ಬಾಗಲಕೋಟೆ: ಬೀದಿ ದೀಪ ರೀಪೇರಿ ಸಲುವಾಗಿ ನಿಂತ ವಾಹನಕ್ಕೆ ಅಪಘಾತ ಮಾಡಿ ರಿಪೇರಿ ಮಾಡಲು ಏಣಿ ಮೇಲೆ ಹತ್ತಿ ಬೀದಿ ದೀಪ ರೀಪೇರಿ ಮಾಡುತ್ತಿದ್ದ ವ್ಯಕ್ತಿಯ ಮರಣಕ್ಕೆ ಕಾರಣರಾದ ಕಾರು ಚಾಲಕನಿಗೆ ದಂಡ ಹಾಗೂ ಶಿಕ್ಷೆ ವಿಧಿಸಿ ಪ್ರಧಾನ ಎಂ.ಎಫ್.ಸಿ ನ್ಯಾಯಾಲಯ ತೀರ್ಪು ನೀಡಿದೆ.
ಸಿದ್ದಪ್ಪ ಮಳಿಯಪ್ಪ ಬದ್ನೂರ (24) ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯಾಗಿದ್ದು, ಅಪಘಾತ ಪಡಿಸಿದ ಕಾರು ಚಾಲಕ ರಂಗಪ್ಪ ರಾಮಪ್ಪ ಪೂಜಾರ ನಿಷ್ಕಾಳಜಿಯಿಂದ ಮಾನವೀಯ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಅಪಘಾತ ಪಡಿಸಿದ್ದು, ಅಪಘಾತ ಒಳಗಾದ ವ್ಯಕ್ತಿಯನ್ನು ಬಾಗಲಕೋಟೆ ಕೆರೂಡಿ ಆಸ್ಪತ್ರೆಗೆ ದಾಖಲಿಸಿದಾಗ ಚಿಕಿತ್ಸೆ ಫಲಕಾರಿಯಾಗದೇ ವ್ಯಕ್ತಿ ಮೃತಪಟ್ಟಿರುತ್ತಾರೆ. ಈ ಕುರಿತು ಬಾಗಲಕೋಟೆ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು.
ವಿಚಾರಣೆ ನಡೆಸಿದ ಪ್ರಧಾನ ಎಮ.ಎಫ್.ಸಿ ನ್ಯಾಯಾಲಯ ಆರೋಪಿಗೆ ಕಲಂ 279 ರಡಿ 3 ತಿಂಗಳ ಶಿಕ್ಷೆ, 1 ಸಾವಿರ ರೂ.ದಂಡ, 304(ಎ) ಅಡಿ 1 ವರ್ಷ ಕಾರಾವಾಸ ಶಿಕ್ಷೆ 5 ಸಾವಿರ ರೂ. ದಂಡ ಮತ್ತು 187 ಎಂ.ವಿ ಕಾಯ್ದೆಯಡಿ 1 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ. ಸಹಾಯಕ ಸರಕಾರಿ ಅಭಿಯೋಜಕಿ ಶಾರದಾ ಬಾದಾಮಿ ಪ್ರಕರಣದ ವಾದ ಮಂಡಿಸಿದ್ದಾರೆ.