ಬಾಗಲಕೋಟೆ ; ತಮ್ಮ ನಡೆ, ನುಡಿ ಜೀವನದ ಮೂಲಕ ಜಾತೀಯತೆಯ ಸಂಕುಚಿತ ಮನೋಭಾವವನ್ನು ಹೊರಗೆ ಹಾಕಿ ಸಮ ಸಮಾಜ ನಿರ್ಮಾಣದ ಕನಸನ್ನು ಕಂಡವರು ಭಕ್ತ ಕನಕದಾಸರು ಎಂದು ಶಾಸಕರು ಆಗಿರುವ ಬಿಟಿಡಿಎ ಅಧ್ಯಕ್ಷ ಎಚ್.ವಾಯ್.ಮೇಟಿ ಹೇಳಿದರು.
ನವನಗರದ ಕಲಾಭವನದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಭಕ್ತ ಕನಕದಾಸರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ಜ್ಯಾತ್ಯಾತೀತತೆಯ ಭಾವ ಎಲ್ಲರಲ್ಲಿ ತರುವ ಸಂದೇಶ ಭಕ್ತ ಕನಕದಾಸರದಾಗಿತ್ತು. ಇಂತಹ ಮಹಾತ್ಮರ ಜೀವನ ಶೈಲಿ ಹಾಗೂ ಆದರ್ಶಗಳನ್ನು ಯುವಕರು, ವಿದ್ಯಾರ್ಥಿಗಳು ಅಳವಡಿಸಿಕೊಂಡಾಗ ಮಾತ್ರ ಜಯಂತಿ ಆಚರಿಸಿದ್ದಕ್ಕೂ ಸಾರ್ಥಕತೆ ಬರುತ್ತದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಮಾತನಾಡಿ ಹುಟ್ಟಿನ ಮೇಲೆ ನಿಂತಿರುವ ಸಮಾಜ ಇವತ್ತಿಗೂ ಇದೆ. ಅದನ್ನು ಪರಿವರ್ತನೆ ಮಾಡಿ ಎಲ್ಲರೂ ಒಂದೇ ಎಂಬ ತತ್ವವನ್ನು ಎಲ್ಲರಲ್ಲೂ ಪ್ರಸರಿಸಲು ಸಮ ಸಮಾಜದ ನಿರ್ಮಾಣ ಮಾಡಬೇಕೆಂಬ ನಿಟ್ಟಿನಲ್ಲಿ ಆ ಹೊತ್ತಿಗೆ ಕನಕದಾಸರು ಮಾಡಿದ ಒಂದು ಕೆಲಸ ಇವತ್ತಿಗೂ ಕೂಡಾ ಪ್ರಸ್ತುತವಾಗಿದೆ. ಅವರ ಕೆಲಸವನ್ನು ನಾವು ಅವರ ಕೀರ್ತನೆಗಳಲ್ಲಿ, ಸಾಹಿತ್ಯಗಳಲ್ಲಿ ಅವರ ಬದುಕಿನಲ್ಲಿ ಅದ್ಯಯನ ಮಾಡಿ ನಮ್ಮ ಸಮಾಜದ ಒಳತಿಗಾಗಿ ಬಳಸಿಕೊಳ್ಳುವ ಅನಿವಾರ್ಯತೆ ಇದೆ ಎಂದರು.
ಶಿಕ್ಷಣ ಹರಡುವುದು ಕೂಡಾ ಇವತ್ತಿಗೂ ಜಾತಿಯತೆಯ ಸೊಂಕು ಕಡಿಮೆಯಾಗಿಲ್ಲ. ಅದು ಮತ್ತಷ್ಟು ಜಾಸ್ತಿಯಾಗಿದೆ. ಆ ನಿಟ್ಟಿನಲ್ಲಿ ಕನಕದಾಸರು ವಾಸ ಮಾಡುತ್ತಿದ್ದ ಪರಿಸ್ಥಿತಿ ಹೇಗಿತ್ತು. ಅಂತಹ ಪರಿಸ್ಥಿತಿಯಲ್ಲಿ ಅವರ ಒಂದು ಸ್ವಂತ ಪರಿಶ್ರಮದಿಂದ ಅಧ್ಯಯನ ಮಾಡಿ ಜಾತಿ ಎಂಬುವ ಅನಿಷ್ಟ ಪದ್ದತಿಯಿಂದ ಅವರಲ್ಲಿ ಏನು ಪರಿವರ್ತನೆ ಮಾಡಲು ಕಂಡುಕೊಂಡು ಅದನ್ನು ಕೀರ್ತನೆಯಲ್ಲಿ, ಸಾಹಿತ್ಯದಲ್ಲಿ ಬದುಕಿನಲ್ಲಿ ನಮ್ಮ ಮುಂದೆ ಸಾಧರ ಪಡಿಸಿ ಹೋಗಿದ್ದಾರೆ ಎಂದರು. ಅವರ ಮೂರ್ತಿ ಪೂಜೆಗಿಂತ ಅವರ ತತ್ವ ಸಿದ್ದಾಂತ ಅನುಸರನೆ ದೈನಂದಿನ ಜೀವನದಲ್ಲಿ ಆಗಬೇಕು ಎಂದರು.
ಉಪನ್ಯಾಸಕರಾಗಿ ಆಗಮಿಸಿದ್ದ ಯಕ್ಕುಂಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಡಾ.ವೈ.ಎಂ.ಯಾಕೊಳ್ಳಿ ಮಾತನಾಡಿ ದಾಸರಲ್ಲಿ ಶ್ರೇಷ್ಟರಾದವರು ಕನಕದಾಸರಾಗಿದ್ದು, ಇನ್ನೊಬ್ಬರ ಹಸಿವು ನೋವನ್ನು ತಮ್ಮ ಹಸಿವು, ನೋವೆಂದೇ ತಿಳಿದು ಸಮಾಜದಲ್ಲಿನ ಜಾತಿ ವ್ಯವಸ್ಥೆ ತೊಡೆದುಹಾಕು ಶ್ರಮಿಸಿದವರು. ತಮ್ಮ ಕೀರ್ತನೆಗಳ ಮೂಲಕವೇ ಅರಿವು ಮೂಡಿಸಲು ಮುಂದಾಗಿದ್ದರು. ಇಂದಿಗೂ ಕನಕದಾಸರ ಆದರ್ಶ ತತ್ವಗಳು ಬದುಕಿಗೆ ನಿಚ್ಛಳ ಮಾರ್ಗವನ್ನು ತೋರಿಸುತ್ತವೆ ಎಂದರು.
ಈ ಸಂದರ್ಭದಲ್ಲಿ ಖಾಸಗಿ ಹಾಗೂ ಜಿಲ್ಲಾಡಳಿತ ಸಹಯೋಗದಲ್ಲಿ ಪ್ರತಿ ವರ್ಷ ನೀಡಲಾಗುತ್ತಿರುವ ಕನಕಸಿರಿ ಪ್ರಶಸ್ತಿಗೆ ಆಯ್ಕೆಯಾದ ಹಾವೇರಿ ಜಿಲ್ಲೆಯ ಭರಡಿ ಗುತ್ತಲ ಗ್ರಾಮದ ಡಾ.ಲಿಂಗದಳ್ಳಿ ಹಾಲಪ್ಪ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಸವಿತಾ ಲೇಂಕಣ್ಣವರ, ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ, ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ನಿವೃತ್ತ ಕೃಷಿ ಅಧಿಕಾರಿ ಎಚ್.ಬಿ.ಗೊರವರ ಸೇರಿದಂತೆ ಸಮುದಾಯದ ಮುಖಂಡರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ ಸ್ವಾಗತಿಸಿದರು. ಸಂಜಯ ನಡುವಿನಮನಿ ಕಾರ್ಯಕ್ರಮ ನಿರೂಪಿಸಿ ಕೊನೆಗೆ ವಂದಿಸಿದರು.