯುನಿಟ್ -2 ರಲ್ಲಿ ಹಿಂದೆ ನಡೆದ ಕಾಮಗಾರಿಗಳು, ಬಿಟಿಡಿಎ ಕಟ್ಟಡಗಳ ಪರಿಸ್ಥಿತಿ ಬಗ್ಗೆ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಬಿಟಿಡಿಎ ಮುಖ್ಯ ಅಭಿಯಂತರರಾದ ಬಸವರಾಜ, ಕಾರ್ಯನಿರ್ವಾಹಕರಾದ ವಿಜಯಶಂಕರ ಹೆಬ್ಬಳ್ಳಿ, ಎಸ್.ಎಸ್.ಡೊಳ್ಳಿನ, ಸಕಾನಿ ಎಸ್.ಆರ್.ತೆಗ್ಗಿ, ವಟವಟಿ, ಹಾಲವರ ಇನ್ನೀತರ ಅಧಿಕಾರಿಗಳು ಹಾಗೂ ಮುಖಂಡರಾದ ನಾಗರಾಜ ಹದ್ಲಿ, ಹೊಳಬಸು ಶೆಟ್ಟರ, ರಜಾಕ ಬೆನ್ನೂರ ಸೇರಿದಂತೆ ಅನೇಕರು ಇದ್ದರು.